ಜನರಲ್ಲಿ ಪರಿಸರ ಪ್ರಜ್ಞೆ ಬೆಳೆಯಬೇಕು: ಮನ್ನೂರ ಆಸ್ಪತ್ರೆಯಿಂದ ಪರಿಸರ ದಿನಾಚರಣೆ | ಡಾ. ಫಾರುಕ್ ಮನ್ನೂರ

0
51

ಕಲಬುರಗಿ: ಪರಿಸರ ಸಂರಕ್ಷಣೆಯು ಕೇವಲ ಆಚರಣೆಗಳಿಗೆ ಸೀಮಿತಗೊಳ್ಳದೇ ಜನರಲ್ಲಿ ಪರಿಸರ ಪ್ರಜ್ಞೆಯನ್ನು ಬೆಳೆಸುವಂತಾಗಬೇಕು ಎಂದು ಮನ್ನೂರ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ. ಫಾರುಕ್ ಅಹ್ಮದ ಮನ್ನೂರ ಅವರು ಅಭಿಪ್ರಾಯಪಟ್ಟರು.

ಕಲಬುರಗಿ ನಗರದ ರಿಂಗ್ ರಸ್ತೆಯಲ್ಲಿರುವ ಮನ್ನೂರ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ನಿಮಿತ್ಯ ಆಸ್ಪತ್ರೆಯ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಮನುಷ್ಯರು ವಾಸಿಸಲು ಒಂದು ಸ್ಥಾನ ಬೇಕು, ಉಸಿರಾಡಲು ಗಾಳಿ ಬೇಕು, ತಿನ್ನಲು ಆಹಾರ ಬೇಕು ಎಂದರೆ ಪರಿಸರ ಉಳಿಯಬೇಕು ಎಂದು ಕರೆ ನೀಡಿದರು.

Contact Your\'s Advertisement; 9902492681

ಪರಿಶುದ್ಧವಾದ ಬದುಕಿನ ಕ್ರಮ ಬೇಕಿದೆ ಅಂದರೆ ಪರಿಸರ ಬೇಕು. ಈ ಹಿನ್ನೆಲೆಯಲ್ಲಿ ನಮ್ಮ ಸುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಎಲ್ಲಾ ಗ್ರಹಗಳಲ್ಲಿ ಭೂಮಿಯಲ್ಲಿ ಮಾತ್ರ ಜೀವಿಗಳು ವಾಸವಾಗಿವೆ. ಇಂತಹ ಅಮುಲ್ಯವಾದ ಭೂಮಿಯನ್ನು ವಿವಿಧ ಮಾಲಿನ್ಯಗಳ ಮೂಲಕ ಹಾಳುಮಡುತ್ತಿದ್ದೇವೆ. ಜಾಗತಿಕಾರಣ ಮತ್ತು ನಾಗರಿಕರಣದ ಭರಾಟೆಯಲ್ಲಿ ಮಾನವನ ಅತಿಯಾಸೆಗೆ ಸಿಲುಕಿ ಭೂಮಿ ನಲುಗುತ್ತಿದೆ. ಅರಣ್ಯಗಳ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಮಳೆ ಕಡಿಮೆಯಾಗಿ ನೀರಿಗೆ ಆಹಾಕಾರ ಉಂಟಾಗುತ್ತಿದೆ. ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗಿ ಜೀವಿಗಳು ಸಾಯುತ್ತಿವೆ . ಇಂತಹ ದುರ್ಗತಿ ತಪ್ಪಿಸಲು ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಜೋಪಾನ ಮಾಡಿದಾಗ ಮಾತ್ರ ಪ್ರಕೃತಿ ಉಳಿಯಲು ಸಾಧ್ಯ ಆದ್ದರಿಂದ ನಾವೆಲ್ಲರೂ ಮರಗಳನ್ನು ಬೆಳೆಸುವ ಸಂಕಲ್ಪ ಮಾಡೋಣ ಎಂದು ಹೇಳಿದರು.

ಇದೆ ವೇಳೆ ಆಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸಿದ ರೋಗಿಗಳಿಗೆ ಹಾಗೂ ರೋಗಿಯ ಕುಟುಂಬದ ಸದಸ್ಯರಿಗೆ ಸಸಿಗಳನ್ನು ವಿತರಿಸುವ ಮೂಲಕಪರಿಸರದ ಕುರಿತು ಜಾಗೃತಿ ಮೂಡಿಸಿದ್ದರು‌.

ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪರಿಸರ ದಿನಾಚರಣೆಯು ಕೇವಲ ಒಂದು ದಿನದ ಆಚರಣೆ ಮಾತ್ರವಲ್ಲ, ನಮ್ಮ ಬದುಕಿನ ಕ್ರಮದಲ್ಲಿ ಪರಿಸರದ ಅರಿವು ರೂಢಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮನ್ನೂರ ಆಸ್ಪತ್ರೆಯ ತಂಡದಿಂದ ಜನರಿಗೆ ಪರಿಸರ ಮೌಲ್ಯಗಳನ್ನು ತಿಳಿಸುವ ಕೆಲಸ ಮಾಡುತ್ತಿದೆ. – ಡಾ. ಫಾರುಕ್ ಅಹ್ಮದ ಮನ್ನೂರ, ಮನ್ನೂರ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಕಲಬರುಗಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here