ಸಮಾಜ ಸುಧಾರಕ ಕಬೀರದಾಸರ 647ನೇ ಜಯಂತಿ ಆಚರಣೆ

0
32

ಕಲಬುರಗಿ: ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಹಿಂದಿ ವಿಭಾಗದ ವತಿಯಿಂದ ಕಬೀರದಾಸರ 647ನೆಯ ಜಯಂತಿಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಾಲೇಜಿನ ಪೂರ್ವ ಪ್ರಾಧ್ಯಾಪಕರಾದ ಡಾ. ವಿಜಯಕುಮಾರ ಪರುತೆ ಯವರು ಆಗಮಿಸಿ ಕಬೀರದಾಸರ ಜೀವನದ ಮತ್ತು ಅವರ ಸಾಹಿತ್ಯದ ಕುರಿತು ವಿದ್ಯಾರ್ಥಿಗಳಿಗೆ ತಿಳಿ ಹೇಳುತ್ತಾ ಹಿಂದಿ ಸಾಹಿತ್ಯ ಕಬೀರ ತುಳಸಿ, ಸುರದಾಸ ರವರ ಸಾಹಿತ್ಯ ದಿಂದಲ್ಲೇ ಇದೆ ಎಂದು ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಜೇಂದ್ರ ಕೊಂಡಾ ವಹಿಸಿಕೊಂಡು ಕಬೀರದಾಸರ ಸಾಹಿತ್ಯವನ್ನು ಜೀವನದಲ್ಲಿ ಅಳವಡಿಸಿ ಕೊಳ್ಳುವುದು ಬಹು ಮುಖ್ಯ ಎಂದು ಹೇಳಿದರು.

ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಪ್ರೇಮಚಂದ ಚವ್ಹಾಣ ಉಪಸ್ಥಿತರಿದ್ದು ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿಭಾಗದ ಉಪನ್ಯಾಸಕರಾದ ಕವಿತಾ ಠಾಕೂರ್, ಸುಷ್ಮಾ ಕುಲಕರ್ಣಿ, ಡಾ. ಮಹೇಶ ಗಂವಾರ, ಡಾ. ಮೋಹನರಾಜ ಪತ್ತಾರ, ಸಿದ್ಧಲಿಂಗ ಬಾಶೆಟ್ಟಿ ಮತ್ತು ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here