ಕಲಬುರಗಿ : ಇಂಡಿಯನ್ ಐಕಾನ್ ಅವಾರ್ಡ್ ರಾಜ್ಯಸ್ಥಾನ ಜ್ಞಾನ ಉದಯ ಫೌಂಡೇಶನ್ ವತಿಯಿಂದ ಉನ್ನತ ಶಿಕ್ಷಣಕ್ಕಾಗಿ ಕೊಡುವ ರಾಷ್ಟ್ರೀಯ ಪ್ರಶಸ್ತಿಯನ್ನು ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಪದವಿ ಮಹಾವಿದ್ಯಾಲಯ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಶಾಂತಲಿಂಗ ಘಂಟೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ವೈವಿಧ್ಯಮಯವಾದ, ಕವನ, ಸಂಪಾದನೆ, ಸಂಶೋಧನೆ, ವಿಮರ್ಶೆ ಸೃಜನಶೀಲ ಬರಹಗಾರ ಇತ್ಯಾದಿ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿ ಮಿರ್ಜಾ ಗಾಲಿಬ್, ಖಲೀಲ್ ಗಿಬ್ರಾನ್, ಗುಲ್ಜಾರ್, ಈ ನಾಡಿನ ಬಹುದೊಡ್ಡ ಸಾಹಿತಿ ಗೋಪಾಲಕೃಷ್ಣ ಅಡಿಗ, ಖ್ಯಾತ ಪತ್ರಿಕೋದ್ಯಮಿ ಲಂಕೇಶ್, ಮುಂತಾದವರ ಸಾಹಿತ್ಯವನ್ನು ಅಧ್ಯಯನ ಮಾಡಿ ಇವರು ಉತ್ತಮ ಸಂಶೋಧಕರಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ. ಸಾಹಿತ್ಯದ ವಿವಿಧ ಮಜಲುಗಳನ್ನು ಅಧ್ಯಯನ ಅಭ್ಯಾಸಿಸಿ ಒಬ್ಬ ಯುವ ಸಂಶೋಧಕನಾಗಿ ಹೊರಹೊಮ್ಮಿದರಿಂದ ಅವರಿಗೆ ಈ ಅವಾರ್ಡ್ ನೀಡಿ ಗೌರವಿಸಲಾಯಿತು.