ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಚುನಾವಣೆ ಸೆ.29ಕ್ಕೆ: ರಂಗೇರಿದ ಚುನಾವಣಾ ಅಖಾಡ

0
313

ಕಲಬುರಗಿ: ಅಖಿಲ ಭಾರತ ವೀರಶೈವ ಮಹಾಸಭಾ ಕಲಬುರಗಿ ಜಿಲ್ಲಾ ಘಟಕದ ಚುನಾವಣೆ ಇದೇ ಸೆ.‌29ರಂದು ನಡೆಯಲಿದೆ.

ಇದುವರೆಗೆ ಅವಿರೋಧ ಆಯ್ಕೆಯಾಗುತ್ತಿದ್ದ ಈ ಜಿಲ್ಲಾ ಘಟಕಕ್ಕೆ ಇದೇ ಪ್ರಥಮ ಬಾರಿಗೆ ಜಿಲ್ಲಾ ಘಟಕದ ಚುನಾವಣೆ ನಡೆಯುತ್ತಿದ್ದು, ಮತದಾರರಿಗೆ ತೀವ್ರ ಕುತೂಹಲ ಕೆರಳಿಸಿದೆ.

Contact Your\'s Advertisement; 9902492681

ಈ ಬಾರಿಯೂ ಅವಿರೋಧ ಆಯ್ಕೆ ಮಾಡಬೇಕೆಂದು ಬಯಸಿ ಚುನಾವಣಾ ಸ್ಪರ್ಧಾಳು ಹಾಗೂ ಮುಖಂಡರ ಸಭೆಯನ್ನು ಈಗ್ಗೆ ಕೆಲವು ದಿನಗಳ ಹಿಂದೆ ಕರೆಯಲಾಗಿತ್ತು. ಅಲ್ಲಿ ಯಾವುದೇ ಒಮ್ಮತಕ್ಕೆ ಬರದೆ ಪರಸ್ಪರ ದೋಷಾರೋಪಣೆ ಮತ್ತು ಕೈ ಕೈ ಮಿಲಾಯಿಸುವ ಮಟ್ಟಿಗೆ ಹೋಗಿರುವುದರಿಂದ ಅನಿವಾರ್ಯವಾಗಿ ಚುನಾವಣೆ ನಡೆಸಲು ತೀರ್ಮಾನಿಸಲಾಯಿತು.

ಜಿಲ್ಲಾಧ್ಯಂತ 3820 ಸದಸ್ಯರಿದ್ದು, ಅಧ್ಯಕ್ಷ ಸೇರಿಸಂತೆ ಒಟ್ಟು 31 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಒಂದು ಅಧ್ಯಕ್ಷ ಸ್ಥಾನಕ್ಕೆ, 20 (ಪುರುಷ) ಸಾಮಾನ್ಯ ಸ್ಥಾನಕ್ಕೆ, 10 ಸಾಮಾನ್ಯ (ಮಹಿಳೆ) ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಹೀಗಾಗಿ ಇದೀಗ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ಪಾಟೀಲ ಕಲ್ಲಹಂಗರಗಾ, ಮಾಜಿ ಮೇಯರ್ ಶರಣು ಮೋದಿ, ಹಿರಿಯ ಮುಖಂಡರಾದ ಜಿ.ಡಿ. ಅಣಕಲ್ ಹಾಗೂ ಶಿವಶರಣಪ್ಪ ಸಿರಿ ಮುಂತಾದವರು ಪ್ರತ್ಯೇಕ ಪೆನಲ್ ರಚಿಸಿಕೊಂಡು, ಅಧ್ಯಕ್ಷ ಸ್ಥಾನ ಬಯಸಿ ಸ್ಪರ್ಧೆ ಬಯಸಿದ್ದಾರೆ ಎಂದು ತಿಳಿದು ಬಂದಿದೆ.
ಚುನಾವಣೆಗೆ ಸ್ಪರ್ಧಿಸಿದ, ಸ್ಪರ್ಧೆ ಬಯಸಿದ ಎಲ್ಲ ಹುರಿಯಾಳುಗಳು ಮತದಾರ ಬಾಂದವರಿಗೆ ಫೋನ್ ಮಾಡುವುದು, ವಾಟ್ಸ್ ಪ್, ಫೇಸ್ ಬುಕ್ ನಲ್ಲಿ ಮನವಿ ಮಾಡುವ ಕಾರ್ಯ ಜೋರಾಗಿಯೇ ನಡೆದಿದೆ.

ಕಲಬುರಗಿ ಜಿಲ್ಲೆಯ ಎಲ್ಲ ತಾಲ್ಲೂಕು ಗ್ರಾಮಗಳಲ್ಲದೆ ನಗರದಲ್ಲಿಯೇ ಹೆಚ್ಚು ಮತದಾರರಿರುವುದರಿಂದ ಎಲ್ಲ ಹುರಿಯಾಳುಗಳು ನಗರ ಮತದಾರರಿಗೆ ಹೆಚ್ಷಿನ ಮಹತ್ವ ನೀಡುತ್ತಿದ್ದಾರೆ. ಇನ್ನು ಕೆಲವರು ಚುನಾವಣೆ ಹಿನ್ನೆಲೆಯಲ್ಲಿಯೆ ಹೆಚ್ಚಿನ ಮತದಾರರ ಎನ್ರೂಲ್ ಮೆಂಟ್ ಮಾಡಿಸಿರುವುದು ಬಹಿರಂಗ ಸತ್ಯವಾಗಿದೆ. ಈಗಂತೂ ಚುನಾವಣಾ ಅಖಾಡ ಸಜ್ಜುಗೊಂಡಿದ್ದು, ಕೊನೆಯಲ್ಲಿ ಕಣದಲ್ಲಿ ಯಾರ್ಯಾರ ಮಧ್ಯೆ ಕುಸ್ತಿ ಏರ್ಪಡುತ್ತದೆ ಎಂಬುದನ್ನು ಈಗಲೇ ಹೇಳಲು ಬರುವುದಿಲ್ಲ.

ಅಧ್ಯಕ್ಷರ ಹುದ್ದೆ ಮಾತ್ರ ನೇರ ಆಯ್ಕೆ ಇದ್ದು, ಆಯ್ಕೆಗೊಂಡ ಕಾರ್ಯಕಾರಿ ಸಮಿತಿಯವರು ಕಾರ್ಯದರ್ಶಿ, ಉಪಾಧ್ಯಕ್ಷ ಹಾಗೂ ಖಜಾಂಚಿ ಹುದ್ದೆಗಳನ್ನು ಆಯ್ಕೆ ಮಾಡಬೇಕಿದೆ. ಪ್ರಮುಖರಾದ ಶರಣು ಪಪ್ಪಾ, ಶರಣು ಭೂಸನೂರ, ಡಾ. ಚಿದಂಬರ ಪಾಟೀಲ ಮರಗುತ್ತಿ, ಡಾ. ಎಸ್. ಎಸ್ ಪಾಟೀಲ, ರಾಜಕುಮಾರ ಕೋಟೆ ಮುಂತಾದವರು ಕಾರ್ಯಕಾರಿ ಸಮಿತಿ ಸ್ಥಾನಕ್ಕೆ ಸ್ಪರ್ಧೆ ಬಯಸಿದ್ದಾರೆ ಎನ್ನಲಾಗಿದೆ

ಈ ಎಲ್ಲ ಚಟುವಟಿಕೆಗಳು ಗರಿಗೆದರಿರುವುದರಿಂದ ಒಟ್ಟಾರೆಯಾಗಿ ಇದೀಗ ಚುನಾವಣಾ ಕಣ ರಂಗೇರುತ್ತಿರುವುದಂತೂ ಸತ್ಯ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here