ಕಲಬುರಗಿ: ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ಅಲ್ಪ ಸಂಖ್ಯಾತರ ನೌಕರರ ಸಂಘದಿಂದ 2023-24ನೇ ಸಾಲಿನಲ್ಲಿ ಹೆಚ್ಚು ಅಂಕಗಳಿಸಿದ. ಅಲ್ಪಸಂಖ್ಯಾತ ಸರಕಾರಿ ನೌಕರರ ಮಕ್ಕಳಿಗೆ ಮೇ 26 ರಂದು ಬೆಳಗ್ಗೆ 11ಕ್ಕೆ ನಗರದ ಕನ್ನಡ ಭವನದಲ್ಲಿ ಸನ್ಮಾನ ಸಮಾರಂಭ ನಡೆಯಲಿದೆ.
ಮುಸ್ಲಿಂ, ಕ್ರೈಸ್ತ, ಜೈನ್, ಸಿಖ್ ಹಾಗೂ ಬೌದ್ಧ ಸಮಾಜದ ಹೆಚ್ಚು ಗಳಿಸಿದ ಅಂಕವೀರ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು ಎಂದು ಸಂಘದ ಅಧ್ಯಕ್ಷ ಸಯ್ಯದ್ ನಜೀರೊದ್ದಿನ್ ಮುತ್ತವಲ್ಲಿ ತಿಳಿಸಿದ್ದಾರೆ.
2023-24ನೇ ಸಾಲಿನ 10ನೇ ತರಗತಿಯಲ್ಲಿ ಶೇ.90 ಕ್ಕಿಂತ ಅಧಿಕ ಹೆಚ್ಚಿನ ಅಂಕ ಹಾಗೂ ಪಿಯುಸಿಯಲ್ಲಿ ಶೇ.95 ಕ್ಕಿಂತ ಅಧಿಕ ಅಂಕ ಪಡೆದ ಅಲ್ಪ ಸಂಖ್ಯಾತರ ಸರಕಾರಿ ನೌಕರರ ಹಾಗೂ ನಿವೃತದ ಸಂಘದ ಸದಸ್ಯರ ಮಕ್ಕಳು ಕಲಬುರಗಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಅಲ್ಪ ಸಂಖ್ಯಾತರ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ತಮ್ಮ ಉತ್ತೀರ್ಣಗೊಂಡ ದಾಖಲಾತಿಗಳಾದ ಅಂಕಪಟ್ಟಿ, ಆಧಾರ ಕಾರ್ಡ್, ಪಾಸಪೆÇೀರ್ಟ್ ಅಳತೆಯ ಭಾವಚಿತ್ರ ಹಾಗೂ ಸರಕಾರಿ ಕೆಲಸದ ಮೇಲೆ ಇರುವ ಕುರಿತು ಯಾವುದಾದರು ದಾಖಲಾತಿಯೊಂದಿಗೆ ಮೇ 22 ರಂದು ಸಾಯಂಕಾಲ 6.30 ರ ವಳಗಾಗಿ ಸಂಘದ ಕಛೇರಿಯಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ವ 9845478234 ,9448212165, 9449933661 ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.