ಋತುಮತಿಯಾಗುವುದು ಭಯವಲ್ಲ ಹೆಣ್ಣಿಗೆ ಸಹಜ ಪ್ರಕ್ರಿಯೆ: ಡಾ. ಜಮೀಲ್ ಬೇಗ್

0
32

ಶಹಾಬಾದ: ಋತುಮತಿಯಾಗುವುದು ಭಯವಲ್ಲ. ಹೆಣ್ಣಿಗೆ ಋತುಚಕ್ರ ಎಂಬುವುದು ಹೆಣ್ಣಿನ ದೇಹದಲಾಗುವ ನಿಸರ್ಗದತ್ತ ಸಹಜ ಪ್ರಕ್ರಿಯೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಡಾ. ಜಮೀರ್ ಬೇಗ್ ಹೇಳಿದರು.

ಅವರು ತಾಲೂಕಿನ ಹೊನಗುಂಟಾ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಮುದಾಯ ಆರೋಗ್ಯ ಕೇಂದ್ರ ಶಹಾಬಾದ್ ವಿಸ್ತರಣಾ ಆರೋಗ್ಯ ಕೇಂದ್ರ ಹೊನಗುಂಟ ಹಾಗೂ ಕೆಎಚ್ ಪಿಟಿ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ ಹಾಗೂ ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ ಅಡಿಯಲ್ಲಿ ಅಂತರಾಷ್ಟ್ರೀಯ ಮುಟ್ಟು ನೈರ್ಮಲ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಋತುಚಕ್ರ ಎಂಬುವುದು ಹೆಣ್ಣಿನ ದೇಹದಲಾಗುವ ನಿಸರ್ಗದತ್ತ ಸಹಜ ಪ್ರಕ್ರಿಯೆ ಎಂಬುದನ್ನು ಅರಿತುಕೊಳ್ಳಬೇಕು. ಪ್ರಪಂಚದಲ್ಲಿ ಮಗುವಿಗೆ ಜೀವ ಕೊಡುವ ಸಾಧ್ಯತೆ ಇರುವುದು ಕೇವಲ ಮಹಿಳೆಯರಿಗೆ ಮಾತ್ರ ಕೊಟ್ಟಿರುವ ವರವಾಗಿದೆ ಒಬ್ಬ ಮಹಿಳೆ ಮಗು ಜನಿಸುವುದಕ್ಕೆ ಸಾಧ್ಯವಾಗುವುದು ಆಕೆ ಋತುಮತಿಯಾದ ನಂತರವμÉ್ಟೀ ಯಾವಾಗ ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗುತ್ತಿದೆಯೋ ಅದನ್ನು ಅಂಡಾಣು ಬಿಡುಗಡೆ ಎಂದು ಕರೆಯುತ್ತಾರೆ. ಗರ್ಭಕೋಶದ ಒಳಪದರಲಿ ಮೆದುವಾದ ಪದರು ತಯಾರಾಗುತ್ತದೆ ಈ ಪೆÇಗರು ಹೆಚ್ಚಾಗಿ ಸಣ್ಣ ಸಣ್ಣ ರಕ್ತನಾಳಗಳಿಂದ ಕೂಡಿರುತ್ತದೆ ಆ ಪದರಿನ ಒಡೆದು ಹೊರಬರುವ ಅಂಡಾಣುವೆ ಋತುಚಕ್ರ ಎಂದು ಕರೆಯುತ್ತಾರೆ ಎಂದು ಹೇಳಿದರು.

ಆರ್‍ಕೆಎಸ್‍ಕೆ ಆಪ್ತ ಸಮಾಲೋಚಕ ಅಮರೇಶ ಇಟಗಿ ಮಾತನಾಡಿ, ದೊಡ್ಡವರಾಗುವುದು ಅಂದರೆ ನಾವು ಪ್ರೌಢ ವ್ಯವಸ್ಥೆಯನ್ನು ತಲುಪುವುದು. ಇದನ್ನು ನಾವು ಋತುಮತಿ ಅನ್ನುತ್ತೇವೆ ಸಾಮಾನ್ಯವಾಗಿ ಹತ್ತು ವರ್ಷ ಮೇಲ್ಪಟ್ಟ ಬಾಲಕಿಯರಿಗೆ ಯಾರಿಗೆ ಬೇಕಾದರೂ ಋತುಸ್ರಾವ ಆಗಬಹುದು. ಹೆಣ್ಣಿನ ಕೆಳ ಹೊಟ್ಟೆಯಲ್ಲಿ ಗರ್ಭಕೋಶವಿರುತ್ತದೆ ಅದರ ಪಕ್ಕದಲ್ಲಿ ಅಂಡಾಣು ತಯಾರಾಗುವ ಅಂಡಾಶಯ ಅಂದವನ್ನು ಗರ್ಭಕ್ಕೆ ವಯ್ಯುವ ಅಂಡನಾಳ ಗರ್ಭ ಕೊರಳು ಯೋನಿ ಇರುತ್ತದೆ. ಈ ಮೂಲಕ ಋತುಸ್ರಾವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಲಾಯಿತು.

ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಮೀನಾಕ್ಷಿ ಮಾತನಾಡಿ, ಪ್ರತಿ ತಿಂಗಳು ಹೆಣ್ಣು ಮುಟ್ಟಾಗುವ ಸಂದರ್ಭ ಬಂದೇ ಬರುತ್ತದೆ. ಆ ಮುಟ್ಟಿನ ಸಮಯದಲ್ಲಿ ಪೌಷ್ಟಿಕಾಂಶದ ಆಹಾರ ವೈಯಕ್ತಿಕ ಸ್ವಚ್ಛತೆ ಸಮತೋಲನ ಆಹಾರ ಸೇವಿಸಬೇಕೆಂದು ಹೇಳಿದರು.ಮುಟ್ಟಾದಾಗ ಒಣಗಿದ ಬಟ್ಟೆಗಳನ್ನು ಹಾಗೂ ನ್ಯಾಪ್ಕಿನ್ ಪ್ಯಾಡ್ ಗಳನ್ನು ಉಪಯೋಗಿಸಬೇಕು ಎಂದು ತಿಳಿಸಿದರು .

ಈ ಕಾರ್ಯಕ್ರಮದಲ್ಲಿ ಹೊನಗುಂಟಾ ಗ್ರಾಪಂ ಅಧ್ಯಕ್ಷ ಮೆಹಬೂಬ್ ಪಟೇಲ್, ಕೆಎಚ್‍ಪಿಟಿ ತಾಲೂಕಾ ಸಂಯೋಜಕಿ ರೇಣುಕಾ ಸೇರಿದಂತೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಹದಿಹರೆಯದ ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕುಮಾರಿ ಐಶ್ವರ್ಯ ನಿರೂಪಿಸಿದರು. ರೇಣುಕಾ ವಂದಿದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here