ಶರಣ ಸಾಹಿತ್ಯ ಮುಂದಿನ ತಲೆಮಾರಿಗೆ ತಲುಪಿಸಬೇಕಿದೆ: ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್

0
97

ಕಲಬುರಗಿ: ೧೨ ನೇ ಶತಮಾನದ ಶರಣರ ಚಿಂತನೆ ಅರ್ಥಪೂರ್ಣವಾಗಿವೆ. ವಚನಕಾರರು ನುಡಿದಂತೆ ನಡೆದವರು ಅವರ ಸಂದೇಶ ಸಮಾಜದ ಪ್ರಗತಿಗೆ ಎಂದಿಗೂ ಪ್ರಸ್ತುತ. ವಚನ ಸಾಹಿತ್ಯ ಸಮ್ಮೇಳನವು ಮುಂದಿನ ಪೀಳಿಗೆಗೆ ದಾರಿದೀಪವಾಗಲಿದೆ ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ರವರು ಅಭಿಪ್ರಾಯಪಟ್ಟರು.

ಅವರು ,ಶ್ರೀ ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಕಲಬುರ್ಗಿ ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು.

Contact Your\'s Advertisement; 9902492681

ನಡೆ-ನುಡಿಗಳಲ್ಲಿ ಅಂತರವಿರದ ಜೀವನದ ಆದರ್ಶಗಳೇ ಶರಣ ಸಾಹಿತ್ಯ ಮತ್ತು ಸಂಸ್ಕೃತಿಯಾಗಿದೆ. ಶರಣರ ವಚನಗಳು ಸಾರ್ವಕಾಲಿಕ ಶ್ರೇಷ್ಠತೆ ಹೊಂದಿವೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಈ ಸಂದರ್ಭದಲ್ಲಿ ಟ್ರಸ್ಟ ಅಧ್ಯಕ್ಷರಾದ ಶರಣಗೌಡ ಪಾಟೀಲ್ ಪಾಳಾ, ಸಮ್ಮೇಳನದ ಸಂಚಾಲಕರಾದ ಪ್ರೊ. ಯಶವಂತರಾಯ ಅಷ್ಠಗಿ, ಸಮಾಜ ಸೇವಕರಾದ ಶಿವ ಅಷ್ಠಗಿ, ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಸಂಚಾಲಕ ರವೀಂದ್ರ ಶಾಬಾದಿ, ಮುಖಂಡರಾದ ಪ್ರೀತಮ್ ಪಾಟೀಲ್, ಗೋಪಾಲಕೃಷ್ಣ ಕುಲಕರ್ಣಿ, ಪ್ರಸಾದ್ ಪಟ್ಟಣಕರ್, ದೇವೇಂದ್ರ ಚೇಂಗಟಾ, ಶಿವಯೋಗಿ ಭಜಂತ್ರಿ, ಲಾಂಚನ ವಿನ್ಯಾಸಕ ಸಿದ್ದು ಹಂಚನಾಳ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here