ರಸ್ತೆ ಬದಿ ಗಿಡ ನೆಡಲು ಅರಣ್ಯ ಇಲಾಖೆ ಅಧಿಕಾರಿಗೆ ಮನವಿ

0
16

ಸುರಪುರ: ನಗರದ ಕುಂಬಾರಪೇಟ ದಿಂದ ಮಂಗಳೂರ ಗ್ರಾಮದ ವರೆಗೆ ರಸ್ತೆ ಎರಡು ಬದಿಗಳಲ್ಲಿ ಗಿಡಿ ನೆಡುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ ಸಾಗರ ಬಣ)ದ ಮುಖಂಡರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ನಗರದ ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿ ಮಾತನಾಡಿದ ಮುಖಂಡರು,ಕುಂಬಾರಪೇಟ ದಿಂದ ಮಂಗಳೂರ ವರೆಗೆ ಸುಮಾರು 15 ಕಿ.ಮೀ ದೂರವಿದ್ದು ಈ ರಸ್ತೆಯಲ್ಲಿ ಯಾವುದೇ ಮರಗಳಿಲ್ಲ,ಇದರಿಂದ ಜನರು ಓಡಾಡಲು ಸುಡು ಬಿಸಿಲಲ್ಲೇ ಹೋಗಬೇಕಾಗಿದೆ. ಅಲ್ಲದೆ ಸರಕಾರ ರಸ್ತೆ ಬದಿಗಳಲ್ಲಿ ಮರ ಬೆಳೆಸಲು ಅನೇಕ ಯೋಜನೆಗಳನ್ನು ನೀಡಿದೆ,ಆದರೆ ಯಾವ ಯೋಜನೆಗಳು ಈ ರಸ್ತೆಯಲ್ಲಿ ಮರ ಬೆಳೆಸಲು ಉಪಯೋಗವಾಗಿಲ್ಲ,ಆದ್ದರಿಂದ ಈಗ ಮರಗಳನ್ನು ಬೆಳೆಸುವುದು ಅಗತ್ಯವಾಗಿದ್ದು,ತಾಪಮಾನ ಕಡಿಮೆಗೊಳಿಸಲು ಈ ರಸ್ತೆಯ ಎರಡೂ ಬದಿಗಳಲ್ಲಿ ಗಿಡಗಳನ್ನು ನೆಡುವಂತೆ ಮನವಿ ಮಾಡಿಕೊಂಡರು.
ನಂತರ ಅರಣ್ಯಾಧಿಕಾರಿಗೆ ಬರೆದ ಮನವಿ ಕಚೇರಿ ಸಿಬ್ಬಂದಿ ಮೂಲಕ ಸಲ್ಲಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಹಸನಾಪುರ,ತಾಲೂಕ ಸಂಚಾಲಕ ತಿಪ್ಪಣ್ಣ ಶೆಳ್ಳಗಿ,ಶೇಖರ ಮಂಗಳೂರ,ರಾಜು ಬಡಿಗೇರ,ಎಮ್.ಪಟೇಲ್,ಭೀಮರಾಯ ಮಂಗಳೂರ,ಹಣಮಂತ ರತ್ತಾಳ,ಖಾಜಾ ಅಜ್ಮೀರ್,ಯಲ್ಲಪ್ಪ ರತ್ತಾಳ,ಹಣಮಂತ ದೇವಾಪುರ,ಮೌನೇಶ ದೇವತ್ಕಲ್,ಮೌನೇಶ ತಿಂಥಣಿ,ದೇವಿಂದ್ರ ವಾಗಣಗೇರ,ಈರಪ್ಪ ಬಡಿಗೇರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here