ಕಲಬುರಗಿ: ತಮ್ಮ ಜೀವನುದ್ದಕ್ಕೂ ವೀರಶೈವ ಸಮಾಜಕ್ಕಾಗಿ ನಿಸ್ವಾರ್ಥ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿದ ಲಿಂ. ಡಿ.ವಿ. ಪಾಟೀಲ ರ ಕೊಡುಗೆ ಅನನ್ಯವಾಗಿದೆ ಎಂದು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಆದ ಎಂಎಲ್ಸಿ ಶಶೀಲ್ ಜಿ ನಮೋಶಿ ಹೇಳಿದರು.
ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದ ಲಿಂ. ಡಿ.ವಿ. ಪಾಟೀಲ ಅವರ ಸ್ಮರಣಾರ್ಥ ವಿವಿಧ ಕ್ಷೇತ್ರದ ಸಾಧಕರಿಗೆ ಧೈರ್ಯನಿಧಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸುಮಾರು ಐವತ್ತು ವರ್ಷಗಳ ಕಾಲ ವೀರಶೈವ ಸಮಾಜವನ್ನು ಸಂಘಟನೆಗೊಳಿಸಿ ಬಸವ ತತ್ವ ಪ್ರಚಾರ ಮಾಡಿದವರು.
ಆ ಮೂಲಕ ಸರ್ವ ಸಮಾಜದ ಜನರನ್ನು ಅಪ್ಪಿಕೊಂಡು ಬದುಕಿದ್ದು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದ ಅವರು, ಡಿ.ವಿ. ಪಾಟೀಲ ರ ಕುಟುಂಬಕ್ಕೆ ಸಹಾಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ನಗರದ ರಸ್ತೆಯೊಂದಕ್ಕೆ ಅಥವಾ ನಗರದಲ್ಲಿ ನಿರ್ಮಿಸಲ್ಪಟ್ಟಿರುವ ವೀರಶೈವ ಸಮಾಜದಡಿಯಲ್ಲಿನ ವೀರಶೈವ ವಿದ್ಯಾರ್ಥಿ ವಸತಿ ನಿಲಯಕ್ಕೆ ಲಿಂಗೈಕ್ಯ ಡಿ.ವಿ.ಪಾಟೀಲ ಅವರ ಹೆಸರನ್ನು ಇಡುವ ಮೂಲಕ ಅವರನ್ನು ಶಾಶ್ವತವಾಗಿ ಜೀವಂತವಾಗಿಡುವ ಕಾರ್ಯವಾಗಲಿ. ಆ ಮೂಲಕ ಡಿ.ವಿ.ಪಾಟೀಲ ಅವರ ಸಾಮಾಜಿಕ ಸೇವೆಯನ್ನು ಸ್ಮರಿಸುವ ಕಾರ್ಯ ಮಾಡಬೇಕಾಗಿದೆ ಎಂದರು.
ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಎಸ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬಸವೇಶ್ವರ ಸಹಕಾರ ಬ್ಯಾಂಕಿನ ನಿರ್ದೇಶಕಿ ಸುಶೀಲಾಬಾಯಿ ಡಿ.ವಿ. ಪಾಟೀಲ, ಪ್ರಮುಖರಾದ ಶರಣಬಸಪ್ಪ ಬೆಣ್ಣೂರ, ಶರಣು ಪಪ್ಪಾ, ಅಶ್ವಿನ್ ಸಂಕಾ, ಪ್ರತಿಷ್ಠಾನದ ಅಧ್ಯಕ್ಷ ಶ್ರೀಕಾಂತ ಪಾಟೀಲ ತಿಳಗೂಳ, ಕಾರ್ಯಾಧ್ಯಕ್ಷ ಪ್ರಭವ ಪಟ್ಟಣಕರ್, ರವೀಂದ್ರಕುಮಾರ ಭಂಟನಳ್ಳಿ, ಧರ್ಮಣ್ಣ ಎಚ್ ಧನ್ನಿ, ಶರಣರಾಜ್ ಛಪ್ಪರಬಂದಿ, ಮಹಾಂತೇಶ ಪಾಟೀಲ, ಮಹೇಶ ಚಿಂತನಪಳ್ಳಿ , ಧರ್ಮರಾಜ ಜವಳಿ, ಮಲ್ಲಿನಾಥ ಸಂಗಶೆಟ್ಟಿ ವೇದಿಕೆ ಮೇಲಿದ್ದರು.
ವಿವಿಧ ಕ್ಷೇತ್ರದ ಪ್ರಮುಖರಾದ ಸಾಹಿತಿ ಡಾ. ಸೂರ್ಯಕಾಂತ ಪಾಟೀಲ ಸರಸಂಬಾ, ಮಾಜಿ ಮೇಯರ್ ದಶರಥ ಬಾಬು ವಂಟಿ, ದೇವೇಗೌಡ ತೆಲ್ಲೂರ, ಮಲ್ಲಣ್ಣ ಮಡಿವಾಳ, ನೀಲಕಂಠ ಎಂ ಜಮಾದಾರ, ಅನ್ನಪೂರ್ಣ ಮಲ್ಲಿನಾಥ ಸಂಗಶೆಟ್ಟಿ ರಾಜಾಪೂರ ಅವರನ್ನು ಧೈರ್ಯನಿಧಿ ಪ್ರಶಸ್ತಿ ಪ್ರದಾನ ಮಾಡಲಾಯಿತು.