ದೈಹಿಕ ಚಟುವಟಿಕೆಯ ಮುಂದುವರಿದ ಭಾಗವೇ ಕ್ರೀಡೆ

0
64

ಶಹಾಬಾದ: ಗುಲ್ಬರ್ಗ ಮಾದಿಗ ಪ್ರೀಮಿಯರ್ ಲೀಗ್ ವತಿಯಿಂದ ಡಾ.ಬಾಬು ಜಗಜೀವನ ರಾಮ್ ಅವರ 117 ನೇ ಜಯಂತಿ ಅಂಗವಾಗಿ ಕ್ರಿಕೆಟ್ ಪಂದ್ಯಾಟವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಾದಿಗ ಸಮಾಜದ ಮುಖಂಡರಾದ ಶಾಮ್ ನಾಟೇಕಾರ ಮಾತನಾಡಿ, ದೈಹಿಕ ಚಟುವಟಿಕೆಯ ಮುಂದುವರಿದ ಭಾಗವೇ ಕ್ರೀಡೆ, ಪ್ರತಿಯೊಬ್ಬರೂ ಚಿಕ್ಕವಯಸ್ಸಿನಿಂದಲೇ ಕ್ರೀಡೆಯ ಬಗ್ಗೆ ಆಸಕ್ತಿ ಹಾಗೂ ಮಹತ್ವವನ್ನು ಅರಿತುಕೊಳ್ಳಬೇಕಾದ ಅಗತ್ಯವಿದೆ
ಕ್ರೀಡಾಕೂಟಗಳ ಮಹತ್ವವನ್ನು ಅರಿತು ಕ್ರೀಡೆಗಳನ್ನು ಅಬಿವೃದ್ಧಿಪಡಿಸುವ ಮನೋಬಾವ ಬೆಳೆಸಿಕೊಂಡು ಇಂದಿನ ಯುವಜನತೆಯು ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢ್ಥರಾಗಬೇಕೆಂದರು.ಕ್ರೀಡಾಭಿಮಾನಿಗಳನ್ನು ಕ್ರೀಡಾಂಗಣದಲ್ಲಿ ಹಿಡಿದಿಟ್ಟುಕೊಳ್ಳುವ ಶಕ್ತಿ ಕ್ರಿಕೆಟ್ ಪಂದ್ಯಾವಳಿಗಿದೆ. ಕ್ರೀಡಾಭಿಮಾನಿಗಳಿಗೆ ಹಬ್ಬದ ವಾತಾವರಣವೇ ಸೃಷ್ಟಿಯಾಗಲಿದೆ. ಹಾಗಾಗಿ ಕ್ರೀಡಾಪಟುಗಳು ಕ್ರೀಡಾ ಮನೋಭಾವನೆಯಿಂದ ಭಾಗವಹಿಸಿ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕೆಂದರು.

Contact Your\'s Advertisement; 9902492681

ಈ ಟೂರ್ನಿಯಲ್ಲಿ ಸುಮಾರು 22 ಟೀಮ್‍ಗಳು ಭಾಗವಹಿಸಿದ್ದವು. ಈ ಕ್ರೀಕೇಟ್ ಪಂದ್ಯಾಟದಲ್ಲಿ ಶಹಾಬಾದನ ಆರ್ಮಿ ಸಿಸಿ ತಂಡ ಗೆಲುವು ಸಾಧಿಸಿದೆ.ಈ ಸಂದರ್ಭದಲ್ಲಿ ಆರ್ಮಿ ಸಿಸಿ ತಂಡದ ನಾಯಕ ವಿಕ್ರಮ್ ಮೂಲಿಮನಿ, ತಂಡದ ಆಟಗಾರರಾದ ಅಂಬರೀಶ್ ಗೊಬ್ಬರವಾಡಿ (ಉಪ ನಾಯಕ ),ನಾಗರಾಜ,, ನಿಂಗರಾಜ,ರಾಯಪ್ಪ,ವಿಶ್ವಚೇತನ್,ಹಣಮಂತ ಮಾಶಾಳ,ಮಡಿವಾಳ,ಈಶ್ವರ,ಪರಮಾನಂದ,ಯಲ್ಲಾಲಿಂಗ ಹೈಯ್ಯಳಕರ್,ಆನಂದ,ಶಿವನಾಗ,ಜಯವರ್ಧನ್,ಪರಶುರಾಮ ಸರ್ಜಾಪೂರ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here