ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ತ ಸಿಎಂ ಯಡಿಯೂರಪ್ಪ ಅವರು ಮಂಗಳವಾರ ಕಲಬುರಗಿಗೆ ಆಗಮಿಸುವ ಹಿನ್ಮೆಲಯಲ್ಲಿ ಕಲಬುರಗಿ ನಗರ ಮದುವಣಗಿತ್ತಿಯಂತೆ ಶೃಂಗಾರ ಗೊಂಡಿದೆ.
ಹೈಕ ವಿಮೋಚನಾ ದಿನಾಚರಣೆ ನಿಮಿತ್ತ ಕಲಬುರಗಿಗೆ ಆಗಮಿಸಿ ಧ್ವಜಾರೋಹಣ ಮಾಡಿದ ಕೀರ್ತಿ ಪಡೆದ ಯಡಿಯೂರಪ್ಪ ನವರು ಕಲ್ಯಾಣ ಕರ್ನಾಟಕ ಮಾಡಿದ ನಂತರವೂ ಆಗಮಿಸುತ್ತಿರುವುದರಿಂದ ಪಕ್ಷದ ಮುಖಂಡರು, ಕಾರ್ಯಕರ್ತರು ಬಹಳ ಸಂಭ್ರಮದಿಂದ ಸ್ವಾಗತಿಸಲು ಸಜ್ಜಾಗಿದ್ದಾರೆ.
ನಗರದ ಪ್ರಮುಖ ವೃತ್ತ ಹಾಗೂ ರಸ್ತೆಯಲ್ಲಿ ಸ್ವಾಗತ ಕಮಾನು, ಬಣ್ಣ, ಬಣ್ಣದ ಪರಾರಿ, ಬ್ಯಾ ನರ್ ಬಂಟಿಗ್ಸ್ ಅಳವಿಡಿಸುವ ಮೂಲಕ ತಮ್ಮ ಅಭಿಮಾನವನ್ನು ತೋರ್ಪಡಿಸಲು ಸಜ್ಜಾಗಿದ್ದಾರೆ.