ಶಹಾಬಾದ:ನಗರದ ರೈತ ಸಂಪರ್ಕ ಕೇಂದ್ರ ಹಾಗೂ ನೆಮ್ಮದಿ ಕೇಂದ್ರಕ್ಕೆ ಗುರುವಾರ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ,ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಅವರು ಭೇಟಿ ನೀಡಿ ಪರಿಶೀಲಿಸಿದರು.
ನಗರದ ರೈತ ಸಂಪರ್ಕ ಕೇಂದ್ರಕ್ಕೆ ಬೇಟಿ ನೀಡಿದ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಕೃಷಿ ಅಧಿಕಾರಿಗಳಾದ ಸತೀಶಕುಮಾರ, ಶಶಿಕಾಂತ ಭರಣಿ ಅವರಿಗೆ ಬೀಜ ವಿತರಣೆಯ ಸ್ಟಾಕ್ ತರಲು ತಿಳಿಸಿದರು.ಸ್ಟಾಕ್ ರಜಿಸ್ಟರ್ ಪರಿಶೀಲಿಸಿ, ರೈತರಿಗೆ ವಿತರಿಸುವ ಬೀಜಗಳ ದಾಸ್ತಾನು ಇದೆಯಾ ಎಂದು ಪ್ರಶ್ನಿಸಿದರು.
ಜೂನ್ 3 ರಿಂದ ತೊಗರಿ,ಹೆಸರು, ಉದ್ದು ಬೀಜಗಳನ್ನು ವಿತರಿಸಲಾಗಿದೆ.ರೈತರಿಗೆ ಅಗತ್ಯಕ್ಕೆ ತಕ್ಕಷ್ಟು ಬೀಜಗಳ ದಾಸ್ತಾನು ಇದೆ ಎಂದು ತಿಳಿಸಿದರು. ಬೀಜ ವಿತರಣೆ ಸರದಿಯಲ್ಲಿ ರೈತರು ಕಡಿಮೆ ಸಂಖ್ಯೆಯಲ್ಲಿದ್ದಾರೆ ಏಕೆ? ಬೀಜಗಳ ಗುಣಮಟ್ಟವನ್ನು ಹೇಗೆ ಪರೀಕ್ಷಿಸುತ್ತೀರಿ ಎಂದು ಜಿಲ್ಲಾಧಿಕಾರಿಗಳು ಪ್ರಶ್ನಿಸಿದರು.
ಈಗಾಗಲೇ ಬಿತ್ತನೆ ಬೀಜ ವಿತರಣೆ ಮಾಡಿದ್ದೆವೆ.ರೈತರು ಈಗಾಗಲೇ ಬಿತ್ತನೆ ಮಾಡಿದ್ದಾರೆ.ಉಳಿದ ರೈತರು ಕಡಿಮೆ ಸಂಖ್ಯೆಲ್ಲಿರುವುದರಿಂದ ನಿತ್ಯ 20 ಜನರು ಬರುತ್ತಿದ್ದಾರೆ.ಅಲ್ಲದೇ ಮೇ ತಿಂಗಳಲ್ಲಿ ಬೀಜಗಳು ಬಂದಿದ್ದು, ಅದರಲ್ಲಿ 100 ಬೀಜಗಳನ್ನು ತೆಗೆದುಕೊಂಡು ಬಿತ್ತನೆ ಮಾಡುತ್ತೆವೆÉ. ಬೀಜ ಮೊಳಕೆಯೊಡೆದ ಸಂಖ್ಯೆಯನ್ನು ದಾಖಲಿಸುತ್ತೆವೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದರು.
ಅಲ್ಲದೇ ಬೀಜಗಳ ಗುಣಮಟ್ಟ ಪರೀಕ್ಷಿಸುವ ಕಿಟ್‍ನ್ನು ಜಿಲ್ಲಾಧಿಕಾರಿಗಳು ವೀಕ್ಷಿಸಿದರು.ಸರಿಯಾದ ಸಮಯಕ್ಕೆ ಬೀಜಗಳ ವಿತರಣೆ ಮಾಡಬೇಕು. ವಿತರಣೆ ಮಾಡುವ ಪಟ್ಟಿಯನ್ನು ಹೊರಗಡೆ ಅಂಟಿಸಿ ಎಂದರಲ್ಲದದೇ, ರೈತ ಸಂಪರ್ಕ ಕೇಂದ್ರದಲ್ಲಿ ಯಾವುದಾದರೂ ತೊಂದರೆಯಾಗುತ್ತಿದೆಯೇ ಎಂದು ಅಲ್ಲಿದ್ದ ರೈತರಿಗೆ ಜಿಲ್ಲಾಧೀಕಾರಿಗಳು ಪ್ರಶ್ನಿಸಿದರು.ಎಲ್ಲಾ ರೀತಿಯ ಸೌಲಭ್ಯ ನೀಡುತ್ತಾರೆ ಎಂದು ರೈತರು ಉತ್ತರಿಸಿದರು. ನಂತರ ನಗರದ ನೆಮ್ಮದಿ ಕೇಂದ್ರಕ್ಕೆ ಬೇಟಿ ನೀಡಿ ಪರಿಶೀಲಿಸಿದರು. ದಿನನಿತ್ಯ ಆಧಾರ ಕಾರ್ಡ ತಿದ್ದುಪಡಿ ಬರುವ ಸಂಖ್ಯ ಎಷ್ಟು ಕೇಳಿದರು. ಸಿನಿತ್ಯ 20 ತಿದ್ದುಪಡಿ ಬರುತ್ತವೆ ಎಂದು ಕಂಪ್ಯೂಟರ್ ಆಪರೇಟರ್ ತಿಳಿಸಿದರು.
ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಗದಿತ ಸಮಯದಲ್ಲಿ ಪ್ರಮಾಣ ಪತ್ರ ವಿತರಿಸಬೇಕು.ಅಲ್ಲದೇ ನೆಮ್ಮದಿ ಕೇಂದ್ರದ ಹೊರಗಡೆ ಇರುವ ಖಾಲಿ ಸ್ಥಳದಲ್ಲಿ ಸಸಿಗಳನ್ನು ನೆಡಬೇಕೆಂದು ತಹಸೀಲ್ದಾರ ಜಗದೀಶ ಚೌರ್ ಅವರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೋಬೇಷನರಿ ಐಎಎಸ್ ಅಧಿಕಾರಿ ಮೀನಾಕ್ಷಿ ಆರ್ಯ, ತಹಸೀಲ್ದಾರ ಜಗದೀಶ ಚೌರ್, ನಗರಸಭೆಯ ಪೌರಾಯುಕ್ತ ಡಾ. ಕೆ.ಗುರಲಿಂಗಪ್ಪ,ಗ್ರೇಡ್-2 ತಹಸೀಲ್ದಾರ ಗುರುರಾಜ ಸಂಗಾವಿ ಇತರರು ಇದ್ದರು.