ಕಲಬುರಗಿ, ಜೇವರ್ಗಿ; ಲೋಕಸಭೆ ಚುನಾವಣೆ ಮತದಾನ ದಿನ ಸಮೀಪಿಸುತ್ತಿದ್ದಂತೆಯೇ ಜೇವರ್ಗಿ ಮತಕ್ಷೇತ್ರದಲ್ಲಿ ಅಲ್ಲಿನ ಶಾಸಕರಾದ, ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ. ಅಜಯ್ ಸಿಂಗ್ ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ರಾಧಾಕೃಷ್ಣ ದೊಡ್ಡಮನಿ ಅವರ ಪರವಾಗಿ ಮತ ಯಾಚನೆಯನ್ನ ಚುರುಕುಗೊಳಿಸಿದ್ದಾರೆ.
ಶನಿವಾರ ಉರಿ ಬಿಸಿಲನ್ನೂ ಲೆಕ್ಕಿಸದೆ ಡಾ. ಅಜಯ್ಜೈ ್ಸಿಂಗ್ ಅವರು ಜೈನಾಪುರ ಕ್ರಾಸ್ ನಿಂದ ಬೈಕ್ ಹತ್ತಿ ಯುವ ಪಡೆಯೊಂದಿಗೆ ಭಾರಿ ರ‍್ಯಾಲಿ ಮೂಲಕ ಕೆಲ್ಲೂರ್, ಹಾಲಗಡಲಾ, ಶಕಾಪುರ ಎಸ್ ಎ, ಅವರಾದ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಿ ಗಮನ ಸೆಳೆದರು. ಅಲ್ಲೆಲ್ಲಾ ಆಯಾ ಗ್ರಾಮಗಳ ಹಿರಿಯರು, ಮುಖಂಡರ ಜೊತೆಗೆ ಸಭೆ ನಡೆಸಿ ಮತಯಾಚನೆ ಮಾಡಿದರು.
ಆಂದೋಲ ಗ್ರಾಮದಲ್ಲಿಯೂ ನಡೆದ ಸಭೆಯಲ್ಲಿ ಡಾ. ಅಜಯ್ ಸಿಂಗ್ ಮಾತನಾಡಿ ಕಾಂಗ್ರೆಸ್ ಜನಪರ ಯೋಜನೆಗಳನ್ನು ಪಟ್ಟಿ ಮಾಡಿದರಲ್ಲದೆ, ಕಲಬುರಗಿಗೆ ಡಾ. ಖರ್ಗೆ ಕೊಡುಗೆಗಳನ್ನು ವಿವರಿಸುತ್ತ ಬಿಜೆಪಿ ಖಾಲಿ ಚೊಂಬು ನೀಡಿದೆ ಎಂದು ಜರಿದರು. ಸರಳ ಸಜ್ಜನಿಕೆಯ ಡಾ. ರಾಧಾಕೃಷ್ಣರಿಗೆ ಮತ ಹಾಕಿ ಗೆಲ್ಲಿಸುವಂತೆ ಮನವಿ ಮಾಡಿದರು. ಆಂದೋಲ, ಪಂಚಾಯಿತಿ ವ್ಯಾಪ್ತಿಯ ಮುಖಂಡರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಶನಿವಾರದ ದಿನವೇ ಡಾ. ಅಜಯ್ ಸಿಂಗ್ ತಮ್ಮ ಮತ ಯಾಚನೆ ಮುಂದುವರಿಸಿ ಜೇವರ್ಗಿ ತಾಲ್ಲೂಕಿನ ಬಿರಾಳ ಬಿ ಗ್ರಾಮದಲ್ಲಿ ಸಾರ್ವಜನಿಕ ಸಭೆ ನಡೆಸಿದರು. ಆಂದೋಲ ಜಿಲ್ಲಾ ಪಂಚಾಯತಿಯ ವ್ಯಾಪ್ತಿಯ ಬಿರಾಳ ಬಿ, ಬಿರಾಳ ಕೆ ,ಮಲ್ಲಾಬಿ,ಮಲಾ ಕೆ, ಹೊತ್ತಿನಮಡು, ರಾಂಪುರ್ , ಹೊನಾಳ ಪಂಚಾಯಿತಿ ವ್ಯಾಪ್ತಿಯ ಮುಖಂಡರೊಂದಿಗೆ ಸಭೆ ನಡೆಸಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಜೇವರ್ಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿದ್ದಲಿಂಗ ರೆಡ್ಡಿ ಇಟಗಿ, ರುಕ್ಕುಮ್ ಪಟೇಲ್ ಇಜೇರಿ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಕಾಶಿಮ್ ಪಟೇಲ್ ಮುದುಬಾಳ್, ಗೌಡಪಗೌಡ ಪಾಟೀಲ್ ಆಂದೋಲ ಗುರುಲಿಂಗಪ್ಪ ಗೌಡ ಪಾಟೀಲ್ ಆಂದೋಲ , ಮಾಜಿದ ಗಿರಣಿ ,ಭೀಮರಾವ್ ಹೊನ್ನಾಳ, ಸೂಫಿ ಸಾಬ್ ಗoವಾರ , ಪ್ರಶಾಂತ ಪಾಟೀಲ್ ಜೈನಾಪುರ ಸೇರಿದಂತೆ ಅನೇಕ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಯುವ ಕಾರ್ಯಕರ್ತರು. ಉಪಸ್ಥಿತರಿದ್ದರು.