ಕಾಮುಕನ ಬಂಧಿಸದಿದ್ದರೆ ದಲಿತ ಸೇನೆ ಉಗ್ರ ಪ್ರತಿಭಟನೆ

0
31

ಸುರಪುರ:ಹುಣಸಗಿ ತಾಲೂಕಿನ ಗ್ರಾಮವೊಂದರಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆದಿದ್ದು ಕಾಮುಕನನ್ನು ಬಂಧಿಸುವಂತೆ ಇಂದು ಒತ್ತಾಯಿಸುತ್ತೇವೆ,ನಮ್ಮ ಮನವಿಗೆ ಸ್ಪಂಧಿಸದಿದ್ದಲ್ಲಿ ಡಿವೈಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ದಲಿತ ಸೇನೆ ಸಂಘಟನೆ ತಾಲೂಕು ಅಧ್ಯಕ್ಷ ಮರಿಲಿಂಗಪ್ಪ ಗುಡಿಮನಿ ಎಚ್ಚರಿಸಿದರು.

ನಗರದಲ್ಲಿ ಈ ಕುರಿತು ಹೇಳಿಕೆ ನೀಡಿ,ಈಗಾಗಲೇ ಕಾಮುಕನನ್ನು ಬಂಧಿಸುವಂತೆ ಹುಣಸಗಿ ಠಾಣೆಗೆ ದೂರು ನೀಡಿ ಆಗ್ರಹಿಸಲಾಗಿದೆ,ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ,ಕೂಡಲೇ ಕಾಮುಕನನ್ನು ಬಂಧಿಸಬೇಕು ಮತ್ತು ಸಂತ್ರಸ್ತೆ ಕುಟುಂಬಕ್ಕೆ ಸೂಕ್ತ ಬಂದೋಬಸ್ತ್ ನೀಡಬೇಕು ಇಲ್ಲವಾದಲ್ಲಿ ಡಿವೈಎಸ್ಪಿ ಕಚೇರಿ ಮುಂದೆ ದಲಿತ ಸೇನೆಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮುಖಂಡರಾದ ಮಹಾದೇವ ಚಲುವಾದಿ,ಭೀಮರಾಯ,ಲೊಕೇಶ,ಶರಣಬಸವ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here