ದೇವರಗೋನಾಲ:ಸಕ್ರೆಪ್ಪ ತಾತನವರ ಕಲ್ಯಾಣೋತ್ಸವದಲ್ಲಿ 59 ಜೋಡಿ ಸಾಮೂಹಿಕ ವಿವಾಹ

0
18

ಕಲ್ಯಾಣೋತ್ಸವದಲ್ಲಿ ಇತರರ ಕಲ್ಯಾಣy ಮಾಡಿಸಿದ್ದು ಮಹಾಕಾರ್ಯ: ಡಾ:ಚನ್ನಮಲ್ಲಿಕಾರ್ಜುನ ಶ್ರೀ

ಸುರಪುರ: ಹೈಯಾಳಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಸಕ್ರೆಪ್ಪ ತಾತನವರು ತಮ್ಮ ಕಲ್ಯಾಣೋತ್ಸವದ ಜೊತೆಗೆ 59ಜೋಡಿ ಇತರರ ಕಲ್ಯಾಣೋತ್ಸವ ಮಾಡಿಸುತ್ತಿರುವುದು ಮಹಾಕಾರ್ಯವಾಗಿದೆ ಎಂದು ಲಕ್ಷ್ಮೀಪುರ-ಬಿಜಾಸಪುರ ಮಧ್ಯದ ಶ್ರೀಗಿರಿ ಮಠದ ಡಾ:ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.

ತಾಲೂಕಿನ ದೇವರಗೋನಾಲ ಗ್ರಾಮದಲ್ಲಿ ಹೈಯಾಳಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಸಕ್ರೆಪ್ಪ ತಾತನವರ ಕಲ್ಯಾಣೋತ್ಸವದ ಅಂಗವಾಗಿ ನಡೆದ 59 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದ ಭಾಗವಹಿಸಿ ಮಾತನಾಡಿ,ಸಕ್ರೆಪ್ಪ ತಾತನವರಂತ ಯೋಚನೆ ಎಲ್ಲರಿಗು ಬರಲು ಸಾಧ್ಯವಿಲ್ಲ,ಅವರ ಸಮಾಜಮುಖಿಯಾದ ಚಿಂತನೆ ಎಲ್ಲರಿಗೂ ಮಾದರಿಯಾಗಿದೆ,ಇಂತಹ ಕಾರ್ಯಕ್ಕೆ ಇಡೀ ಗ್ರಾಮದ ಎಲ್ಲರು ಟೊಂಕಕಟ್ಟಿ ನಿಂತು ಹಗಲಿರಳು ಸೆವೆ ಮಾಡಿರುವುದು ತುಂಬಾ ಹೆಮ್ಮೆಯ ಸಂಗತಿಯಾಗಿದೆ ಎಂದರು.

Contact Your\'s Advertisement; 9902492681

ಅಗತೀರ್ಥದ ರೇವಣಸಿದೇಶ್ವರ ಗುರುಪೀಠದ ರೇವಣಸಿದ್ದೇಶ್ವರ ಸ್ವಾಮೀಜಿ ಮಾತನಾಡಿ,ಇಂದು ಸಾಮೂಹಿಕ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ತಾವೆಲ್ಲರು ಪುಣ್ಯವಂತರು,ಇಂದು ಜೋಡಿಯಾಗಿರುವ ತಾವೆಲ್ಲರು ನೂರಾರು ಕಾಲ ಅನೋನ್ಯವಾಗಿರುವ ಜೊತೆಗೆ ಮುಂದೆ ಇಬ್ಬರು ಮೂರು ಜನರಾಗಿ ಹೈಯಾಳಲಿಂಗೇಶ್ವರ ದೇವಸ್ಥಾನಕ್ಕೆ ಬನ್ನಿ ಎಂದು ಆಶೀರ್ವಚನ ನೀಡಿದರು.ನಂತರ ಇಕ್ಬಾಲ್ ಒಂಟಿ ರಂಗಂಪೇಟೆ,ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ ನಾಯಕ,ಗ್ರಾಮದ ಮುಖಂಡರಾದ ಬಸವಂತ್ರಾಯಗೌಡ ಪಾಟೀಲ್ ಮಾತನಾಡಿ ಸಾಮೂಹಿಕ ವಿವಾಹ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ಗಂಗಾಧರ ಶಾಸ್ತ್ರಿಗಳ ನೇತೃತ್ವ ಅರ್ಚಕರ ತಂಡದಿಂದ ಸಕ್ರೆಪ್ಪ ತಾತನವರ ಕಲ್ಯಾಣೋತ್ಸವದ ಜೊತೆಗೆ 59 ಜೋಡಿಗಳ ಮಾಂಗಲ್ಯಧಾರಣೆಯೂ ನೆರವೇರಿತು. ರಾಜಶೇಖರ ಹಿರೇಮಠ ಗದಗ ಅವರ ಕಲಾ ತಂಡದಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ತಿಂಥಣಿ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಮಹಾಸ್ವಾಮೀಜಿ,ಸುರಪುರ ನಿಷ್ಠಿ ಕಡ್ಲೆಪ್ಪನವರ ವಿರಕ್ತಮಠದ ಶ್ರೀ ಪ್ರಭುಲಿಂಗ ಮಹಾಸ್ವಾಮೀಜಿ,ದೇವಾಪುರ ಜಡಿಶಾಂತಲಿಂಗೇಶ್ವರ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ,ವರದಾನೇಶ್ವರ ಮಹಾಸ್ವಾಮೀಜಿ ವಾಲ್ಮೀಕಿ ಗುರುಪೀಠ ಗೋಲಪಲ್ಲಿ,ನಿಂಗಯ್ಯ ತಾತಾ ಮೌನೇಶ್ವರ ದೇವಸ್ಥಾನದ ದೇವರಗೋನಾಲ,ದೇವಿಂದ್ರ ಮಹಾಸ್ವಾಮೀಜಿ ಹಾಲಬಾವಿ ಮಠ ಬೊಮ್ಮನಹಳ್ಳಿ, ಮಲ್ಲಿಕಾರ್ಜುನ ಮುತ್ಯಾ ಮಹಲ್ ರೋಜಾ,ಕರಡಕಲ್ ಕೋರಿಸಿದ್ದೇಶ್ವರ ಶಾಖಾ ಮಠದ ರುದ್ರಮುನಿ ಶಿವಾಚಾಂiÀರ್i ಸ್ವಾಮೀಜಿ,ಅಶೋಕ ಕರಿಗಾರ ಶಖಾಪುರ,ನಿಂಗಯ್ಯ ತಾತಾ ಮಾಚಗುಂಡಾಳ,ಮಡಿವಾಳಪ್ಪ ಸ್ವಾಮೀಜಿ ತಳ್ಳಳ್ಳಿ,ನಿಂಗಯ್ಯ ಪೂಜಾರಿ ದೇವರಗೋನಾಲ ಸೇರಿದಂತೆ ಗ್ರಾಮದ ಅನೇಕ ಜನ ಮುಖಂಡರು ಹಾಗೂ ಸಾವಿರಾರು ಸಂಖ್ಯೆಯ ಜನರು ಭಾಗವಹಿಸಿದ್ದರು,ಶಿಕ್ಷಕ ಮಹಾಂತೇಶ ಗೋನಾಲ ಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here