ಜನತಾ ತೀರ್ಪುನಿಂದ ನರೇಂದ್ರ ಮೋದಿಗೆ ಮುಖಭಂಗ; ಕೆ. ನೀಲಾ

0
32

ಕಲಬುರಗಿ: ಸತತ ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಬಹುಮತ ಪಡೆದು ದಶಕಗಳ ಕಾಲ  ಜನವಿರೋದಿ ದುರಾಡಳಿತ ನಡೆಸಿದ್ದ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳಿಗೆ ಹಿನ್ನಡೆಯನ್ನುಂಟು ಮಾಡುವ ಮೂಲಕ ತಾನು ಪ್ರಜಾಪ್ರಭುತ್ವ ಮತ್ತು ಸಂವಿಧಾನ ಹಾಗು ಜನ ಜೀವನದ ಮೇಲಿನ ಧಾಳಿಗಳನ್ನು ಸಹಿಸುವುದಿಲ್ಲವೆಂಬ ಸಂದೇಶವನ್ನು ಜನತಾ ತೀರ್ಪು ನೀಡಿ ಜನತಾ ತೀರ್ಪು ಬಿಜೆಪಿ ಮತ್ತು ನರೇಂದ್ರ ಮೋದಿಯವರಿಗೆ ಮುಖಭಂಗ ಉಂಟು ಮಾಡಿದೆ ಎಂದು ಸಿಪಿಐ(ಎಂ) ಕಾರ್ಯದರ್ಶಿ ಯು.ಬಸವರಾಜ, ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ವಿಶ್ಲೇಷಿಸಿದ್ದಾರೆ.

ನಿರುದ್ಯೋಗ, ಬೆಲೆ ಏರಿಕೆ, ಕೃಷಿ ಸಂಕಷ್ಟ, ಪ್ರಜಾಪ್ರಭುತ್ವ ಹಾಗು ಸಂವಿಧಾನದ ಮೇಲಿನ ದಾಳಿ ಮತ್ತು ಕೋಮು ದ್ವೇಷದ ವಿರುದ್ದ ಒಟ್ಟಾಗಿ ನಿಂತುದು INDIA ಕೂಟದ ಜೊತೆ ಜನತೆ ನಿಲ್ಲಲು ಕಾರಣವಾಗಿದೆ. ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಶ್ರೀ ನರೇಂದ್ರ ಮೋದಿಯವರು ನೀತಿ ಸಂಹಿತೆಯನ್ನು ಉಲ್ಲಂಘಿಸಿ ಮಾಡಿದ ದ್ವೇಷ ಭಾಷಣದ ವಿರುದ್ದ ಚುನಾವಣಾ ಆಯೋಗ ಕ್ರಮ ಕೈಗೊಂಡಿದ್ದಲ್ಲಿ ಖಂಡಿತವಾಗಿ ಬಿಜೆಪಿ ಮತ್ತಷ್ಟು ಹಿನ್ನಡೆ ಅನುಭವಿಸುತ್ತಿತ್ತು ಎಂದು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಈ ಬಾರಿ ಸಿಪಿಐ(ಎಂ) 04, ಸಿಪಿಐ ಹಾಗೂ ಸಿಪಿಐ(ಎಂ,ಎಲ್) ತಲಾ 02 ಸೇರಿ ಒಟ್ಟಾಗಿ ಎಡಪಕ್ಷಗಳು 08 ಸ್ಥಾನಗಳನ್ನು ಪಡೆದು ಹಿಂದಿಗಿಂತ ಉತ್ತಮ ಸ್ಥಿತಿ ಹೊಂದಿವೆ. ಕರ್ನಾಟಕದಲ್ಲಿಯೂ ಬಿಜೆಪಿ, ಜೆಡಿಎಸ್ ಹಾಗು ಜನಾರ್ದನ ರೆಡ್ಡಿ ಜೊತೆ ಕೈ ಜೋಡಿಸಿಯೂ  ಮತ್ತು ಲಿಂಗಾಯತ ಹಾಗು ಒಕ್ಕಲಿಗ ಜಾತಿ ಸಮೀಕರಣ ಮಾಡಿ, ಕೋಮುವಾದ ಅಪ್ಪಿಕೊಂಡಿದ್ದರೂ, ನರೇಂದ್ರ ಮೋದಿ ದೇವೇಗೌಡರ ಪ್ರಚಾರ ನಡೆಸಿಯೂ ಅದು ಹಿನ್ನಡೆ ಅನುಭವಿಸಿದೆ. ಕಳೆದ ಬಾರಿಗೆ ಹೋಲಿಸಿದರೆ ಶೇ 5 ರಷ್ಟು ಮತಗಳ ಹಿನ್ನಡೆ ಕಂಡಿದ್ದು, ಸಿಪಿಐ(ಎಂ) ಮತ್ತಿತರೆ ಪ್ರಜಾಸತ್ತಾತ್ಮಕ  ಶಕ್ತಿಗಳ ಕರೆಗೆ ಓಗೊಟ್ಟು ಬಿಜೆಪಿಯನ್ನು ಹಿಮ್ಮೆಟ್ಟಿಸಿ, ಪ್ರಜಾಪ್ರಭುತ್ವ  ಉಳಿಸಿಕೊಳ್ಳಲು ಮುಂದಾದದ ಜನತೆಯನ್ನು ಪಕ್ಷ ಅಭಿನಂದಿಸುತ್ತದೆ ಎಂದಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here