ಯೋಗಾಸನ ಮನುಷ್ಯನಿಗೆ ತುಂಬಾ ಅವಶ್ಯವಾಗಿದೆ; ನ್ಯಾ.ಮಾರುತಿ.ಕೆ

0
9

ಸುರಪುರ: ಪ್ರತಿಯೊಬ್ಬ ಮನುಷ್ಯನಿಗೆ ಯೋಗಾಸನ ತುಂಬಾ ಅವಶ್ಯಕವಾಗಿದೆ ಎಂದು ದಿವಾಣಿ ನ್ಯಾಯಾಧೀಶ ಮಾರುತಿ.ಕೆ ತಿಳಿಸಿದರು.

ನಗರದ ನ್ಯಾಯಾಲಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ,ವಕೀಲರ ಸಂಘ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿ,ಯೋಗ ಮೊದಲು ನಮ್ಮಲ್ಲಿ ಆರಂಭಗೊಂಡಿದೆ ಎಂದು ಬೇರೆ ದೇಶದವರು ಹೇಳುತ್ತಾರೆ,ಆದರೆ ಭಾರತ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಯೋಗಾಭ್ಯಾಸ ಬೆಳೆದು ಬಂದಿದೆ,ಅದನ್ನು ಈಗ 2014ರ ಜೂನ್ 21 ರಂದು ಅಂದು ಪ್ರಧಾನಿ ಯೋಗ ದಿನವನ್ನು ಆರಂಭಿಸಿದರು,ನಂತರ ಅದನ್ನು ಸಂಘಟಿತ ರಾಷ್ಟ್ರಗಳು ಅದನ್ನು ವಿಶ್ವ ಯೋಗ ದಿನವನ್ನಾಗಿ ಆಚರಿಸುತ್ತವೆ ಎಂದು ತಿಳಿಸಿದರು.ಯೋಗ ಪ್ರತಿಯೊಬ್ಬ ಮನುಷ್ಯ ಮಾಡುತ್ತಿದ್ದರೆ,ಆ ಮನುಷ್ಯ ದೈಹಿಕ,ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಅಗತ್ಯವಾಗಿದೆ,ಆದ್ದರಿಂದ ಎಲ್ಲರೂ ಯೋಗಾಭ್ಯಾಸ ಮಾಡಬೇಕು ಎಂದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಬಸವರಾಜ,ವಕೀಲರ ಸಂಘದ ಅಧ್ಯಕ್ಷ ರಮಾನಂದ ಕವಲಿ ಮಾತನಾಡಿದರು,ಆರ್ಟ್ ಆಫ್ ಲಿವಿಂಗ್ ಜಿಲ್ಲಾ ಸಂಯೋಜಕಿ ಶಿಲ್ಪಾ ಆವಂಟಿ ಎಲ್ಲರಿಗೂ ಯೋಗಾಭ್ಯಾಸ ಮಾಡಿಸಿದರು.ಈ ಸಂದರ್ಭದಲ್ಲಿ ಭಾಗವಹಿಸಿದ ಎಲ್ಲರು ಯೋಗ ಪ್ರದರ್ಶನ ನಡೆಸಿದರು.

ಗೃಹ ರಕ್ಷಕ ದಳ ಯೋಗ ದಿನಾಚರಣೆ: ತಾಲೂಕು ಗೃಹ ರಕ್ಷಕ ದಳದ ವತಿಯಿಂದ ನಗರದ ಶ್ರೀ ಪ್ರಭು ಮಹಾವಿದ್ಯಾಲಯ ಆವರಣದಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಗಿದೆ.ಕಂಪನಿ ಕಮಾಂಡರ್ ಯಲ್ಲಪ್ಪ ಹುಲಿಕಲ್ ಮಾರ್ಗದರ್ಶನದಲ್ಲಿ ಎಲ್ಲಾ ಸಿಬ್ಬಂದಿಗಳು ಯೋಗ ಪ್ರದರ್ಶನ ಮಾಡಿದರು.ಸೀನಿಯರ್ ಫ್ಲಾಟೂನ್ ಕಮಾಂಡರ್ ಯಲ್ಲಪ್ಪ ಹುಲಿಕಲ್,ಫ್ಲಾಟೂನ್ ಕಮಾಂಡರ್ ರಮೇಶ ಅಂಬುರೆ ಸೇರಿದಂತೆ ಎಲ್ಲಾ ಗೃಹ ರಕ್ಷಕ ದಳದ ಸಿಬ್ಬಂದಿಗಳು ಭಾಗವಹಿಸಿದ್ದರು.

ತಾಲೂಕ ಪಂಚಾಯತ್ ಅಂ.ರಾ.ಯೋಗ ದಿನಾಚರಣೆ: ತಾಲೂಕಿನ ಪೇಠ ಅಮ್ಮಾಪುರ ಗ್ರಾಮದ ಅಮೃತ ಸರೋವರ ಕೆರೆಯ ದಂಡೆಯ ಮೇಲೆ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗಿದೆ.ಕಾರ್ಯಕ್ರಮದಲ್ಲಿ ತಾ.ಪಂ ಇಓ ಬಸವರಾಜ ಸಜ್ಜನ್ ಭಾಗವಹಿಸಿ ಎಲ್ಲರಿಗೂ ಯೋಗ ದಿನದ ಮಹತ್ವದ ಕುರಿತು ತಿಳಿಸಿಕೊಟ್ಟರು.ದೈಹಿಕ ಶಿಕ್ಷಕ ಗುರುರಾಜ ಯೋಗಾಭ್ಯಾಸ ಮಾಡಿಸಿದರು.ಗ್ರಾಮ ಪಂಚಾಯತಿ ಅಭಿವೃಧ್ಧಿ ಅಧಿಕಾರಿಗಳು,ಗ್ರಾ.ಪಂ ಸದಸ್ಯರು ಸೇರಿದಂತೆ ಅನೇಕ ಜನ ನರೇಗಾ ಕೂಲಿ ಕಾರ್ಮಿಕರು,ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here