ಸುರಪುರ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಸರಿಪಡಿಸಲು ಆರೋಗ್ಯ ಸಚಿವರಿಗೆ ಮನವಿ

0
94

ಸುರಪುರ: ನಗರದಲ್ಲರುವ ತಾಲ್ಲೂಕು ಆಸ್ಪತ್ರೆಯಲ್ಲಿ ಒಂದೂ ಸರಿಯಾದ ವ್ಯವಸ್ಥೆಯಿಲ್ಲದೆ ನಿತ್ಯವು ರೋಗಿಗಳು ಪರದಾಡುವಂತಾಗಿದೆ.ಆದ್ದರಿಂದ ಕೂಡಲೆ ಆಸ್ಪತ್ರೆಗೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಜಯಕರ್ನಾಟಕ ಸಂಘಟನೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರಿಗೆ ಮನವಿ ಸಲ್ಲಿಸಿದರು.

ಕಾರ್ಯಕ್ರಮ ನಿಮಿತ್ಯವಾಗಿ ಹೋಗುತ್ತಿದ್ದ ಆರೋಗ್ಯ ಸಚಿವರಿಗೆ ಹಸನಾಪುರ ಪೆಟ್ರೋಲ್ ಪಂಪ್ ಬಳಿಯಲ್ಲಿನ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಲ್ಲಿ ಭೇಟಿ ಮಾಡಿದ ಜಯಕರ್ನಾಟಕ ಕಾರ್ಯಕರ್ತರು ಶ್ರೀರಾಮುಲು ಅವರಿಗೆ ಹಾರ ಹಾಕಿ ಸನ್ಮಾನಿಸಿ ನಂತರ,ತಾಲ್ಲೂಕು ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯರಿಲ್ಲ,ಐಸಿಯು ಘಟಕವಿದ್ದರು ಸಿಬ್ಬಂದಿ ಇಲ್ಲದ ಕಾರಣ ಕಾರ್ಯಾರಂಭವಿಲ್ಲ,ಡಯಾಲಿಸಿಸ್ ಘಟಕವಿದ್ದರು ನೀರು ಮತ್ತು ವಿದ್ಯೂತ್ ಸಂಪರ್ಕವಿಲ್ಲದೆ ರೋಗಿಗಳಿಗೆ ಲಭ್ಯವಿಲ್ಲ,ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಅವಶ್ಯಕತೆಯಿದೆ,ಚುಚ್ಚುಮದ್ದು ವಿಭಾಗದಲ್ಲಿ ಸಿಬ್ಬಂದಿ ಕೊರತೆಯಿಂದ ಮಹಿಳೆ ಮತ್ತು ಪುರುಷ ರೋಗಿಗಳಿಗೆ ಒಂದೆಡೆಯೆ ಚುಚ್ಚುಮದ್ದು ನೀಡಲಾಗುತ್ತಿದೆ,ಪ್ರಸೂತಿ ತಜ್ಞರಿಲ್ಲದಕಾರಣ ಹೆರಿಗೆಗೆ ತುಂಬಾ ತೊಂದರೆಯಿದೆ ಇಂತಹ ಅನೇಕ ಸಮಸ್ಯೆಗಳಿಂದ ತಾಲ್ಲೂಕು ಆಸ್ಪತ್ರೆ ನರಳುತಿದ್ದು ಕೂಡಲೆ ಎಲ್ಲಾ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.

Contact Your\'s Advertisement; 9902492681

ರಾತ್ರಿ ಹನ್ನೊಂದು ಗಂಟೆಯ ವೇಳೆಗೆ ಮಳೆ ಸುರಿಯುತ್ತಿದ್ದರು ಹೋರಾಟಗಾರರ ಮನವಿಗೆ ಸ್ಪಂಧಿಸಿ ಮಳೆಯಲ್ಲಿಯೆ ಮನವಿ ಸ್ವೀಕರಿಸಿದ ಸಚಿವರು ಮಾತನಾಡಿ,ಯಾವುದೆ ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಗಮನಕ್ಕೆ ತನ್ನಿ ತಕ್ಷಣವೆ ಸಾಧ್ಯವಾದ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನ ಮಾಡುವೆ.ಅದರಂತೆ ಸುರಪುರ ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ನಿವಾರಿಸುವುದಾಗಿ ಭರವಸೆ ನೀಡಿದರು.ಮಳೆಯಲ್ಲಿಯೇ ಮನವಿ ಸ್ವೀಕರಿಸಿದ ಸಚಿವರ ಕರ್ತವ್ಯಕ್ಕೆ ಕಾರ್ಯಕರ್ತರು ಮೆಚ್ಚುಗೆ ವ್ಯಕ್ತಪಡಿಸಿದರು.ಸಂಘಟನೆಯ ನಗರ ಘಟಕದ ಅಧ್ಯಕ್ಷ ಕಬಾಡಗೇರಾ,ಯಲ್ಲಪ್ಪ ಕಲ್ಲೋಡಿ,ಶರಣಪ್ಪ ಬೈರಿಮರಡಿ,ಸುಭಾಸ ಹುಲಕಲ್,ಭಾಷಾ ಸುರಪುರ,ವಾಸು ನಾಯಕ ಬೈರಿಮರಡಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here