ಶಹಾಬಾದ: ಹದಗೆಟ್ಟ ರಾಜ್ಯ ಹೆದ್ದಾರಿಯಲ್ಲಿ ಸಸಿ ನೆಟ್ಟು ಪ್ರತಿಭಟನೆ

0
78

ಶಹಾಬಾದ: ದಶಕಗಳಿಂದ ರಸ್ತೆ ನಿರ್ಮಾಣಕ್ಕಾಗಿ ಶಹಾಬಾದ ಜನರು, ಪ್ರಗತಿಪರ ವಿಚಾರವಂತರು, ನಿರಂತರವಾಗಿ ಹೋರಾಟ ಮಾಡಿ ಗಮನಕ್ಕೆ ತಂದರೂ ರಸ್ತೆ ನಿರ್ಮಾಣ ಮಾಡದ ಶಾಸಕರು ಮತ್ತು ಅಧಿಕಾರಿಗಳ ವಿರುದ್ಧ ಪ್ರಗತಿ ಪರ ಹೋರಾಟ ಸಮಿತಿ ಪ್ರತಿಭಟನೆ ನಡೆಸಿ ನಗರದ ಬಸವೇಶ್ವರ ವೃತ್ತದ ಹದಗೆಟ್ಟ ರಾಜ್ಯ ಹೆದ್ದಾರಿಯಲ್ಲಿ ಸಸಿ ನೆಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮರಿಯಪ್ಪ ಹಳ್ಳಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಜನರ ಮತ ಪಡೆದು ಆಯ್ಕೆಯಾದ ಜನಪ್ರತಿನಿಧಿಗಳು ಜನರ ಸಮಸ್ಯೆಗೆ ಸ್ಪಂದಿಸದಿರವುದು ನೋಡಿದರೇ ನಾಚಿಕೆಯಾಗುತ್ತದೆ. ಶಹಾಬಾದನ ರಾಜ್ಯ ಹೆದ್ದಾರಿ ಸಂಪರ್ಣ ಹಾಳಾಗಿ ದಶಕಗಳೇ ಉರುಳಿವೆ.ಹಲವು ಬಾರಿ ಪ್ರಗತಿಪರ ಹೋರಾಟ ಸಮಿತಿ ವತಿಯಿಂದ ನಾವು ಹೋರಾಟ ಮಾಡಿದ್ದೆವೆ.ಆದರೂ ಯಾವ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ.

Contact Your\'s Advertisement; 9902492681

ಈ ರಸ್ತೆಯಿಂದ ನಗರದ ಸಾರ್ವಜನಿಕರಿಗೆ ಎಲ್ಲಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ.ನಿತ್ಯ ಇದೇ ರಸ್ತೆಯಿಂದ ಅಧಿಕಾರಿಗಳು ಸಂಚರಿಸುತ್ತಾರೆ.ಆದರೂ ಈ ಬಗ್ಗೆ ಮೌನ ವಹಿಸಿದ್ದು ನೋಡಿದರೇ, ಇಂತಹ ಅಧಿಕಾರಿಗಳು ನಮಗೇ ಬೇಕಾ ಎಂಬ ಪ್ರಶ್ನೆ ಮೂಡುತ್ತಿದೆ. ಮರಗೋಳ ಕಾಲೇಜಿಗೆ ಹೋಗುವ, ಎಮ್‍ಸಿಸಿ ಶಾಲೆಗೆ ಹಾಗೂ ಇತರ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಎಲ್ಲಿಲ್ಲ ಸಂಕಷ್ಟ ಎದುರಿಸುತ್ತಿದ್ದಾರೆ.

ಮಳೆಯಾದರೆ ಕೆಸರು, ಹೊಂಡಗಳಿಂದ ಜನರು ಅಪಘಾತಕ್ಕೆ ಒಳಗಾದರೆ, ಮಳೆಯಿಲ್ಲದ ಸಂದರ್ಭದಲ್ಲಿ ಧೂಳಿನ ಸಮಸ್ಯೆ ಎದುರಾಗುತ್ತಿದೆ. ರಸ್ತೆಯಲ್ಲಿ ತಗ್ಗುಗಳಿವೆಯೀ ಅಥವಾ ತಗ್ಗುಗಳಲ್ಲಿ ರಸ್ತೆಯಿದೆಯೋ ಗೊತ್ತಾಗುತ್ತಿಲ್ಲ. ಪ್ರತಿಭಟನೆ ಮಾಡಿದಾಗಲೊಮ್ಮೆ ಪತ್ರಿಕಾ ಹೇಳಿಕೆ ನೀಡಿ ಎಂಟು ದಿನಗಳಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಮಾಡಲಾಗುತ್ತದೆ ಎಂದು ಸುಳ್ಳು ಹೇಳುವ ಜಾಯಮಾನವನ್ನು ಶಾಸಕರು ಮಾಡುತ್ತಿದ್ದಾರೆ.

ಮರಗೋಳ ಕಾಲೇಜಿನಿಂದ ದಾದಿ ಪೀರ ದರ್ಗಾವರೆಗಿನ ರಸ್ತೆಯ ಮೇಲೆ ಮೋಟಾರ್ ಬೈಕ್ ಹೋಗುವ ಹಾಗಿಲ್ಲ.ಕಾರು, ಲಾರಿಗಳ ಸಂಚಾರ ಎಲ್ಲಿಲ್ಲದ ಕಷ್ಟ. ರಸ್ತೆ ಕಳಪೆ ಮಾಡಿ ಬಿಲ್ ಎತ್ತಿ ಹಾಕಿದರೂ ಯಾವ ಅಧಿಕಾರಿಗಳು ಏನು ಮಾಡೋದಿಲ್ಲ ಎಂದರೆ, ಜನಪ್ರತಿನಿಧಿಗಳಿಗೆ ಕಿವಿ, ಬಾಯಿ ಇದೆಯೋ ? ಇಲ್ಲ ಎಂಬ ಪ್ರಶ್ನೆ ಮೂಡುತ್ತದೆ.

ಪ್ರತಿ ಸಾರಿ ಹೋರಾಟ ಮಾಡಿದಾಗ ಒಂದು ವಾರದಲ್ಲಿ ಟೆಂಡರ್ ಪ್ರಕ್ರಿಯೆ ಮಾಡಲಾಗುವುದು ಎಂದು ಹೇಳುತ್ತಾರೆ, ಆದರೆ ಸುಮಾರು ವರ್ಷಗಳ ಕಳೆದರು ರಸ್ತೆ ದುರಸ್ತಿ ಕಾಮಗಾರಿ ಸಂಪೂರ್ಣ ಗೊಂಡಿಲ್ಲ, ಈಗ ಸಾಂಕೇತಿಕ ಸಸಿ ನೆಟ್ಟಿದ್ದೆವೆ, ಮುಂದಿನ ದಿನಗಳಲ್ಲಿ ಇಡೀ ರಾಜ್ಯ ಹೆದ್ದಾರಿ ತುಂಬಾ ಗಿಡಗಳನ್ನು ನೆಟ್ಟು ಪ್ರತಿಭಟಿಸಲಾಗುವದು ಎಂದು ಹೇಳದರು. ಪ್ರತಿಭಟನೆಯಲ್ಲಿ ಜಹೀರ್ ಅಹ್ಮದ್ ಪಟವೇಗಾರ ಮತ್ತು ಗುಂಡಮ್ಮ ಮಡಿವಾಳ ಮಾತನಾಡಿದರು.

ಈ ಸಂದರ್ಭದಲ್ಲಿ ಗಣಪತರಾವ ಕೆ ಮಾನೆ, ಮಲ್ಲಿಕಾರ್ಜುನ ಪೆÇೀಲಿಸ್ ಪಾಟೀಲ್, ಮಲ್ಲಣ್ಣ ಮಸ್ಕಿ, ಮಲ್ಲಣ್ಣ ಮರತೂರ, ಶ್ರೀನಿವಾಸ ದಂಡಗುಲ್ಕರ, ಮಹ್ಮದ ಮಸ್ತಾನ, ಕಳ್ಳೋಳಿ ಕುಸಾಳೆ, ರಾಜೇಂದ್ರ ಆತನೂರ, ಮಲ್ಲಿಕಾರ್ಜುನ ಹಳ್ಳಿ, ನರಸಿಂಹಲು ರಾಯಚೂರಕರ, ಮಹೇಬೂಬ ಮದ್ರಿ, ರಾಧಿಕಾ ಚೌದರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here