ಕಲಬುರಗಿ: ಸಾಹಿತ್ಯ ಕ್ಷೇತ್ರದಲ್ಲಿ ಲೇಖಕರಿಗಿಂತ ಮಹಿಳೆ ಬರೆದ ಸಾಹಿತ್ಯ ಚರ್ಚೆ,ವಿಮರ್ಶೆಗೆ ಒಳಪಡಿಸಿದೇ ಇರು ವುದು ದುಃಖದ ಸಂಗತಿ.ಆದರೆ ಮಹಿಳೆಯರು ತಮ್ಮ ಸ್ವಾನುಭಾವಗಳಿಂದ ಕಲ್ಪನೆಗಿಂತ ನೈಜವಾದ ಸತ್ಯಕ್ಕೆ ಹತ್ತಿರವಾದ ಸಾಹಿತ್ಯವಾಗಿದೆ.ಶಾಂತಾ ಪಸ್ತಾಪೂರ ಸಾಹಿತ್ಯ ವಿವಾದಕ್ಕೆ ಒಳಗಾಗದೇ ಸಮತಾಭಾವದ ಸಾಹಿತ್ಯ ರಚಿಸಿದವರು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯೆ ಡಾ.ಜಯ ದೇವಿ ಗಾಯಕವಾಡ ನುಡಿದರು.
ಕಲಾಮಂಡಳದಲ್ಲಿ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು ಏರ್ಪಡಿಸಿದ ಹಿರಿಯ ಸಾಹಿತಿ ಶ್ರೀಮತಿ ಶಾಂತ ಪಸ್ತಾ ಪೂರ ಸಾಹಿತ್ಯ ಚಿಂತನ-ಮಂಥನ ಕಾರ್ಯಕ್ರವನ್ನು ಸಸಿಗೆ ನೀರೇರೆದು ಉದ್ಘಾಟಿಸಿ ಮಾತನಾಡಿ ಮಹಿಳಾ ಸಾಹಿತಿಗಳು ಬರೆವ ಸಾಹಿತ್ಯ ಸಮಾಜಕ್ಕೆ ಮಾದರಿಯಾ ಗಲಿ,ಗಟ್ಟಿ ಸಾಹಿತ್ಯ ರಚನೆಗೆ ತೊಡಗಲಿ ಎಂದರು.
ಶಾಂತಾ ಪಸ್ತಾಪೂರ ಕಥೆಗಳು ಸರಳ,ಸಾಮಾಜಿಕ, ಕುತೂಹಲವುಂಟು ಮಾಡಿವೆ.ಉರ್ದು ಭಾಷಾ ಸಮ್ಮಿಶ್ರಣ, ಕಲಬುರಗಿ, ಚಿಂಚೋಳಿ ಪರಿಸರದ ಅಚ್ಚ ಳಿಯದ ಕಥೆಗಳು.ಖುರ್ಚಿಯಿಂದಲೇ ಪ್ರಾರಂಭವಾಗಿ ವೆ.ಕಷ್ಟದ ನಡುವೆ ಸಾಂತ್ವಾನ ಹೇಳುವ ಸುತ್ತಮುತ್ತಲಿನ, ಮಹಿಳಾ ಕೇಂದ್ರಿಕೃತ ಕತೆಗಳಾಗಿವೆ. ಲಲಿತ ಪ್ರಬಂಧಗಳು ಮನುಷ್ಯನ ನೈಜತೆಯ ಪ್ರಬಂಧ ಗಳಾಗಿವೆ ಎಂದು ಲೇಖಕ ಡಾ.ಚಿದಾನಂದ ಕುಡ್ಡನ್ನ ನುಡಿದರು.ಡಾ.ಶೈಲಜಾ ಬಾಗೇವಾಡಿ ಅವರು ಶಾಂತಾ ಪಸ್ತಾಪೂರ ಪ್ರವಾಸಕಥನ,ಡಾ.ಸಾರಿಕಾದೇವಿ ಕಾಳಗಿ ಕಾವ್ಯ ಕುರಿತು ಮಾತನಾಡಿ ಅನುಭಾವದ ಕಾವ್ಯ ರಚಿಸಿ ಸಿದವರೆಂದರು.ಎ.ಕೆ.ರಾಮೇಶ್ವರ ಅಧ್ಯಕ್ಷತೆ ವಹಿಸಿ ಇದಿಂದು ಅರ್ಥಪೂರ್ಣವಾದದ್ದು ಎಂದರು.
ಸಾಹಿತಿ ಶಾಂತಾ ಪಸ್ತಾಪೂರ, ಜಿಲ್ಲಾ ದಸಾಪ ಅಧ್ಯಕ್ಷ ಡಾ.ಸುನೀಲ ಜಾಬಾದಿ,ಸಂಯೋಜಕ ಡಾ.ಗವಿಸಿದ್ಧಪ್ಪ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕ ನುಡಿ ಪ್ರಧಾನ ಕಾರ್ಯದರ್ಶಿ ಡಾ.ರಾಜಕುಮಾರ ಮಾಳಗೆ ಇದ್ದರು.
ಸುವರ್ಣ ಸಿರಿ ಪ್ರಶಸ್ತಿ ಪುರಸ್ಕøತರು: ಚಂದ್ರಕಲಾ (ಬಾವಿ ಪರಿಚಯ), ಝೀನತ್ ಫಾತಿಮಾ (ಶಿಕ್ಷಣ), ಶರಣಮ್ಮ ಸಕ್ಕರಗಿ(ಅಂಗನವಾಡಿ) ಗೌರವ ಸನ್ಮಾನಿತರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆ ಡಾ.ಚಂದ್ರ ಕಲಾ ಬಿದರಿ,ಕನ್ನಡ ಪುಸ್ತಕ ಪ್ರಾಧಿಕಾರ ಸದಸ್ಯ ಬಿ.ಎಚ್.ನಿರಗುಡಿ,ಗಡಿನಾಡು ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಸಂಜುಕುಮಾರ ಅತಿವಾಳೆ ಅವರನ್ನು ಸನ್ಮಾನಿಸಲಾಯಿತು.
ಕಜಾಪ ಜಿಲ್ಲಾಧ್ಯಕ್ಷ ಸಿ.ಎಸ್.ಮಾಲಿಪಾಟೀಲ, ಡಾ.ಗುಂಡಪ್ಪ ಸಿಂಗೆ,ಡಾ.ಶಾಂತಪ್ಪ ಡಂಬಳ,ಡಾ.ಸಿದ್ಧ ಪ್ಪ ಹೊಸಮನಿ,ಡಾ.ಶೀಲಾದೇವಿ ಬಿರಾದಾರ, ಡಾ.ಪೀರಪ್ಪ ಸಜ್ಜನ,ಡಾ.ಶರಣಪ್ಪ ಚಲವಾದಿ,ಡಾ.ಕೆ.ಎಸ್.ಬಂಧು,ಲಕ್ಷ್ಮಣ,ಇತರರು ಇದ್ದರು.