ಕರಾಟೆ ವಿದ್ಯಾರ್ಥಿಗಳಿಗೆ ಆತ್ಮ ರಕ್ಷಣೆ ಕಲೆಯು ಬಹಳ ಮುಖ್ಯ

0
22

ಕಲಬುರಗಿ: ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಹಾಗೂ ಅಜಯಕುಮಾರ್ ಸ್ಪೋಟ್ರ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ನಗರದ ಚಂದ್ರಶೇಖರ ಪಾಟೀಲ ಒಳ ಕ್ರೀಡಾಗಣದಲ್ಲಿ ಎರಡು ದಿನಗಳ ಕಾಲ ಆಸ್ಕಾ ಓಪನ್ ಚಾಂಪಿಯನ್ ಶೀಫ್ ಹಾಗೂ ಕಲರ್ ಬೆಲ್ಟ್ ಎಕ್ಸಾಮ್ ಏರ್ಪಡಿಸಲಾಯಿತು.

ಇದೇ ಸಂದರ್ಭದಲ್ಲಿ ಪಿಡಬ್ಲ್ಯೂಡಿ ಸೂಪರಿಡೆಂಟ್ ಇಂಜಿನಿಯರ್ ಡಾ.ಸುರೇಶ ಎಲ್. ಶರ್ಮಾ ಅವರು ಉದ್ಘಾಟಿಸಿ ಕರಾಟೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಆತ್ಮ ರಕ್ಷಣೆ ಕಲೆಯು ಹೆಣ್ಣು ಮಕ್ಕಳಿಗೆ ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ಬೆಂಗಳೂರಿನಿಂದ ಆಗಮಿಸಿದ ಮಾಸ್ಟರ್ ಶ್ರೀನಿವಾಸ್ ರವರು ವಿದ್ಯಾರ್ಥಿಗಳ ಪರೀಕ್ಷೆಯನ್ನು ವೀಕ್ಷಿಸಿ ಅನೇಕ ವಿದ್ಯಾರ್ಥಿಗಳಿಗೆ ಕಲರ್ ಬೆಲ್ಟ್, ಪ್ರಶಸ್ತಿ ಪತ್ರಗಳು, ಟ್ರೋಫಿ ಹಾಗೂ ಪದಕಗಳು ವಿತರಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಅಮೃತ ಅಷ್ಟಗಿ, ಪರ್ತಕರ್ತ ಚಂದ್ರಶೇಖರ ಕವಲಗಾ, ಡಿಸ್ಟ್ರಿಕ್ಟ್ ಚೀಫ್ ಕೋಚ್ ರಾಜವರ್ಧನ್ ಜಿ. ಚೌವ್ಹಾಣ, ಹಾಕಿ ಕೋಚ್ ಸಂಜಯ ಭಾಣದ್, ಶ್ರೀಕಾಂತ್ ಪೀಸಾಳ, ಅಂಬರೀಶ್ ಜೋಗಿ, ಪ್ರತಾಪ್ ಸಿಂಗ್ ಪವಾರ್ ಸೇರಿದಂತೆ ಕರಾಟೆ ವಿದ್ಯಾರ್ಥಿಗಳು, ಪೆÇೀಷಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here