ವಾಡಿ; ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಶುಕ್ರವಾರ ದಂದು ಬಿಜೆಪಿ ಲೋಕಸಭಾ ಅಭ್ಯರ್ಥಿ ಡಾ ಉಮೇಶ್ ಜಾಧವ ಅವರು ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗುವ ಹಿನ್ನೆಲೆಯಲ್ಲಿ ಪಕ್ಷದ ಪ್ರಮುಖರ ಪೂರ್ವಭಾವಿ ಸಭೆ ನಡೆಯಿತು.
ಈ ವೇಳೆ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ ಹತ್ತು ವರ್ಷಗಳಿಂದ ದೇಶದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ಹಾಗೂ ಸಾಮಾನ್ಯ ಜನರ ಬದುಕನ್ನು ಹಸನಾಗಿಸುವ ಕೆಲಸವನ್ನು ಬಿಜೆಪಿ ನೇತೃತ್ವದ ಮೋದಿ ಸರಕಾರ ಮಾಡಿದ್ದು, ಈಗ ಮತ್ತೊಮ್ಮೆ ಕೇಂದ್ರದಲ್ಲಿ ಮೋದಿಯವರ ನೇತೃತ್ವದಲ್ಲಿ ಸರಕಾರ ರಚನೆಯಾಗುವುದು ಬಹುತೇಕ ಖಚಿತವಾಗಿದೆ. ಭಾರತವನ್ನು ವಿಶ್ವಗುರುವಾಗಿಸುವ ನಿಟ್ಟಿನಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೆ ಬರುವುದರ ಜೊತೆಗೆ ಡಾ ಉಮೇಶ್ ಜಾಧವ ಅವರನ್ನು ಅತಿ ಹೆಚ್ಚಿನ ಬಹುಮತದಿಂದ ಆಯ್ಕೆಮಾಡಿ ಇತಿಹಾಸ ಸೃಷ್ಟಿಮಾಡಬೇಕಾಗಿದೆ ಎಂದರು.
ಚುನಾವಣೆಯಲ್ಲಿ ಯಶಸ್ವಿಗಾಗಿ ಬೂತ್ ಮಟ್ಟದ ಕಾರ್ಯಕರ್ತರ ಮಹತ್ವದ ಸಭೆ ನಡೆಸಲಾಗುತ್ತಿದೆ. ಚುನಾವಣೆಯಲ್ಲಿ ಕಾರ್ಯಕರ್ತರ ಕಾರ್ಯ ಮತ್ತು ಜವಾಬ್ದಾರಿ ಬಗ್ಗೆ ಚರ್ಚಿಸಲಾಗುವುದು. ಬೂತ್ ಗೆದ್ದು, ದೇಶ ಗೆಲ್ಲುವ ಗುರಿ ನಮ್ಮದಾಗಿದೆ,ಆ ರೀತಿಯಲ್ಲಿ ನಾವು ಪಕ್ಷದ,ಹಿರಿಯರ ಸಲಹೆ ಸೂಚನೆಗಳನ್ನು ಅನುಸರಿಸಿ ಶ್ರಮಿಸಬೇಕಾಗಿದೆ ಆದ್ದರಿಂದ ಬೂತ್ ಮಟ್ಟದ ಎಲ್ಲಾ ಕಾರ್ಯಕರ್ತರು,ಮುಖಂಡರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿ ಯಶಸ್ವಿಗೊಳಿಸಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಎಸ್ ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್, ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ ಮುಖಂಡರಾದ ರಾಮಚಂದ್ರ ರಡ್ಡಿ,ಹರಿ ಗಲಾಂಡೆ,ಭೀಮರಾವ ದೊರೆ,ರಮೇಶ್ ಕಾರಬಾರಿ,ಶರಣಗೌಡ ಚಾಮನೂರ,ಅಶೋಕ ಪವಾರ, ಗಿರಿಮಲ್ಲಪ್ಪ ಕಟ್ಟಿಮನಿ,ಪ್ರಕಾಶ ಪುಜಾರಿ,ರಿಚರ್ಡ್ ಮಾರೆಡ್ಡಿ,ಶಿವಶಂಕರ ಕಾಶೆಟ್ಟಿ, ಸುಭಾಷ ವರ್ಮಾ,ತುಕಾರಾಮ ರಾಠೋಡ,ಅಂಬದಾಸ ಜಾಧವ,ಅಯ್ಯಣ್ಣ ದಂಡೋತಿ,ಸಿದ್ದೇಶ್ವರ ಚೊಪಡೆ, ಭರತ ರಾಠೋಡ, ಅರ್ಜುನ ದಹಿಹಂಡೆ,ಮಹೇಶ್ ಕುರಕುಂಟ,ದಿಲೀಪ ರಾಠೋಡ, ವಿಜಯ ಬಾಬು,ರಮೇಶ ಜಾಧವ,ವಿಶ್ವರಾಧ್ಯ ತಳವಾರ, ಆನಂದ ಇಂಗಳಗಿ,ಉಮಾಬಾಯಿ ಗೌಳಿ, ಶರಣಮ್ಮ ಯಾದಗಿರಿ, ನಿರ್ಮಲ ಇಂಡಿ,ಅನ್ನಪೂರ್ಣ ದೊಡ್ಡಮನಿ ಸೇರಿದಂತೆ ಅನೇಕರು ಇದ್ದರು.