ಕಲಬುರಗಿ: ಸ್ಥಳೀಯ ಖಾಜಾ ಬಂದೆನವಾಜ ವಿಶ್ವ ವಿದ್ಯಾಲಯದಲ್ಲಿ ಶುಕ್ರವಾರ ಗಣಿತ, ಆಹಾರ ಮತ್ತು ನಿರ್ವಹಣೆ ವಿಭಾಗಗಳಿಂದ ವಿಶ್ವ ಭೂ ದಿನವನ್ನು ಆಚರಿಸಲಾಯಿತು.
ಶರಣಬಸವ ವಿಶ್ವವಿದ್ಯಾಲಯದ ವಿಜ್ಞಾನ, ಎಂಜಿನಿಯರಿಂಗ್ ಡೀನರಾದ ಡಾ. ನಾಗಬಸವಣ್ಣ ಗುರೂಗೋಲ ಮುಖ್ಯ ಅತಿಥಿಯಾಗಿ ಮಾತನಾಡುತ್ತˌ ಪ್ಲಾಸ್ಟಿಕ್ ಬಳಕೆಯ ಹಾನಿಗಳನ್ನು ಮಾರ್ಮಿಕವಾಗಿ ಹೇಳಿದರು.
ಮಕ್ಕಳ ಮೇಲೆ ಆಗುವ ಹಾನಿಕಾರಕ ಪರಿಣಾಮಗಳನ್ನು ವಿವರಿಸಿದರು. ಪುನಃರ್ಬಳಕೆ ಮಾಡಲಾಗದ ಪ್ಲಾಸ್ಟಿಕ್ ಆರೋಗ್ಯಕ್ಕೆ ಹಾನಿಕಾರಕ ಎಂದರು. ನೀರು, ಟೀ ಮಕ್ಕಳ ಆಟಿಕೆ, ತಿಂಡಿ ಡಬ್ಬ, ಊಟದ ಡಬ್ಬ ಎಲ್ಲ ಪ್ಲಾಸ್ಟಿಗಳನ್ನು ಒಳಗೊಳ್ಳುತ್ತಿವೆ. ಮೈಕ್ರೋ ಪ್ಲಾಸ್ಟಿಕ ಜೀವಕ್ಕೆ ಮಾರಕ. ಬಳಕೆ ಯಾಗುವ ಪ್ಲಾಸ್ಟಿಕ್ ಕೊಳೆಯಲು ಸಾವಿರ ವರ್ಷಬೇಕು. ಇವು ಭೂ ಮಾಲಿನ್ಯವೇಸಿಗುತ್ತವೆ. ಅದಕ್ಕಾಗಿ ಬಟ್ಟೆ ಚೀಲಗಳನ್ನು ಬಳಸಲು ಪ್ರಾರಂಭಿಸುವುದು ಉತ್ತಮ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆಬಿಎನ್ ವಿವಿ ಡೀನ ಡಾ. ನಿಶಾತ್ ಅರೀಫ ಹುಸ್ಸೇನಿ ಮಾತನಾಡುತ್ತˌ ಪರಿಸರವನ್ನು ಕಾಪಾಡಿಕೊಂಡೆ ಅಭಿವೃದ್ಧಿ ಹೊಂದಬೇಕು. ಪ್ಲಾಸ್ಟಿಕ್ ಬಳಕೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ವಿದ್ಯಾವಂತರು ಈ ವಿಷಯದ ಬಗ್ಗೆ ಜನರಲ್ಲಿ ಜಾಗ್ರತಿ ಮೂಡಿಸಬೇಕು. ಸಮಾಜವನ್ನು ಪ್ಲಾಸ್ಟಿಕ್ ಮುಕ್ತ ಮಾಡಿದಲ್ಲಿ ವಿಶ್ವ ಭೂ ದಿನ ಅರ್ಥ ಪೂರ್ಣವಾಗುವುದು ಎಂದರು.
ವಿಶ್ವ ಭೂ ದಿನದ ಅಂಗವಾಗಿ ಏರ್ಪಡಸಿದ್ದ ವಿವಿಧ ಸ್ಪರ್ಧೆಗಳ ವಿಜೇತರರಿಗೆ ಬಹುಮಾನಗಳನ್ನು ನೀಡಲಾಯಿತು.
ಡಾ. ಸಮದ್ ಪ್ರಾರ್ಥಿಸಿದರೆ, ತಸ್ಲಿಂ ಬಾನು ಸ್ವಾಗತಿಸಿದರು.
ಡಾ. ಸನಾ ಏಜಾಜ್ ವಂದಿಸಿದರೆ ನಿಲೋಫರ್ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕಲಾ, ನಿಕಾಯ, ಭಾಷಾ, ಮಾನವೀಕತೆ, ಸಮಾಜ ವಿಜ್ಞಾನ, ವಿಜ್ಞಾನ ನಿಕಾಯದ ಎಲ್ಲ ಪ್ರಧ್ಯಾಪಕರು ಹಾಜರಿದ್ದರು.