ಜಾತಿ ಕಾಲಮಿನಲ್ಲಿ ಸವಿತಾ ಎಂದು ಸಮೂದಿಸಲು ಮನವಿ

0
113

ಸುರಪುರ: ಸಮಾಜದಲ್ಲಿ ತನ್ನದೆ ಆದ ಘನತೆ ಮತ್ತು ಗೌರವದಿಂದಿರುವ ಸವಿತಾ ಸಮಾಜದ ಬೇಡಿಕೆಯನ್ನು ಪರಿಗಣಿಸಿ ಸರಕಾರ ಹಜಾಮ ಮತ್ತು ನಾಯಿಂದಾ ಎಂಬುವ ಪದವನ್ನು ಗೆಜೆಟಿಂದ ತೆಗೆದು ಸವಿತಾ ಎಂದು ನಮೂದಿಸಲು ಆದೇಶ ಹಿರಡಿಸಿದೆ.ಅದರಂತೆ ಎಲ್ಲಾ ಶಾಲಾ ದಾಖಲಾತಿಗಳಲ್ಲಿ ಸವಿತಾ ಎಂದು ಸಮೂದಿಸಲು ಆದೇಶ ಹೊರಡಿಸುವಂತೆ ಸವಿತಾ ಸಮಾಜ ಸಂಘದ ತಾಲ್ಲೂಕು ಅಧ್ಯಕ್ಷ ಗೋಪಾಲ ಚಿನ್ನಾಕಾರ ಆಗ್ರಹಿಸಿದರು.

ಸವಿತಾ ಸಮಾಜ ಸಂಘದಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿ,೨೦೧೬ ರಲ್ಲಿ ನಮ್ಮ ಸಮಾಜ ಸರಕಾರಕ್ಕೆ ಮನವಿ ಮಾಡಿದಂತೆ,ಅಂದಿನ ಸರಕಾರ ಆದೇಶ ಹೊರಡಿಸಿ ಯಾವುದೆ ದಾಖಲಾತಿಯಲ್ಲಿ ಹಜಾಮ ಮತ್ತು ನಾಯಿಂದಾ ಬದಲಾಗಿ ಸವಿತಾ ಎಂದು ನಮೂದಿಸಿ ನೀಡುವಂತೆ ಹಾಗು ಹಜಾಮ ಮತ್ತು ನಾಯಿಂದಾ ಎಂಬ ಪದಗಳನ್ನು ತೆಗೆದು ಹಾಕುವಂತೆ ಆದೇಶ ಮಾಡಿದೆ.ಅದರಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಲ್ಲಾ ಪ್ರೌಢ ಮತ್ತು ಪ್ರಾಥಮಿಕ ಶಾಲಾ ದಾಖಲಾತಿಗಳಲ್ಲಿರುವ ಹಜಾಮ ಮತ್ತು ನಾಯಿಂದ ಎಂಬ ಜಾತಿ ಪದಗಳನ್ನು ತೆಗೆದು ಸವಿತಾ ಎಂದು ಪರಿಷ್ಕರಿಸಿ ಪ್ರಮಾಣ ಪತ್ರ ನೀಡುವಂತೆ ಎಲ್ಲಾ ಶಾಲೆಗಳಿಗೆ ಆದೇಶ ಮಾಡುವಂತೆ ಒತ್ತಾಯಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನ ಓಲೆಕಾರವರಿಗೆ ಮನವಿ ಸಲ್ಲಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಚಂದ್ರಾಮ ಮುಂದಿನಮನಿ,ಮಂಜುನಾಥ ಅನವಾರ,ಬಾಲರಾಜ ಚಿನ್ನಾಕಾರ,ಚಂದ್ರಶೇಖರ ಅನುವಾರ,ಯಲ್ಲಪ್ಪ ಚಿನ್ನಾಕಾರ,ಬಸವರಾಅಜ ಚಿನ್ನಾಕಾರ,ಭೀಮಣ್ಣ ವಡಿಗೇರಾ,ಭೀಮಣ್ಣ ದೇವರಗೋನಾಲ,ಶಂಕರ ತಿಪ್ಪನಟಿಗಿ,ಪರಶುರಾಮ ಚಿನ್ನಾಕಾರ,ಹಣಮಂತ್ರಾಯ ಅಜ್ಜಾಕೊಲ್ಲಿ,ರಾಘವೇಂದ್ರ ದೇವಿಕೇರಾ ಸೇರಿದಂತೆ ಅನೇಕರಿದ್ದರು.ಸ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here