ಕಲಬುರಗಿಯಲ್ಲಿ ಈಶಾನ್ಯ ಪದವೀಧರ ಚುನಾವಣೆ ಮತ ಎಣಿಕೆ ಆರಂಭ: ಫಲಿತಾಂಶಕ್ಕೆ ಕ್ಷಣಗಣನೆ

0
208

ಕಲಬುರಗಿ: ಕರ್ನಾಟಕದ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯ ಮತಗಳ ಎಣಿಕೆ ಕಾರ್ಯ ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣದ, ಸಾದ್ವಿ ಶಿರೋಮಣಿ ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಪೀಠ ಹಾಗೂ ಸಂಶೋಧನಾ ಕೇಂದ್ರದಲ್ಲಿ ಅರಂಭಗೊಂಡಿದೆ.

ಈಶಾನ್ಯ ಪದವೀಧರ ಮತ ಎಣಿಕೆ ಹಿನ್ನೆಲೆ ಬೆಳಿಗ್ಗೆ 8 ಗಂಟೆಗೆ ಪೋಸ್ಟಲ್ ಬಾಕ್ಸ್ ಓಪನ್ ಮಾಡಿ ಮತಪತ್ರಗಳ ರ‌್ಯಾಂಡಮೈಜೇಷನ್ ಮಾಡಿ ತಲಾ 25 ಮತಗಳ ಬಂಡಲ್ ಕಟ್ಟುವ ಕಾರ್ಯ ಮುಗಿದಿದೆ. ಸಂಜೆ 4 ಗಂಟೆಗೆ 14 ಟೇಬಲ್ ಮೂಲಕ ಮತ ಎಣಿಕೆ ಕಾರ್ಯ ಆರಂಭವಾಗಿದೆ.

Contact Your\'s Advertisement; 9902492681

ಚಲಾವಣೆಯಾದ 1,09,082 ಮತಗಳ ಎಣಿಕೆ ಕಾರ್ಯ ಮುಗಿದ ಮೇಲೆ ಪುರಸ್ಕೃತ ಮತ್ತು ತಿರಸ್ಕೃತ ಮತಗಳು ಹಾಗೂ ಅಭ್ಯರ್ಥಿವಾರು ಪ್ರಥಮ ಪ್ರಾಶಸ್ತ್ಯ ಪಡೆದ ಮತಗಳ ಮಾಹಿತಿ ಲಭ್ಯವಾಗಲಿದೆ ನಂತರ ವಿನ್ನಿಂಗ್ ಕೋಟಾ ಶೇ.50+1 ಫಿಕ್ಸ್ ಮಾಡಲಾಗುತ್ತದೆ ತದನಂತರ ಪ್ರಥಮ ಪ್ರಾಶಸ್ತ್ಯ ಮತದಲ್ಲಿ ವಿನ್ನಿಂಗ್ ಕೋಟಾ ನಿಯಮದಂತೆ ಶೇ.50+1 ಮತ ಯಾವುದೇ ಅಭ್ಯರ್ಥಿ ಪಡೆದಿದ್ದಲ್ಲಿ ಅವರನ್ನು ವಿಜಯಶಾಲಿ ಎಂದು ಘೋಷಿಸಲಾಗುತ್ತದೆ.

ಒಂದು ವೇಳೆ ಪ್ರಥಮ ಪ್ರಾಶಸ್ತ್ಯ ಮತದಲ್ಲಿ ಯಾವುದೇ ಅಭ್ಯರ್ಥಿಗೆ ಶೇ.50+1 ಮತ ಸಿಗದಿದ್ದಲ್ಲಿ ಆಗ ಎಲಿಮಿನೇಟ್ ರೌಂಡ್ ಆರಂಭವಾಗಿ ಅತ್ಯಂತ ಕಡಿಮೆ ಮತ ಪಡೆದ ಅಭ್ಯರ್ಥಿಗಳನ್ನು ಎಲಿಮಿನೇಟ್ ಮಾಡಿ ಎರಡನೇ ಪ್ರಾಶಸ್ತ್ಯ ಮತ ಎಣಿಕೆ ಆರಂಭವಾಗಲಿದ್ದು, ಟ್ರೆಂಡ್ಸ್ ಮಾಹಿತಿ ರಾತ್ರಿ 9-10 ಗಂಟೆಗೆ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ.

ಮತ ಏಣಿಕೆ ಕೇಂದ್ರದಲ್ಲಿ ಚುನಾವಣಾ ಅಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತರಾದ ಕೃಷ್ಣ ಭಾಜಪೇಯಿ, ಚುನಾವಣೆ ವೀಕ್ಷಕರಾದ ಎಂ ಮಹೇಶ್ವರ ರಾವ್, ಬೀದರ್ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಯಾದಗಿರಿ ಜಿಲ್ಲಾಧಿಕಾರಿ ಸುಶೀಲಾ, ಡಿಸಿಪಿ ಕನ್ನಿಕಾ ಸಿಕ್ರಿವಾಲ್ ಕಲಬುರಗಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಪ್ರಾದೇಶಿಕ ಆಯುಕ್ತ ಇಲಿಯಾಸ್ ಅಹ್ಮದ್ ಇಸಾಮದಿ ಮುಂತಾದವರು ಇದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here