ವಿಧಾನಸಭಾ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ನಾಯಕ ನಾಮಪತ್ರ

0
22

ಸುರಪುರ ರಾಯಚೂರ ದಿಂದ ಬಿಜೆಪಿ ಓಡಿಸಲು ಪಣತೊಡಿ-ಶರಣಬಸಪ್ಪಗೌಡ ದರ್ಶನಾಪುರ

ಸುರಪುರ: ರಾಜಾ ವೆಂಕಟಪ್ಪ ನಾಯಕ ಒಬ್ಬ ಮುತ್ಸದ್ಧಿ ರಾಜಕಾರಣಿಯಾಗಿದ್ದರು ಇಂದು ಅವರಿಲ್ಲ,ತಾವೆಲ್ಲರು ಅವರ ಮಗ ರಾಜಾ ವೇಣುಗೋಪಾಲ ನಾಯಕರನ್ನು ಗೆಲ್ಲಿಸುವ ಮೂಲಕ ವಿಧಾನಸೌಧಕ್ಕೆ ಕಳಿಸಿಕೊಡಿ ಹಾಗೂ ರಾಯಚೂರ ಮತ್ತು ಸುರಪುರ ದಿಂದ ಬಿಜೆಪಿ ಓಡಿಸಲು ತಾವೆಲ್ಲರು ಪಣಿತೊಡಿ ಎಂದು ಕರ್ನಾಟಕ ಸರಕಾರದ ಸಣ್ಣ ಕೈಗಾರಿಕೆಗಳ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಕರೆ ನೀಡಿದರು.

ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಅಂಗವಾಗಿ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಅವರ ನಾಮಪತ್ರ ಸಲ್ಲಿಕೆ ಅಂಗವಾಗಿ ನಡೆದ ರೋಡ್ ಶೋ ದಲ್ಲಿ ಭಾಗವಹಿಸಿ ಮಾತನಾಡಿ,ಇಂದು ಇಷ್ಟೊಂದು ಪ್ರಮಾಣದಲ್ಲಿ ತಾವೆಲ್ಲರು ಸೇರಿರುವುದು ನೋಡಿದರೆ ಖುಷಿಯಾಗುತ್ತದೆ,ರಾಜಾ ವೇಣುಗೋಪಾಲ ನಾಯಕ ಅವರ ಗೆಲುವು ಶತಸಿದ್ಧ ಎಂದು ಭರವಸೆ ವ್ಯಕ್ತಪಡಿಸಿದರು.

Contact Your\'s Advertisement; 9902492681

ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಮಾತನಾಡಿ,ನಮ್ಮ ತಂದೆಯವರು ಕ್ಷೇತ್ರದ ಅಭಿವೃಧ್ದಿಗೆ ಅನೇಕ ಕೆಲಸಗಳನ್ನು ಮಾಡಿದ್ದಾರೆ,ಅವರು ನಮಗೆ ಜನಸೇವೆ ಮಾಡುವುದನ್ನು ಹೇಳಿಕೊಟ್ಟಿದ್ದಾರೆ,ಅವರ ಜನಪರ ಕೆಲಸಗಳನ್ನು ಮುಂದುವರೆಸಲು ಹಾಗೂ ತಮ್ಮೆಲ್ಲರ ಸೇವೆಯನ್ನು ಮಾಡಲು ತಾವು ನನಗೆ ಮತ ನೀಡಿ ಆಶಿರ್ವದಿಸಬೇಕು ಎಂದರು.

ಇಂದು ನಾಮಪತ್ರ ಸಲ್ಲಿಕೆಗೆ ತಾವೆಲ್ಲರು ಆಗಮಿಸಿ ಶಕ್ತಿ ತುಂಬಿದ್ದೀರಿ ತಮ್ಮೆಲರಿಗೆ ನಾನು ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.ಇದೇ ಸಂದರ್ಭದಲ್ಲಿ ಮುಖಂಡರಾದ ನಿಂಗರಾಜ ಬಾಚಿಮಟ್ಟಿ ಹಾಗೂ ಕೆಪಿಸಿಸಿ ಮಹಿಳಾ ವಿಭಾಗದ ಮುಖಂಡರಾದ ವೀಣಾ ಹಿರೇಮಠ ಮಾತನಾಡಿದರು.

ಬೆಳಿಗ್ಗೆಯಿಂದಲೂ ಕಾಂಗ್ರೆಸ್ ಕಚೇರಿ ವಸಂತ ಮಹಲ್ ಆವರಣದಲ್ಲಿ ಆಗಮಿಸಿದ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಮೊದಲಿಗೆ ಬಹಿರಂಗ ಸಮಾವೇಶವನ್ನು ನಡೆಸಿ ನಂತರ ರೋಡ್ ಶೋ ಆರಂಭಿಸಿದರು.

ಈ ಸಂದರ್ಭದಲ್ಲಿ ನಗರದಾದ್ಯಂತ ಎಲ್ಲೆಡೆಯೂ ಕಾಂಗ್ರೆಸ್ ಧ್ವಜಗಳ ಭರಾಟೆ ಹಾಗೂ ಶಾಸಕ ದಿ.ರಾಜಾ ವೆಂಕಟಪ್ಪ ನಾಯಕ ಅವರ ಭಾವಚಿತ್ರ ಹಿಡಿದ ಸಾವಿರಾರು ಕಾರ್ಯರ್ತರ ಹಷೀದ್ಗಾರ ಕಂಡುಬಂತು.ವಸಂತ ಮಹಲ್ ಮೂಲಕ ಆರಂಭಗೊಂಡ ಮೆರವಣಿಗೆ ಮಹಾತ್ಮ ಗಾಂಧಿ ವೃತ್ತದ ಮೂಲಕ ತಹಸಿಲ್ದಾರ ಕಚೇರಿ ವರೆಗೆ ನಡೆಯಿತು.ನಂತರ ತಹಸಿಲ್ದಾರ್ ಕಚೇರಿಯಲ್ಲಿನ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾಧಿಕಾರಿ ಕಾವ್ಯರಾಣಿ ಕೆ.ವಿ ಅವರಿಗೆ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಯಾದಗಿರಿಯ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ,ಸುರಪುರ ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ,ರಾಯಚೂರ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ,ಶಾಂತಗೌಡ ಚನ್ನಪಟ್ಟಣ,ಶಂಕ್ರಣ್ಣ ವಣಿಕ್ಯಾಳ,ರಾಜಾ ಸಂತೋಷ ನಾಯಕ,ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ ಸೇರಿದಂತೆ ಅನೇಕ ಮುಖಂಡರು ಹಾಗೂ 25 ಸಾವಿರಕ್ಕೂ ಹೆಚ್ಚು ಜನ ಕಾರ್ಯರ್ತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here