ಕಲಬುರಗಿ: ವೀರಶೈವ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಜಿಲ್ಲಾ ವೀರಶೈವ ಸಮಾಜ ಕಲಬುರಗಿ ಹಾಗೂ ಬಸವಾದಿ ಕಾಯಕ ಶರಣರ ಒಕ್ಕೂಟ ಹಾಗೂ ಬಸವಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಬಸವ ಜಯಂತಿ ಉತ್ಸವ 2024ರ ಸಮಿತಿಯನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು.
ಸಮಿತಿ ಅಧ್ಯಕ್ಷರಾಗಿ ವಿನೋದ ಪಾಟೀಲ ಸರಡಗಿ, ಉಪಾಧ್ಯಕ್ಷರಾಗಿ ಮಲ್ಲಿನಾಥ ನಾಗನಹಳ್ಳಿ, ಚನ್ನಪ್ಪ ಮರಬ, ಕಾರ್ಯಧ್ಯಕ್ಷರಾಗಿ ಚನ್ನವೀರ ಲಿಂಗನವಾಡಿ, ಪ್ರಧಾನ ಕಾರ್ಯದರ್ಶಿಗಳಾಗಿ ಮಂಜುನಾಥ ರೆಡ್ಡಿ, ದಯಾನಂದ ಪಾಟೀಲ, ಸಹ ಕಾರ್ಯದರ್ಶಿಗಳಾಗಿ ಅವಿನಾಶ ಉಪಳಾವಕರ್, ರಮೇಶ ತೆಗ್ಗಿನಮನಿ ಕೂಸನೂರ, ಅಂಬರೀಶ ನೂಲಾ, ಮಹೀಳಾ ಘಟಕದ ಅಧ್ಯಕ್ಷರಾಗಿ ಡಾ: ನಾಗವೇಣಿ ಪಾಟೀಲ ರೇವೂರ, ಉಪಾಧ್ಯಕ್ಷರಾಗಿ ಮಾಲಾ ಕಣ್ಣಿ, ಈ ಸಭೆಯಲ್ಲಿ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶರಣಕುಮಾರ ಮೋದಿ, ಜಿಲ್ಲಾ ವೀರಶೈವ ಸಮಾಜ ಅಧ್ಯಕ್ಷ ಅರುಣಕುಮಾರ ಪಾಟೀಲ ಕೊಡಲಹಂಗರಗಾ, ಮುಖಂಡರಾದ ಕಲ್ಯಾಣಪ್ಪ ಪಾಟೀಲ ಮಳಖೇಡ, ನೀಲಕಂಠರಾವ ಮೂಲಗೆ, ಸಂಗಮೇಶ ನಾಗನಹಳ್ಳಿ, ಶ್ರೀಶೈಲ ಧೂಳಿ, ಶರಣು ಬುಸನೂರ, ಮಂಜುನಾಥ ರೆಡ್ಡಿ, ಈರಣ್ಣ ಗೋಳೆದ, ಸುಭಾಶ ಬಿಜಾಪೂರೆ, ಶಂಭು ಪಾಟೀಲ ಬಳಬಟ್ಟಿ, ವೀರಣ್ಣ ಹೋನ್ನಳ್ಳಿ ಇವರ ಮುಖಂಡತ್ವದಲ್ಲಿ ಆಯ್ಕೆ ಮಾಡಲಾಯಿತು.