ಕಲಬುರಗಿ: ನಗರದ ಸಂತ ಜೋಸೆಫ್ ಕಾಲೇಜಿಗೆ ಪ್ರವೇಶ ಪಡೆದುಕೊಂಡು ಇಲ್ಲಿ ಸಹ ದ್ವಿತೀಯ ಪಿ.ಯು.ಸಿಯಲ್ಲಿ ಕುಮಾರಿ ಭಾಗೀರಥಿ 93% ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡು ಊರಿನ ಹಾಗೂ ಮನೆಯ ಗೌರವವನ್ನು ಕಾಪಾಡುವುದರ ಜೊತೆಗೆ ಮಾದರಿ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದಾರೆ.
ಕುಮಾರಿ ಭಾಗೀರಥಿ ಅವರಿಗೆ ಒಂದು ಕಡೆ ಸರ್ಕಾರಿ ಶಾಲೆಯಲ್ಲಿ ಓದಿನ ಕೊರತೆಯಾದರೆ ಮತ್ತೊಂದು ಕಡೆ ಮನೆಯ ಕಡು ಬಡತನದ ಸಮಸ್ಯೆಗಳು ಕಾಡುತ್ತಿದ್ದವು ಹಳ್ಳಿಯ ಒಂದು ಪುಟ್ಟ ಗುಡಿಸಿಲಲ್ಲಿ ತಂದೆ ಮದ್ಯಪಾನ ಮಾಡಿ ಮನೆಗೆ ಬಂದು ಗಲಾಟೆ ಮಾಡುತ್ತಿದ್ದರೆ ಮತ್ತೊಂದು ಕಡೆ ತಾಯಿಯ ಕಣ್ಣೀರು ಇನ್ನೊಂದು ಕಡೆ ವಿದ್ಯುತ್ ಕೊರತೆ ಹೀಗೆ ಅನೇಕ ಸಮಸ್ಯೆಗಳಿದ್ದರೂ ಅದನ್ನು ಮೆಟ್ಟಿ 96.8% ಪಡೆದುಕೊಂಡು ಸಾಗನೂರಿನ ಸರ್ಕಾರಿ ಪ್ರೌಢಶಾಲೆಗೆ ಅಂದರೆ 10ನೇ ತರಗತಿಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಳ್ಳುತ್ತಾರೆ.