ಕಲಬುರಗಿ: ಮೇ. 4 ರಂದು ನಗರದ ನೂತನ ವಿದ್ಯಾಲಯ (ಎನ್.ವಿ.) ಮೈದಾನದಲ್ಲಿ ಕೋಲಿ, ಕಬ್ಬಲಿಗ ಸಮಾಜದ ಬೃಹತ್ ರಾಜ್ಯ ಮಟ್ಟದ ಸಮಾವೇಶ ನಡೆಯಲಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಮತ್ತು ಮಾಜಿ ಸಚಿವ, ಕೋಲಿ ಸಮಾಜದ ನಾಯಕ ಬಾಬುರಾವ ಚಿಂಚನಸೂರ ತಿಳಿಸಿದರು.
ನಗರದ ಮೌರ್ಯ ಹೋಟೆಲನಲ್ಲಿ ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಈ ಬೃಹತ್ ಸಮಾವೇಶಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಸಚಿವರು, ಶಾಸಕರು, ಪಕ್ಷದ ಮುಖಂಡರು, ಕೋಲಿ ಸಮಾಜದ ನಾಯಕರು, ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.
ಚುನಾವಣೆ ಬಳಿಕ ಮುಖ್ಯಮಂತ್ರಿ ನೇತೃತ್ವದಲ್ಲಿ ಸರ್ವ ಪಕ್ಷಗಳ ನಿಯೋಗ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಕೇಂದ್ರ ಸರ್ಕಾರಕ್ಕೆ ಪುನ: ಪ್ರಸ್ತಾವನೆ ಸಲ್ಲಿಸುವ ಕುರಿತು ಅಂದಿನ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಈ ಸಮಾವೇಶಕ್ಕೆ ಸಮಾಜದ ಎಲ್ಲ ಮುಖಂಡರು ಪಕ್ಷ ಭೇದ ಮರೆತು ಭಾಗವಹಿಸಿ ಸಮಾವೇಶ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿ ಭೀಮಣ್ಣ ಸಾಲಿ ರಾಜಗೋಪಾಲ್ ರೆಡ್ಡಿ, ಬಸವರಾಜ್ ಬೂದಿಹಾಳ್, ಬಸವರಾಜ್ ಹರವಾಳ್, ರಮೇಶ್ ನಾಟಿಕರ್, ಲಚ್ಚಪ್ಪ ಜಮಾದಾರ, ಸಾಯಿಬಣ್ಣ ಜಮಾದಾರ್, ಲಕ್ಷ್ಮಣ ಆವಂಟಿ, ರಾಮಲಿಂಗ ಬಾನರ, ಸಿದ್ದಪ್ಪ ಜಾಲಗಾರ, ಬಸವರಾಜ್ ಚಿನ್ಮಳ್ಳಿ, ವಿಜಯ್ ಕುಮಾರ್ ಹದಗಲ, ಶಿವಾನಂದ ಹೊನಗುಂಟಿ, ಪ್ರಕಾಶ ಕಮಕನೂರ, ಸಂದೇಶ ಕಮಕನೂರ ಇತರರಿದ್ದರು.