ಕಲಬುರಗಿ: ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮತ್ತು ಕಾರ್ಯಾಚರಣೆ ಸಮಿತಿಯ ಕರ್ನಾಟಕ ರಾಜ್ಯ ಘಟಕದ ಎರಡನೇ ಮಹಾಸಭೆ ಡಾ.ಎ.ಎಸ್.ಭದ್ರಶೆಟ್ಟಿಯವರು ಅಧ್ಯಕ್ಷತೆಯಲ್ಲಿ ಜರುಗಿತ್ತು.
ಡಾ.ಪ್ರತಾಪಸಿಂಗ ತಿವಾರಿ ಅವರು ಮುಖ್ಯ ಅತಿಥಿಗಳಾಗಿ ಮತ್ತು ಶ್ರೀ ವಿಜಯಕುಮಾರ್ ಬೋಲಬಂದಿಯವರು ಅತಿಥಿಗಳಾಗಿ ಭಾಗವಹಿಸಿದ್ದರು. ಸಮಿತಿಗೆ ಹೊಸದಾಗಿ ಸೇರ್ಪಡೆಯಾದ ಸದಸ್ಯರುಗಳಿಗೆ ಗುರುತಿನ ಚೀಟಿ ವಿತರಿಸಿ ಒಳ್ಳೆಯ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಮುಖ್ಯ ಅತಿಥಿಗಳು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಎ ಎಸ್ ಭದ್ರಶೆಟ್ಟಿಯವರು ಸಂಸ್ಥೆಯ ಕಾರ್ಯ ನಿರ್ವಹಿಸುವ ಬಗ್ಗೆ ಮಾಹಿತಿ ನೀಡುತ್ತಾ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಕಂಕಣ ಬದ್ಧರಾಗಿರೋಣ ಮತ್ತು ಶಪಥ ಗ್ರಹಣ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಅಧ್ಯಕ್ಷರು ಆಗಮಿಸುವವರಿದ್ದು, ಸಮಗ್ರ ರೀತಿಯಲ್ಲಿ ತಯಾರಿ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶಾಮರಾವ್ ಪ್ಯಾಟಿ ನಿರ್ವಹಿಸಿದರೆ, ಪ್ರಶಾಂತ್ ತಡಕಲೆಯವರು ಸ್ವಾಗತಿಸಿದರು ಮತ್ತು ವಿನೋದ ಪಾಟೀಲರು ವಂದನಾರ್ಪಣೆ ಸಲ್ಲಿಸಿದರು. ಸಭೆಯಲ್ಲಿ ಸದಸ್ಯ ಜ್ಞಾನ ಮಿತ್ರ, ಸೂರ್ಯ ಕುಮಾರ್, ಸುರೇಶ್ ಕಲಶೆಟ್ಟಿ, ರಾಜು ಜೈನ, ಗಿರೀಶ್ ಗೌಡ ಇನಾಂದಾರ್, ಶಾಮರಾವ್ ಪಾಟೀಲ್, ವಿಜಯಕುಮಾರ್, ನಾಡಗೌಡ ಬಿರಾದಾರ್ ಮತ್ತು ಬಿ ಆರ್ ಚೌವ್ಹಾಣ್ ಇನ್ನಿತರರು ಉಪಸ್ಥಿತರಿದ್ದರು.