ಕಲಬುರಗಿ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಹಕ್ಕನ್ನು ನಾನು ಮೊದಲನೇ ಬಾರಿಗೆ ಮತ ಚಲಾವಣೆ ಮಾಡುತ್ತಿದ್ದೀನಿ ಎಂದು ಶಾಂತಿನಗರ ನಿವಾಸಿ ವಿದ್ಯಾರ್ಥಿನಿ ಕೌಶಲ್ಯ ತಳವಾರ ಅವರು ಹೇಳಿದರು.
ಈಗಾಗಲೇ ನಮ್ಮ ಜಿಲ್ಲಾಡಳಿತ ಮತದಾನ ಜಾಗೃತಿ ಅಂತ ಒಳ್ಳೆ ಒಳ್ಳೆ ಕಾರ್ಯಕ್ರಮವನ್ನು ನೀಡಿ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ ಆದರಿಂದ ನಾನು ಜಿಲ್ಲಾಡಳಿತ ಮತ್ತು ಚುನಾವಣೆ ಆಯೋಗಕ್ಕೆ ಧನ್ಯವಾದ, ಮತ್ತು ಜವಾಬ್ದಾರಿಯುತ ನಾಗರಿಕರಾಗಲು ಬಯಸಿದರೆ, ಯಾವುದೇ ಚುನಾವಣೆಯ ಸಮಯದಲ್ಲಿ ನಿಮ್ಮ ಮತವನ್ನು ಚಲಾಯಿಸುವುದು ನಿಮ್ಮ ಕರ್ತವ್ಯ. ಮತದಾನವು ಸರ್ಕಾರದಲ್ಲಿ ತಮ್ಮ ಧ್ವನಿಯಾಗಿರುವ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಾಗಿದೆ.
ಸರ್ಕಾರಗಳು ಮತಗಳ ಮೂಲಕ ರಚನೆಯಾಗುತ್ತವೆ. ಮುಂದಿನ ಸರ್ಕಾರವನ್ನು ಯಾರು ರಚಿಸಬೇಕೆಂದು ಜನರು ಮತಗಳ ಮೂಲಕ ನಿರ್ಧರಿಸುತ್ತಾರೆ. ಚುನಾವಣೆಯ ಸಮಯದಲ್ಲಿ, ಜನರು ಚಲಾಯಿಸುವ ಪ್ರತಿಯೊಂದು ಮತವೂ ಮುಖ್ಯವಾಗಿದೆ, ಆದ್ದರಿಂದ ಜನರು ತಮ್ಮ ಮತಗಳನ್ನು ಚಲಾಯಿಸುವ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದು ವಿದ್ಯಾರ್ಥಿನಿ ಕೌಶಲ್ಯ ತಳವಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.