ಅಫಜಲಪುರ: ಇಂದು ಬಿದನೂರು ಗ್ರಾಮ ಪಂಚಾಯಿತಿ ಕಾರ್ಯಲಯದಲ್ಲಿ ಪೋಷಣ ಮಾಸಾಚರಣ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಚಾಲನೆಯನ್ನು ಅಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಮಲಕಣ್ಣ ಪೂಜಾರಿ ಯವರು ನೇರವೆರಿಸಿದರು. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಆರೋಗ್ಯ ಶಿಕ್ಷಣಾಧೀಕಾರಿ ಶ್ರೀ ಶಶಿಧರ.ವ್ಹಿ.ಬಳೆ ಕಾರ್ಯಕ್ರಮದ ಮಹತ್ವವನ್ನು ಕುರಿತು ಮಾತನಾಡಿ ಗರ್ಭಿಣಿಯರು ಹಾಗೂ ಮಕ್ಕಳು ರಕ್ತ ಹಿನತೆಯಿಂದ ಪಾರಾಗಲು ಪೌಷ್ಟಿಕ ಆಹಾರದ ಪದ್ಧತಿ ಬಹಳ ಮಹತ್ವದಾಗಿದೆ. ಒಟ್ಟಿನಲ್ಲಿ ಅನಿಮೀಯ ರೊಗದಿಂದ ಪಾರಾಗಲು ಪೌಷ್ಟಿಕ ಆಹಾರ ಅತೀ ಅವಶ್ಯವಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಮತಿ ಪಾರ್ವತಿ ಹನ್ನುರು ನಡೆಸಿಕೊಟ್ಟರು. ವೇದಿಕೆಯ ಮೇಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀ ಮತಿ ಲಕ್ಷ್ಮಿ ಅಷ್ಟಗಿ ಹಾಗೂ ಶ್ರೀ ಶರಣಕುಮಾರ ಕಿ.ಆ.ಸ (ಪು) ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಹಾಜರಿದ್ದರು. ಈ ಸಂದರ್ಭದಲ್ಲಿ ಗರ್ಭಿಣಿಯರಿಗೆ ಉಡಿತುಂಬುವ ಕಾರ್ಯಕ್ರಮ ನೇರವೆರಿಸಿದರು.