ವಲ್ಲಭಬಾಯಿ ಪಟೇಲ್ ಮೂರ್ತಿ ಆವರಣ ಅಭೀವೃಧ್ಧಿಗೆ ಹೋರಾಟಗಾರರ ಒತ್ತಾಯ

0
44

ಸುರಪುರ: ನಗರದ ಹೃದಯ ಭಾಗದಲ್ಲಿರುವ ಸರ್ದಾರ ವಲ್ಲಭಬಾಯಿ ಪಟೇಲರ ಮೂರ್ತಿ ಆವರಣ ಸ್ವಚ್ಛತೆಗೊಳಿಸದೆ ಸರಕಾರ ನಿರ್ಲಕ್ಷ್ಯ ತೋರುವ ಮೂಲಕ ಕಲ್ಯಾಣ ಕರ್ನಾಟಕ ಭಾಗಕ್ಕೆ ಸ್ವಾತಂತ್ರ್ಯ ದೊರಕಿಸಿದ ಮಹಾನ್ ವ್ಯಕ್ತಿಗೆ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಅವಮಾನಿಸುತ್ತಿದೆ ಎಂದು ಐತಿಹಾಸಿಕ ಸ್ಥಳಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ ರಾಜಾ ಪಿಡ್ಡನಾಯಕ ಆಕ್ರೋಶ ವ್ಯಕ್ತಪಡಿಸಿದರು.

ಸರ್ದಾರ ವಲ್ಲಭಬಾಯಿ ಪಟೇಲರ ಆವರಣದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿ,ಇದನ್ನು ಈ ಮೊದಲು ರಮಣಪ್ಪ ನಾಯಕನ ಕಟ್ಟೆ ಎಂದು ಕರೆಯುತ್ತಿದ್ದರು.ಈ ಸ್ಥಳಕ್ಕೆ ತನ್ನದೆ ಆದ ವಿಶೇಷತೆಯಿದೆ.ಅಲ್ಲದೆ ಇಡೀ ಭಾರತದಲ್ಲಿಯೇ ಸರ್ದಾರ ವಲ್ಲಭಬಾಯಿ ಪಟೇಲರ ಇಂತಹ ಮೂರ್ತಿ ಕೇವಲ ಎರಡು ಇವೆ.ಅದುಕೂಡ ದೇಶವೆ ಈ ಮೂರ್ತಿಯ ಬಗ್ಗೆ ಹೆಮ್ಮೆ ಪಡುವಂತಿದೆ,ಆದರೆ ಇಂತಹ ಮೂರ್ತಿಯ ಸ್ಥಳವನ್ನು ಅಭಿವೃಧ್ಧಿಗೊಳಿಸದೆ ಸರಕಾರ ಪಟೇಲರಿಗೆ ಅವಮಾನಿಸುತ್ತಿದೆ ಎಂದು ಆರೋಪಿಸಿದರು.

Contact Your\'s Advertisement; 9902492681

ಮತ್ತೋರ್ವ ಹೋರಾಟಗಾರ ವೆಂಕಟೇಶ ಭಕ್ರಿ ಮಾತನಾಡಿ,ಈ ಆವರಣವನ್ನು ಅಭಿವೃಧ್ಧಿ ಪಡಿಸಲು ಅನೇಕಬಾರಿ ಮನವಿ ಸಲ್ಲಿಸಲಾಗಿದೆ.ಆದರೆ ಯಾವುದಕ್ಕು ಸ್ಪಂಧನೆಯಿಲ್ಲ.ಪ್ರತಿ ವರ್ಷದ ವಿಮೋಚನಾ ದಿನಾಚರನೇ ಕಾರ್ಯಕ್ರಮದಲ್ಲಿ ಬೊಗಳೆ ಭಾಷಣ ಹೊಡೆದು ಅಭಿವೃಧ್ಧಿಗೊಳಿಸುವುದಾಗಿ ಹೇಳಿ ಹೋದವರು ಮತ್ತೆ ಮುಂದಿನ ವರ್ಷದ ವಿಮೋಚನಾ ದಿನಕ್ಕೆ ಇತ್ತ ನೋಡುತ್ತಾರೆ.ಇಂತಹ ನಿರ್ಲಕ್ಷ್ಯಕ್ಕೆ ನಮ್ಮ ಖಂಡನೆಯಿದೆ.

ಕೂಡಲೆ ಜಿಲ್ಲಾಡಳಿತ ಮೂರ್ತಿಗೆ ಸೂಕ್ತ ಭದ್ರತೆ ಒದಗಿಸಬೇಕು.ಆವರಣವನ್ನು ಉದ್ಯಾನವನವನ್ನಾಗಿ ಅಭಿವೃಧ್ಧಿಗೊಳಿಸಬೇಕೆಂದು ಆಗ್ರಹಿಸಿ ತಹಸೀಲ್ದಾರ ಸುರೇಶ ಅಂಕಲಗಿಯವರಿಗೆ ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನ,ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಶಾರದ ಬಿ.ಬೇವಿನಾಳ,ಬಿಇಒ ನಾಗರತ್ನ ಓಲೆಕಾರ,ಎಪಿಎಂಸಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ,ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವ ದರಬಾರಿ ವೇದಿಕೆ ಮೇಲಿದ್ದರು. ಗುರುನಾಥರೆಡ್ಡಿ ಶೀಲವಂತ,ವೆಂಕಟೇಶ ನಾಯಕ ಜಲ್ಲಿಪಾಳಿ,ಬಾಲರಾಜ ಚಿನ್ನಾಕಾರ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here