ಕಲಬುರಗಿ ಜಿಲ್ಲಾ ಜೆಡಿಎಸ್ ಮುಖಂಡರ ಸಭೆ
ಕಲಬುರಗಿ : ಮುಂಬರುವ ಜಿ.ಪಂ ಹಾಗೂ ತಾ.ಪಂ ಚುನಾವಣೆ ಎದುರಿಸಲು ಜೆಡಿಎಸ್ ಪಕ್ಷದ ಕಾರ್ಯಕರ್ತರು ಬೂತ ಮಟ್ಟದಿಂದ ಸಿದ್ದರಾಗಬೇಕು ಎಂದು ಜೆಡಿಎಸ್ ಪಕ್ಷದ ಕಲಬುರಗಿ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ ಕರೆ ನೀಡಿದ್ದರು,
ಕಲಬುರಗಿ ನಗರದ ಜಿಲ್ಲಾ ಜೆಡಿಎಸ್ ಪಕ್ಷದ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೆಗೌಡರು, ಜೆಡಿಎಸ್ ಪಕ್ಷದ ರಾಜ್ಯಧ್ಯಕ್ಷರಾದ ಹೆಚ್,ಡಿ, ಕುಮಾರಸ್ವಾಮಿ ಅವರ ಆಡಳಿತದಲ್ಲಿ ಜಾರಿಮಾಡಿರುವ ರೈತರ ಸಾಲಮನ್ನ, ಗ್ರಾಮ ವಾಸ್ತವ್ಯ , ನೀರಾವರಿ ಯೋಜನೆ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮ ಜಾರಿಮಾಡಿದ್ದು ಜೆಡಿಎಸ್ ಪಕ್ಷದ ಕಾರ್ಯಕ್ರಮಮಗಳ ಬಗ್ಗೆ ಜನರಿಗೆ ತಿಳಿಹೇಳುವ ಮೂಲಕ ಭೂತ ಮಟ್ಟದಿಂದ ಜೆಡಿಎಸ್ ಪಕ್ಷವನ್ನು ಸಂಘಟಿಸಬೇಕು , ರಾಜ್ಯ ಸರ್ಕಾರದ ಬೇಲೆ ಏರಿಕೆ ವಿರುದ್ಧ , ಸ್ಥಳಿಯ ಕಾರ್ಖಾನೆಗಳಲ್ಲಿ ಸ್ಥಳಿಯ ನಿರುದ್ಯೊಗಿ ಯುವಕರಿಗೆ ಉದ್ಯೋಗ ನೀಡಲು ಆಗ್ರಹಿಸಿ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದ್ದರು.
ಸಭೆಯಲ್ಲಿ ಮುಂಬರುವ ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರು ಹಾಗೂ ಉಪಮಹಾಪೌರರ ಚುನಾವಣೆ, ಜೆಡಿಎಸ್ ಪಕ್ಷದ ಸದ್ಯಸತ್ವ ನೋಂದಣಿ ಅಭಿಯಾನದ ಕಾರ್ಯಕ್ರಮ , ಕಳೆದ ಕಲಬುರಗಿ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಗೆ ಸಂಬಂದಿಸಿದ ಎಲ್ಲಾ ವಿಧಾನಸಭೆಯ ಮತಕ್ಷೇತ್ರದಲ್ಲಿ ನಮ್ಮ ಏನ್ ಡಿ ಎ ಪಕ್ಷದ ಅಭ್ಯರ್ಥಿಗೆ ಯಾವ ಕ್ಷೇತ್ರದಲ್ಲಿ ಏಕೆ ಹೆಚ್ಚು ಮತಗಳು ಬಂದವು ಯಾವ ಕ್ಷೇತ್ರದಲ್ಲಿ ಏಕೆ ಕಡಿಮೆ ಮತಗಳು ಬಂದವು ಏನುವುದರ ಬಗ್ಗೆ , ಕಲಬುರಗಿ ಜಿಲ್ಲೆಯಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಪಕ್ಷವನ್ನು ಸಂಘಟಿಸುವ ಕುರಿತು ವಿಶೇಷ ವಾಗಿ ಚರ್ಚಿಸಲಾಯಿತ್ತು.
ಸಭೆಯಲ್ಲಿ ಮಾಜಿ ಶಾಸಕರು ಹಾಗೂ ರಾಜ್ಯ ಜೆಡಿಎಸ್ ಕಾರ್ಯಧ್ಯಕ್ಷರಾದ ದೊಡ್ಡಪ್ಪ ಗೌಡ ಎಸ್ ಪಾಟೀಲ ನರಿಬೋಳ ಮುಖಂಡರಾದ ಕೃಷ್ಣರೆಡ್ಡಿ, ಸಂಜೀವನ ಯಾಕಪುರ, ನಾಸಿರ್ ಹುಸೇನ್ ಉಸ್ತಾದ್, ವಿಶ್ವನಾಥ ನಾಡಗೌಡ, ಹಣಮಂತ ಸನಗುಂದಿ,ಹಣಮಂತ ಕಂದಹಳ್ಳಿ, ಸಿದ್ದಣ್ಣ ಪಾಟೀಲ್,ಸುನಿಲ್ ಗಾಜರೆ. ಸಂಜು ಮಡಕಿ, ಪ್ರವೀಣ್ ಜಾಧವ ಯೇಶುನಾಥ, ಭೀಮರಾಯ ಜನಿವಾರ, ಜಮೀಲ್ ಗೌóಡಿ, ಕಲೀಮ್ ಬಾಂಡ್, ರವಿಶಂಕರ್ ರೆಡ್ಡಿ, ಶ್ರೀಮತಿ ಪಾರ್ವತಿ ಪುರಾಣಿಕ್ , ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ಕೇಂದ್ರ ಕೈಗಾರಿಕಾ ಸಚಿವರಾದ ನಮ್ಮ ಪಕ್ಷದ ರಾಜ್ಯಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚಿನ ಕಾರ್ಖಾನೆ ಪ್ರಾರಂಭಿಸಲು ಹೆಚ್ಚಿನ ಆದ್ಯತೆ ನೀಡಲು ನಮ್ಮ ಜಿಲ್ಲೆಯ ಪಕ್ಷದ ನಾಯಕರೊಂದಿಗೆ ಮನವಿ ಪತ್ರ ಸಲ್ಲಿಸಲಾಗುವುದು.- ಬಾಲರಾಜ್ ಗುತ್ತೇದಾರ, ಜೆಡಿಎಸ್ ಪಕ್ಷದ ಜಿಲ್ಲಾದ್ಯಕ್ಷರು ಕಲಬುರಗಿ