ಸುರಪುರ: ಅಖೀಲ ಬಾರತೀಯ ವಿದ್ಯಾರ್ಥಿ ಪರಿಷತ್ ತಾಲ್ಲೂಕು ಘಟಕಕ್ಕೆ ನೂತನ ಕಾರ್ಯಕಾರಿಣಿ ರಚಿಸಲಾಯಿತು.
ಸಭೆಯಲ್ಲಿ ಭಾಗವಹಿಸಿದ್ದ ಪರಿಷತ್‌ನ ಪ್ರಮುಖ ಮಾರ್ಗದರ್ಶಕ ಉಪೇಂದ್ರ ನಾಯಕ ಸುಬೇದಾರ ಮಾತನಾಡಿ, ದೇಶದಲ್ಲಿನ ಎಲ್ಲಾ ಸಂಘಟನೆಗಳಿಗಿಂತಲು ಮುಂಚುಣಿ ಸ್ಥಾನದಲ್ಲಿ ಇಂದು ಎಬಿವಿಪಿ ಸಂಘಟನೆಯಿದೆ. ದೇಶ ಸೇವೆ, ದೇಶಭಿಮಾನ ಮತ್ತು ವಿದ್ಯಾರ್ಥಿಗಳ ಎಲ್ಲಾ ಬೇಡಿಕೆಗಳಿಗೆ ತಕ್ಷಣಕ್ಕೆ ಸ್ಪಂಧಿಸುವ ಮೂಲಕ ಸಮಸ್ಯೆಗಳ ನಿವಾರಣೆಗೆ ಸ್ಪಂಧಿಸುವ ಮೊದಲ ಸಂಘಟನೆ ಎಬಿವಿಪಿಯಾಗಿದೆ. ಇದನ್ನು ಅದೇರೀತಿಯಾಗಿ ಕಟ್ಟಿಕೊಂಡು ಹೋಗುವ ಕೆಲವನ್ನು ಎಲ್ಲಾ ನೂತನ ಪದಾಧಿಕಾರಿಗಳು ಮಾಡುವಂತೆ ಕಿವಿಮಾತು ಹೇಳಿದರು.
ನಂತರ ನಡೆದ ಕಾರ್ಯಕಾರಿಣಿ ನೇಮಕದಲ್ಲಿ ತಾಲ್ಲೂಕು ಸಂಚಾಲಕರನ್ನಾಗಿ ಆಕಾಶ ಸುರಪುರ.ಸಹ ಸಂಚಾಲಕರನ್ನಾಗಿ ಮರೆಪ್ಪ ಕುಂಬಾರಪೇಟ,ನಗರ ಕಾರ್ಯದರ್ಶಿಯಾಗಿ ಪರಶುರಾಮ ಬೈಲಕುಂಟಿ,ಸಹ ಕಾರ್ಯದರ್ಶಿ ಶಂಕರಲಿಂಗ ಹಾಗು ಧರ್ಮರಾಜ,ಹಾಸ್ಟೆಲ್ ಪ್ರಮುಖ ನಿಂಗಯ್ಯ ಅಮ್ಮಾಪುರ,ಸಹ ಪ್ರಮುಖ ಮಾನು ಮಕಾಶಿ,ಕಾರ್ಯಾಲಯ ಕಾರ್ಯದರ್ಶಿ ಗೋಪಾಲ ಗುಡಿಹಾಳ,ಸಹ ಕಾರ್ಯದರ್ಶಿ ವರುಣ ಗೋನಾಲ,ತಾಲ್ಲೂಕು ಪ್ರಮುಖ ತಿಗಳಪ್ಪ ಕವಡಿಮಟ್ಟಿ,ಸಾಮಾಜಿಕ ಜಾಲತಾಣದ ಪ್ರಮುಖ ಬಸ್ಸು ಸುರಪುರ,ಮಹಿಳಾ ಪ್ರಮುಖದೇವಮ್ಮ, ಸಹ ಪ್ರಮುಖ ಯಂಕಮ್ಮ,ಮೀನಾಕ್ಷಿ,ಪತ್ರಿಕಾ ಪ್ರಮುಖ ನಾಗೇಂದ್ರ ಕಟಗೇರಿ,ಸಹ ಪ್ರಮುಖ ಅಂಬ್ರೇಶ ನಾಯಕ, ಎಸ್.ಐ.ಡಿ ಪ್ರಮುಖ ಹಣಮಂತ ಮಂಜಲಾಪುರ ಹಾಗು ಕಾರ್ಯಕಾರಿಣಿ ಸದಸ್ಯರನ್ನಾಗಿ ಹುಲಗಪ್ಪ,ಶಂಕರ ತಳವಾರಗೇರಾ,ಮಲ್ಲಯ್ಯ ಹಿರೇಮಠ,ನಿಂಗರಾಜ ಹಯ್ಯಾಳ ಇವರನ್ನು ನೇಮಕಗೊಳಿಸಲಾಯಿತು.ಈ ಸಂದರ್ಭದಲ್ಲಿ ಶರಣು ಬಿ.ನಾಯಕ ಇತರರಿದ್ದರು.