ಕಲಬುರಗಿ: ಹಳೆ ಮಕ್ತಂಪುರ ನಲ್ಲಿರುವ ಪಟ್ಟಸಾಲಿ ಸಮಾಜದ ಸಾಲೇಶ್ವರ ಮಂದಿರ ಹಾಗೂ ಶ್ರೀ ದೇವರ ದಾಸಿಮಯ್ಯ ದೇವಸ್ಥಾನದಲ್ಲಿ ನೇಕಾರ ಸಮಾಜಗಳ ಮಹಾ ಒಕ್ಕೂಟದ ಸಭೆ ಜರುಗಿತು.
ಕಲ್ಯಾಣ ಕರ್ನಾಟಕ ಭಾಗದ ನೇಕಾರ ಕಾರ್ಯಕರ್ತ ರಿಗೆ ಈ ಬಾರಿ ವಿಧಾನ ಪರಿಷತ್ ಗೆ ಆಯ್ಕೆ ಗೊಳಿಸುವ ನಿಟ್ಟಿನಲ್ಲಿ ಆಗ್ರಹಿಸಿ, ಒತ್ತಾಯಿಸುವ ಮೂಲಕ ಬಿಜೆಪಿಯ ವರಿಷ್ಠ ಪಧಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸುವ ಒಮ್ಮತದ ನಿರ್ಣಯ ತೆಗೆದು ಕೊಳ್ಳಲಾಯಿತು.
ಜಿಲ್ಲಾ ನೇಕಾರ ಪ್ರಕೋಷ್ಠದ ಸಂಚಾಲಕರಾದ ಶಿವಲಿಂಗಪ್ಪಾ ಅಷ್ಟಗಿ ಯವರ ನೈತ್ರುತ್ವದಲ್ಲಿ ಎಲ್ಲರನ್ನೂ ಸ್ವಾಗತಿಸಿ ಸಭೆ ಪ್ರಾರಂಭಿಸಲಾಯಿತು. ಮೊದಲಿಗೆ ಸಪ್ತ ನೇಕಾರರ ಪಟ್ಟಸಾಲಿ ಸಮಾಜದ ಅಧ್ಯಕ್ಷರು ಮತ್ತು ಹಿರಿಯರಾದ ಅಲ್ಲದೆ ಸಾಕ್ಷಾತ್ ದಾಸಿಮಯ್ಯ ಸ್ವರೂಪಿಗಳಾದ 98 ವರ್ಷದ ಶ್ರೀ ಮಡಿವಾಳಪ್ಪ ಹತ್ತೂರೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಪ್ರಸ್ತುತ ಜಿಲ್ಲೆಯಲ್ಲಿ ನೇಕಾರರ ಪರ್ವ ಪ್ರಾರಂಭವಾಗಲಿದೆ, ಕಾರಣ, ನಮ್ಮ ಪ್ರತಿನಿಧಿ ಆಯ್ಕೆ ನಮ್ಮ ಹಕ್ಕು ಎನ್ನುವ ನಿಲುವು ನಮ್ಮ ಸಮುದಾಯ ಹೊಂದಬೇಕು ಎಂದು ತಿಳಿಸಿದರು.
ನಂತರ ಸ್ವಕುಳ ಸಾಲಿ ಸಮಾಜದ ಅಧ್ಯಕ್ಷರಾದ ಶ್ರೀ ನಾರಾಯಣ ರಾವ ಸಿಂಘಾಡೆ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ, ಸೂಕ್ತ ಸಮಯದಲ್ಲಿ ಪ್ರಾತಿನಿಧ್ಯ ಪಡೆಯಲು ಪ್ರಯತ್ನಿಸಿ, ಒತ್ತಾಯಿಸಿದರೆ ಮಾತ್ರ ನಮ್ಮ ಸಮುದಾಯದ ವ್ಯಕ್ತಿಗೆ ಅವಕಾಶ ಸಿಗುತ್ತದೆ ಎಂದು ತಿಳಿಸಿದರು.
ಕೊನೆಯಲ್ಲಿ, ನೇಕಾರ ದೇವಾಂಗ ಸಮಾಜದ ಯುವ ಮುಖಂಡ ಲಕ್ಷೀಕಾಂತ ಜೋಳದ ಸಭೆಯಲ್ಲಿ ಮಾತನಾಡಿ, ಸಾಮಾಜಿಕವಾಗಿ ಮತ್ತು ಪ್ರಾದೇಶಿಕವಾಗಿ ನಮ್ಮ ಕಲ್ಯಾಣ ಕರ್ನಾಟಕ ಭಾಗದ ನೇಕಾರ ನ್ಯಾಯವಾದಿಗಳು ಸದಾ ಸಮುದಾಯದ ಸಮಸ್ಯೆಗಳ್ಳನ್ನು ಕಾನೂನಾತ್ಮಕವಾಗಿ ಹೋರಾಟ ಗೈದು ನ್ಯಾಯ ದೊರಕಿಸಿ ಕೊಡುವ ಮನೋಭಾವ ಉಳ್ಳ, ವ್ಯಕ್ತಿಗಳಾದ ಅಲ್ಲದೆ ಬಿಜೆಪಿಯ ಹಿರಿಯ ಕಾರ್ಯಕರ್ತರಾದ ನ್ಯಾಯವಾದಿ ಜೇನವೆರಿ ವಿನೋದ ಕುಮಾರ ರವರು ಸೂಕ್ತ ಎಂದು ಒತ್ತಾಯಿಸಿ, ಮನವಿ ಸಲ್ಲಿಸಿ ವಿಧಾನ ಪರಿಷತ್ ಸದಸ್ಯರಾಗಲು ಪಕ್ಷಾತೀತವಾಗಿ ಬೆಂಬಲಿಸೋಣ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಜಿಲ್ಲಾ ಪಟ್ಟಸಾಲಿ ಮತ್ತು ಜಿಲ್ಲಾ ಸ್ವಕುಳಸಾಲಿ ಸಮಾಜಗಳ ಬೆಂಬಲ ಸೂಚಿಸುವ ಪತ್ರಗಳನ್ನು ನೀಡಲಾಯಿತು. ಸಭೆಯಲ್ಲಿ ತ್ರಿಮತಸ್ತ ನೇಕಾರ ಸದಸ್ಯರಾದ ರೇವಣ್ಣಸಿದ್ದಪ್ಪಾ ಗಡ್ಡದ, ಶಿವಶಂಕರ್ ನನ್ನಾ, ಸಂತೋಷ ಲಖಮಣ, ವದಾಗ, ಪಿಂಟೋ ಎಡಕೆ, ಇತರರು ಉಪಸ್ಥಿತರಿದ್ದರು.