ಕಲಬುರಗಿ; ಗುಲ್ಬರ್ಗ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನದ ಸಂಶೋಧನಾ ವಿಭಾಗದ ವಿದ್ಯಾರ್ಥಿ ಮಹೇಶ ಕಾಶಿನಾಥ ಅವರು “ಹೆಲ್ಥ್ ಕೇರ್ ಸಿಸ್ಟಮ್ ಇನ್ ಕರ್ನಾಟಕ ಎ ಕೇಸ್ ಸ್ಟಡೀ ಬೀದರ್ ಡಿಸ್ಟ್ರಿಕ್ಟ್” ಎಂಬ ಮಹಾಪ್ರಬಂಧವನ್ನು ಹುಮನಾಬಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಜಯಕುಮಾರ್ ಸಿಂಧೆ ಅವರ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಮಂಡಿಸಿದ್ದಕ್ಕಾಗಿ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯ ಪಿಎಚ್. ಡಿ ಪದವಿ ಪ್ರದಾನ ಮಾಡಿದೆ.
ಮಹೇಶ ಕಾಶಿನಾಥ ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದ್ದಕ್ಕಾಗಿ ಸ್ನೇಹಿತರು ಹಿತೈಷಿಗಳು ಹಾಗೂ ಕುಟುಂಬ ವರ್ಗದವರು ಅನೇಕರು ಅಭಿನಂದನೆಗಳನ್ನು ತಿಳಿಸಿದ್ದಾರೆ.