ಸಂಘ ಸಂಸ್ಥೆಗಳು ಸಮಾಜಮುಖಿ ಕಾರ್ಯ ಮಾಡಬೇಕು

0
28

ಸುರಪುರ: ಇಂದು ಸಂಘ ಸಂಸ್ಥೆಗಳು ದೇಶ,ನಾಡಿನ ಅಭಿವೃಧ್ಧಿ ಕಾರ್ಯಗಳನ್ನು ಮಾಡುವಲ್ಲಿ ಮುಂಚುಣಿಯಲ್ಲಿವೆ,ಅದರಂತೆ ಉದಯಿಸುವ ಎಲ್ಲಾ ಸಂಘ-ಸಂಸ್ಥೆಗಳು ಸಮಾಜಮುಖಿ ಕಾರ್ಯದಲ್ಲಿ ತೊಡಗಿದಾಗ ಸಂಸ್ಥೆಗಳು ಜನ ಮೆಚ್ಚುಗೆ ಪಡೆಯಲಿವೆ ಎಂದು ಶ್ರೀಗಿರಿ ಮಠದ ಪೂಜ್ಯ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ತಾಲುಕಿನ ಲಕ್ಷ್ಮೀಪುರ-ಬಿಜಾಸಪುರ ಮಾರ್ಗ ಮಧ್ಯದ ಶ್ರೀಗಿರಿ ಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀ ವಿಶ್ವಗುರು ಬಸವ ಸೇವಾ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿ,ಈ ಸಂಸ್ಥೆ ಸಮಾಜ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ಉದಯಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ,ಆರಂಭದಲ್ಲಿಯೇ ಪರಿಸರ ಕಾಳಜಿಯನ್ನಿಟ್ಟುಕೊಂಡು ಇಂದು ಸಸಿಗಳ ವಿತರಣೆ ಮಾಡುವ ಮೂಲಕ ಸಮಾಜಮುಖಿ ಕಾರ್ಯಕ್ಕೆ ಮುಂದಾಗಿರುವುದು ಸಂತೋಷದ ಸಂಗತಿಯಾಗಿದೆ,ಸಂಘ ಸಂಸ್ಥೆಗಳ ಇಂತಹ ಕಾರ್ಯಕ್ಕೆ ಶ್ರೀಮಠ ಸದಾಕಾಲ ಬೆಂಬಲಿಸಲಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಮುಖಂಡರಾದ ಸಗರನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ,ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಶಿವರುದ್ರ ಉಳ್ಳಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾ ಮುಖಂಡರಾದ ಮಂಜುಳಾ ಗೂಳಿ,ರೆಡ್ಡಿ ಸಮಾಜದ ಸುರಪುರ,ಹುಣಸಗಿ ತಾಲೂಕು ಅಧ್ಯಕ್ಷ ಬಾಬುಗೌಡ ಪಾಟೀಲ್ ಅಗತೀರ್ಥ,ವೀರಶೈವ ಲಿಂಗಾಯತ ಯುವ ವೇದಿಕೆ ಜಿಲ್ಲಾಧ್ಯಕ್ಷ ಪ್ರದೀಪ ಕದರಾಪುರ,ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಣಗೌಡ ಹಗರಟಗಿ,ಬಿಜೆಪಿ ಯುವ ಮುಖಂಡ ಜಗದೀಶ ಪಾಟೀಲ್,ಸೂಗು ಸಜ್ಜನ್ (ಮೋದಿ),ಅಶೋಕ ಹಯ್ಯಾಳ,ಸಂಪ್ರೀತ್ ರಂಗಂಪೇಟ,ಲಿಂಗರಾಜ,ಮಣಿಕಂಠ ಮಕಾಶಿ ಜಾಲಿಬೆಂಚಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶರಣು ಬಳಿ ಜಾಲಿಬೆಂಚಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.ಇದೇ ಸಂದರ್ಭದಲ್ಲಿ ನೂರಾರು ಜನರಿಗೆ ಸಸಿಗಳನ್ನು ವಿತರಣೆ ಮಾಡಿ ಪರಿಸರ ದಿನವನ್ನು ಆಚರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here