ಕಲಬುರಗಿ : ಜೇವರ್ಗಿ ತಾಲೂಕ ಪಂಚಾಯತ ಮಾಜಿ ಅಧ್ಯಕ್ಷ ಬಸವರಾಜಗೌಡ.ಎಸ್.ಪಾಟೀಲ (ಗಂವ್ಹಾರ) ಅವರಿಗೆ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಬ್ಲಾಕ್ ಕಾಂಗ್ರೆಸ್ ಸಿಮಿತಿ ಆಗ್ರಹಿಸಿದೆ.
ಅಧ್ಯಕ್ಷ ಸಿದ್ದಲಿಂಗ ರೆಡ್ಡಿ ಇಟಗಿ, ರುಕುಮ್ ಪಟೇಲ್ ಇಜೇರಿ, ಕಾಶಿಂ ಪಟೇಲ್ ಮುದ್ಬಾಳ, ಗುರುಲಿಂಗಪ್ಪಗೌಡ ಪಾಟೀಲ ಆಂದೋಲ, ರಾಜಶೇಖರ ಸಾಹು ಸೀರಿ, ಮಾಜಿದ್ ಶೇಠ್ ಗಿರಣಿ, ಚಂದ್ರಶೇಖರ ಹರನಾಳ, ಎಂ.ಕೆ.ಪಾಟೀಲ್ ಕೆಲ್ಲೂರ್, ಚಂದ್ರಶೇಖರ್ ಪುರಾಣಿಕ್, ಸಂಗನಗೌಡ ಪಾಟೀಲ್ ಗುಳ್ಯಾಲ್, ಶರಣಪ್ಪ ಕಾಚಾಪುರ, ಅಮೀರ ಹಮ್ಜಾ ಇಜೇರಿ, ಮೊಹಮ್ಮದ್ ಸೋಫಿ ಗಂವಾರ, ನಾಗಣ್ಣ ಯಡ್ರಾಮಿ, ವಿಜಯಕುಮಾರ ಹಂಗರಗಿ, ಸಕ್ರೆಪ್ಪಗೌಡ ಹರನೂರ, ತಿರುಪತಿ ದೇಸಾಯಿ, ಬಿ ಬಿ ಸುಬೇದಾರ್ ಹರನೂರ, ಶರಣಗೌಡ ಪಾಟೀಲ್ ವಾರ್ಚನಳ್ಳಿ, ಗೌಡಪ್ಪಗೌಡ ಪಾಟೀಲ ಆಂದೋಲ, ಮಲ್ಲನಗೌಡ ಪಾಟೀಲ ಹರವಾಳ, ಅಣ್ಣಾರಾವ್ ದೇಶಮುಖ ಜೇರಟಗಿ, ರವಿ ಕೋಲ್ಕೂರ, ನೀಲಕಂಠ ಆವಂಟಿ, ರಾಜು ಗುತ್ತೇದಾರ್ ಆಂದೋಲ, ಗುರುಲಿಂಗಪ್ಪ ಗೌಡ ಮಾರಡಗಿ, ರಜಾಕ್ ಯಡ್ರಾಮಿ, ಶೌಕತ ಅಲಿ ಆಲೂರ, ಶಾಂತಪ್ಪ ಕೂಡ್ಲಿ, ಬಾಸುಗೌಡ ಮರಡಗಿ, ವೀರಣ್ಣ ಸಾಹು ಗಂವಾರ, ವಿಶ್ವರಾಧ್ಯ ಮಾಯಿ, ಧರ್ಮು ನಾಯಕ್ ಹಾಗೂ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದ್ದಾರೆ.
ಬಸವರಾಜಗೌಡ.ಎಸ್.ಪಾಟೀಲ (ಗಂವ್ಹಾರ) ಅವರು ಸಕ್ರೀಯವಾಗಿ ಎಲ್ಲಾ ಚುನಾವಣೆಯಲ್ಲಿ ಹಾಗಲಿಇರುಳು ದುಡುದಿದ್ದಾರೆ. ಅವರು ಎಲ್ಲ ನಾಯಕರೊಂದಿಗೆ ಒಳ್ಳೆಯ ಸಂಬಂಧ ಹೊಂದಿದ್ದು, ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದ್ದಾರೆ. ಅವರು ಜಿಲ್ಲಾಧ್ಯಕ್ಷರಾದರೆ ಪಕ್ಷಕ್ಕೆ ಬಲ ಬರಲಿದೆ. ಅವರು ಸುಮಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ, ಪ್ರಮಾಣಿಕತೆಯಿಂದ ಕೆಲಸಮಾಡಿದ್ದಾರೆ. ಇಲ್ಲಿಯವರೆಗೆ ಪಕ್ಷದಲ್ಲಿ ಯಾವುದೇ ಅಧಿಕಾರ ಅಥವಾ ಹುದ್ದೆಗೆ ಆಸೆ ಪಡದೆ ಸಕ್ರೀಯವಾಗಿ ಪಕ್ಷದ ಕೆಲಸವನ್ನು ನಿಭಾಯಿಸುತ್ತಾ ಬಂದಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಇಂತಹ ಒಬ್ಬ ನಿಷ್ಠಾವಂತ ಬಸವರಾಜಗೌಡ ಎಸ್.ಪಾಟೀಲ (ಗಂವ್ಹಾರ) ಅವರಿಗೆ ಜಿಲ್ಲೆಯ ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಬೇಕೆಂದು ಕಾಂಗ್ರೆಸ್ ಪಕ್ಷದ ಎಲ್ಲ ಹಿರಿಯ ನಾಯಕರಲ್ಲಿ ಕೋರಿದಾರೆ.