ಕಲಬುರಗಿ; 2024 25 ನೇ ಸಾಲಿನ SSLC ಅತಿ ಹೆಚ್ಚು ಅಂಕಗಳಿದ ವಿದ್ಯಾರ್ಥಿಗಳಿಗೆ. ಅಪ್ಪಾಜಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ಪ್ರತಿಭಾ ಪುರಸ್ಕಾರ ನಡೆಯಿತು.
ಮಕ್ಕಳಿಗೆ ಪ್ರತಿಭೆಗೆ ತಕ್ಕಂತೆ ಪ್ರೋತ್ಸಾಹ ನೀಡುವುದು ಬಹಳ ಅಗತ್ಯವಾಗಿದೆ. ಅಪ್ಪಾಜಿ ಶಿಕ್ಷಣ ಟ್ರಸ್ಟ್ ಅಧ್ಯಕ್ಷೆ ಭಾಗಮ್ಮ ರಾಜಕುಮಾರ್, ಉದನೂರ್ ರಸ್ತೆಯ ಅಪ್ಪಾಜಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಅಧ್ಯಕ್ಷತೆ ಮಾತನಾಡಿದವರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆಯುವುದು ಬಹಳ ದುಃಸ್ತರ. ವಿದ್ಯಾರ್ಥಿಗಳು ನಮ್ಮ ಶಾಲೆಯಲ್ಲಿ 603ಕ್ಕೂ ಹೆಚ್ಚು ಅಂಕ ಪಡೆದು ಶಾಲೆ ಮತ್ತು ನಾಡಿನ ಕೀರ್ತಿ ತಂದಿದ್ದಾರೆ. ಇದೇ ರೀತಿ ಸಂಘ-ಸಂಸ್ಥೆಗಳು ಶಾಲಾ-ಕಾಲೇಜುಗಳು. ಪಾಲಕ ಪೋಷಕರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಗೌರವಿಸುವುದು ಅಗತ್ಯವಾಗಿದೆ ಎಂದರು
ರಾಜಕುಮಾರ್ ಉದನೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ. ಬಡ ಮತ್ತು ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚಿನ ಆದ್ಯತೆ ಕೊಡುವುದಾಗಿ ಹೇಳಿದರು.
ಈ ಅಪ್ಪಾಜಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯು ಬಡ ಮತ್ತು ಗ್ರಾಮೀಣ ಪ್ರದೇಶದ ರೈತ ಮಕ್ಕಳ ವಿದ್ಯಾರ್ಥಿಗಳಿಗೆ. ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯವನ್ನು ಮಾಡುತ್ತ ಬಂದು ಈ ಭಾಗದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಪಡಿಸುವುದ ಅಗತ್ಯವಾಗಿದೆ ಎಂದರು.
ಗುರು ಸಾಲಿಮಟ್ಟವರು ನಿರುಪಿಸಿದರು. ಅಭಿಲಾಶ್ ವಂದಿಸಿದರು ಸಂಸ್ಥೆಯಾ ಅಧ್ಯಕ್ಷರಾದ ಭಾಗಮ್ಮ ರಾಜಕುಮಾರ್ ಶಿಕ್ಷಕರಾದ ಗುರು ಸಾಲಿಮಠ. ಭಾಗ್ಯಶ್ರೀ ಲತಾ. ಶಾಂತ ಅಭಿಲಾಶ್. ಸೇರಿದಂತೆ ಪಾಲಕ ಪೋಷಕರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.