ಡಾ. ಬಿ.ಆರ್. ಅಂಬೇಡ್ಕರ್ ಬಾಲಕಿಯರ ಹಾಸ್ಟೆಲ್ ಗೆ ಎಸಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಭೇಟಿ

0
63

ಲಿಂಗಸಗೂರು: ಪಟ್ಟಣದ ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರಯರ ವಸತಿ ನಿಲಯದ ವಾರ್ಡನ್ ನಾಗರತ್ನಾ ಅವರ ಕರ್ತವ್ಯ ಲೋಪ ಹಾಗೂ ಸಮಯಕ್ಕೆ ಊಟ ಹಾಗೂ ಸೌಲಭ್ಯಗಳು ಸಿಗದ ಕಾರಣ ಸಹಾಯಕ ಆಯುಕ್ತರ ನಿವಾಸದ ಮುಂದೆ ಎಸ್ಎಫ್ಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ಸೋಮವಾರ ರಾತ್ರಿ ಹಾಸ್ಟೆಲ್ ಗೆ ಸಹಾಯಕ ಆಯುಕ್ತ ಅವಿನಾಶ್ ಶಿಂಧೆ, ಕಂದಾಯ ನಿರೀಕ್ಷಕ ಮಲ್ಲಪ್ಪ ಯರದಾಳ ಹಾಗೂ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಉಮೇಶ ಭೇಟಿ ನೀಡಿ ವಿದ್ಯಾರ್ಥನಿಯರು ಹಾಗೂ ಎಸ್ಎಫ್ಐ ಕಾರ್ಯಕರ್ತರ ಜೊತೆ ಚರ್ಚಿಸಿ ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸುವ ಭರವಸೆ ನೀಡಿದರು.

ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು ಮಾತನಾಡಿ, ಹಾಸ್ಟೆಲ್ ಗಳು ಮೂಲಭೂತ ಸೌಕರ್ಯಗಳಿಲ್ಲದೆ ಹಂದಿಗಳ ಗೂಡಾಗಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಹಾಸ್ಟಲ್ ವ್ಯವಸ್ಥೆ ಇಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ತೊಂದರೆಯಾಗುತ್ತಿದ್ದು, ಫಲಿತಾಂಶದಲ್ಲಿ ಭಾರೀ ಹೊಡೆತ ಬೀಳುತ್ತಿದೆ. ಬಾಲಕಿಯರ ವಸತಿ ನಿಲಯದಲ್ಲಿ ಬಗ್ಗೆ ಅನೇಕ ಬಾರಿ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ಸೇರಿ ಸಂಬಂಧ ಪಟ್ಟವರಿಗೆ ದೂರು ಸಲ್ಲಿಸಿದ್ದೇವೆ. ಆದ್ರೂ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ. ಇದು ಇಲಾಖೆಯ ಅಸಡ್ಡೆಯನ್ನು ತೋರಿಸುತ್ತದೆ. ಈ ಸಮಸ್ಯೆ ಒಂದು ವಾರದೊಳಗೆ ಪರಿಹರಿಸಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ಈ ವೇಳೆ ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ದೇವರಾಜ್, ಎಸ್ಎಫ್ಐ ವಿದ್ಯಾರ್ಥಿನಿಯರ ಉಪ ಸಮಿತಿಯ ಮುಖಂಡರಾದ ಬಸಮ್ಮ, ನಾಗರತ್ನಾ, ಸುಷ್ಮಿತಾ, ಸುಮಾ, ತ್ರಿವೇಣಿ, ರತ್ನಾ, ಕೀರ್ತಿ, ಶೇಖರಪ್ಪ ಯದ್ದಲದೊಡ್ಡಿ, ಅಲ್ಲಾಭಕ್ಷ, ವಾರ್ಡನ್ ನಾಗರತ್ನ ಸೇರಿದಂತೆ ನೂರಾರು ವಿದ್ಯಾರ್ಥಿನಿಯರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here