ಉಪ ಮುಖ್ಯಮಂತ್ರಿ ಡಿಕೆಸಿ ಮತ್ತು ಓಲೈಸುವ ಸಾಹಿತಿಗಳು

0
33

ಸಾಹಿತಿಗಳು ರಾಜಕಾರಣಿಗಳಲ್ಲ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಾಹಿತಿಗಳು ರಾಜಕಾರಣಿಗಳೆಂದು ಕರೆದಿರುವುದು ಅತ್ಯಂತ ವಿಷಾದದ ಸಂಗತಿಯಾಗಿದೆ. ಅವರು ತಮ್ಮ ತಿಳುವಳಿಕೆ ಮತ್ತು ಜ್ಞಾನದ ಕೊರತೆಯಿಂದ ಇಂಥ ಹೇಳಿಕೆಯನ್ನು ನೀಡಿದ್ದಾರೆ. ಸಾಹಿತಿಗಳು ರಾಜಕಾರಣಿಗಳಲ್ಲ. ರಾಜಕಾರಣಿಗಳನ್ನು ಒಲಿಸಿ ಓಲೈಸಿ ವಿಧಾನಸೌಧ ಸುತ್ತುವವರು ಸಾಹಿತಿಗಳಲ್ಲ. ಇಂಥವರು ಅರ್ಥಪೂರ್ಣ ಮೌಲಿಕ ಘನತೆ ಗಾಂಭೀರ್ಯ ಹೊಂದಿದ ಸಾಹಿತಿಗಳು ಎಂದು ಸಮಾಜದಲ್ಲಿ ಗುರುತಿಸಿಕೊಳ್ಳುವುದಿಲ್ಲ.

ಆಳುವ ಸರ್ಕಾರವನ್ನು ಒಲಸಿ ಓಲೈಸಿಕೊಂಡು ವಿಧಾನಸೌಧ ಸುತ್ತ ಸುತ್ತುವವರು ಕಳಪೆ ಸಾಹಿತಿಗಳೇ ಹೊರತು ಗಂಭೀರವಾದ ಸಾಹಿತ್ಯ ರಚಕರಲ್ಲ ರಾಷ್ಟ್ರಕವಿ ಕುವೆಂಪು ಅವರು ಸರ್ಕಾರವನ್ನಾಗಲಿ ರಾಜಕಾರಣಿಗಳನ್ನಾಗಲಿ ಎಂದು ಓಲೈಸಲಿಲ್ಲ. ಅವರ ಗುರುಗಳಾದ ಬಿ ಎಂ ಶ್ರೀಕಂಠಯ್ಯನವರು ರಾಜ ಸೇವಾಸಕ್ತ ಎಂದು ಕರೆಸಿಕೊಳ್ಳುತ್ತಿದ್ದರು. ರಾಷ್ಟ್ರಕವಿ ಕುವೆಂಪು ಅವರು ಮೈಸೂರು ಅರಮನೆಯ ಸಮೀಪಕ್ಕೂ ಹೋಗಲಿಲ್ಲ. ಅತ್ಯಂತ ಸ್ವಾಭಿಮಾನದಿಂದ ಅರ್ಥಪೂರ್ಣವಾದ ಮೌಲಿಕ ಸಾಹಿತಿಗಳಾಗಿ ರಾಷ್ಟ್ರಕವಿ.

Contact Your\'s Advertisement; 9902492681

ಆದರೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆಯಿಸಿದ ಸಾಹಿತ್ಯ ಅಕಾಡೆಮಿ ಅಧ್ಯಕ್ಷರುಗಳು ಸರ್ಕಾರವನ್ನು ಓಲೈಸಿ ಒಲಿಸಿಕೊಂಡಂಥ ಸಾಹಿತಿಗಳೇ ಹೊರತು ಅವರನ್ನು ಗಂಭೀರವಾದ ಸಾಹಿತಿಗಳೆಂದು ಯಾರು ನಾವು ಭಾವಿಸಿಲ್ಲ. ಅವರು ಕಾಂಗ್ರೆಸ್ ಪಕ್ಷದ ಕಚೇರಿಗಾದರೂ ಹೋಗುತ್ತಾರೆ ಶಿವಕುಮಾರ್ ಮನೆಗಾದರೂ ಹೋಗುತ್ತಾರೆ.

ಕಾಂಗ್ರೆಸ್ ಸರ್ಕಾರವನ್ನು ಓಲೈಸುವುದು ವಿಧಾನಸೌಧ ಸುತ್ತುವುದೇ ಅವರ ಕೆಲಸವಾಗಿದೆ. ನಮ್ಮಲ್ಲಿ ಕೆಲವರು ಸರ್ಕಾರಿ ಸಾಹಿತಿಗಳು ಮಠೋಪ ಜೀವಿಗಳು ಮತ್ತು ಪೀಠೋಪ ಜೀವಿಗಳಿದ್ದಾರೆ. ಇವರು ಸರ್ಕಾರವನ್ನು ಒಲಿಸಿ ಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ಇದರಿಂದ ಸಾಹಿತ್ಯ ಲೋಕ ಕಲಂಕಿತವಾಗಿದೆ ಸಾಹಿತಿಗಳು ರಾಜಕಾರಣಿಗಳು ಎಂದು ಹಗುರವಾಗಿ ಉಪ ಮುಖ್ಯಮಂತ್ರಿಗಳು ಮಾತಾಡಿದ್ದು ಇಡೀ ಸಾಹಿತ್ಯ ಲೋಕಕ್ಕೆ ಕರ್ನಾಟಕದ ಸಾಹಿತಿಗಳಿಗೆ ಮಾಡಿದ ಅವಮಾನವಾಗಿದೆ.

ಕೂಳಿನ ಹಂಗಿಗೆ ಬದುಕುವ ರಾಜಧನ ಪಡೆದು ಜೀವನ ಮಾಡುವ ರಾಜಕಾರಣಿಗಳನ್ನು ಒಲಿಸಿ ಒಲೈಸಿ ಪ್ರಶಸ್ತಿ ಪಡೆಯುವ ಸಾಹಿತಿಗಳ ಸಂಖ್ಯೆ ಅಧಿಕವಾಗಿರುವುದರಿಂದ ಶಿವಕುಮಾರ್ ಈ ರೀತಿ ಭ್ರಮೆಗೊಂಡು ಹೇಳಿಕೆ ನೀಡಿರಬಹುದು ಇದು ಅವರ ತಪ್ಪಲ್ಲ. ಮೇಲು ನೋಟಕ್ಕೆ ಹಾಗೆ ಕಾಣುತ್ತದೆ. ವಾಸ್ತವಿಕವಾಗಿ ಇದನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ. ಸಾಹಿತಿಗಳನ್ನು ರಾಜಕಾರಣಿಗಳೆಂದು ಕರೆದಿರುವುದು ವಿಷಾದನೀಯ.

ಕೂಡಲೇ ಉಪಮುಖ್ಯಮಂತ್ರಿಗಳು ತಮ್ಮ ಅಜ್ಞಾನದ ಹೇಳಿಕೆಯನ್ನು ಹಿಂದಕ್ಕೆ ಪಡೆದುಕೊಂಡು ಸಾಹಿತಿಗಳಿಗೆ ಮರ್ಯಾದೆ ಗೌರವ ನೀಡುವುದನ್ನು ಕಲಿತುಕೊಳ್ಳಲಿ ಸಾಹಿತಿಗಳು ತಮ್ಮ ಘನತೆ ಗೌರವ ಮರೆತು ಕಾಂಗ್ರೆಸ್ ಪಕ್ಷದ ಕಚೇರಿಗೆ ಹೋಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಂತೆ ಸಭೆ ನಡೆಸಿರುವುದರಿಂದ ಇಂಥ ಅವಹೇಳನಕಾರಿ ಹಾಗೂ ಮುಜುಗರದ ಪರಿಸ್ಥಿತಿಗೆ ಸಿಕ್ಕಿಕೊಂಡಿದ್ದಾರೆ. ಇನ್ನೊಮ್ಮೆ ಇಂಥ ತಪ್ಪು ಮಾಡಬಾರದೆಂದು ಸಾಹಿತಿಗಳಿಗೆ ಮನವಿ ಮಾಡಿಕೊಳ್ಳುತ್ತೇನೆ.

-ಪ್ರೊ. ಶಿವರಾಜ ಪಾಟೀಲ ಚಿಂತಕರು ಹಾಗೂ ಸಾಹಿತಿಗಳು ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here