ಕಲಬುರಗಿ: ದೇಶದಲ್ಲೇಡೆ ಮೂರನೇ ಹಂತದನ ಮತದಾನ ಆರಂಭವಾಗಿದ್ದು, ರಾಜ್ಯದಲ್ಲಿ ಎರಡನೇ ಹಂತದ ಮತದಾನ ಬೆಳಿಗ್ಗೆ 7 ಗಂಟೆಯಿಂದ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ. ರಾಜ್ಯದ ಹಲವು ಕಡೆಗಳಲ್ಲಿ ಮತಯಂತ್ರ ಕೈಕೊಟ್ಟಿದ ಕಾರಣ ಮತಗಟ್ಟೆಯಲ್ಲಿ ಮತದಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.
ಬಾಗಲಕೋಟೆ ನಗರದ ಸರ್ಕಾರಿ ಶಾಲೆಯಲ್ಲಿನ ಮತಯಂತ್ರ ಕೈಕೊಟ್ಟಿದೆ. 8 ಗಂಟೆಯಾದರೂ ಮತದಾನ ಆರಂಭವಾಗಲಿಲ್ಲ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮತಗಟ್ಟೆಯಲ್ಲಿ ಇವಿಎಂ ಕೈಕೊಟ್ಟಿದೆ. ಹಾಗಾಗಿ ಮತದಾನ ಮಾಡಲು ಬಂದ ಕೆಲವು ಮತದಾರರು ಮತದಾನ ಮಾಡದೆ ವಾಪಸ್ ತೆರಳಿದ್ದಾರೆಂದು ಕೇಳಿಬರುತ್ತಿದೆ.
ಅದೇ ರೀತಿ ಶಿರಮಗೊಂಡನಹಳ್ಳಿ ಗ್ರಾಮದ ಸಖಿ ಮತಗಟ್ಟೆಯಲ್ಲಿ ಯಂತ್ರ ಕೈಕೊಟ್ಟಿದೆ. ಹಾಗಾಗಿ ಒಂದು ಗಂಟೆ ಮತದಾನ ಸ್ಥಗಿತಗೊಂಡಿತ್ತು. ನಂತರ ಸಿಬ್ಬಂದಿ ಹೊಸ ಯಂತ್ರ ಅಳವಡಿಸಿದ್ದಾರೆ. ಮತದಾನ ಪ್ರಾರಂಭಿಸಿದ್ದಾರೆ ಎಂದು ಮತದಾರರು ತಿಳಿಸಿದ್ದಾರೆ.
ತಾಂತ್ರಿಕ ದೋಷ ಹಿನ್ನೆಲೆಯಲ್ಲಿ, ವಿಜಯಪುರ ಜಿಲ್ಲೆಯ ಚಡಚಣ ಮತಗಟ್ಟೆ ಸಂಖ್ಯೆ ಮತದಾನ ತಡವಾಗಿ ಮತದಾನ ಆರಂಭವಾಯಿತೆಂದು ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.