ಸುರಪುರ: ತಾಲೂಕಿನ ಶೆಳ್ಳಗಿ ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ಕೂಡಲೇ ದುರಸ್ತಿಗೊಳಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಿ.ಜಿ ಸಾಗರ ಬಣದ ಮುಂಡರು ಒತ್ತಾಯಿಸಿದರು.
ನಗರದ ಲೋಕೋಪಯೋಗಿ ಇಲಾಖೆ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿ ಮಾತನಾಡಿ,ಬೀದರ-ಬೆಂಗಳೂರ ರಾಜ್ಯ ಹೆದ್ದಾರಿ ಯಿಂದ ಶೆಳ್ಳಗಿ ಗ್ರಾಮಕ್ಕೆ ಹೊಗುವ ಸುಮಾರು 5 ಕಿ.ಮೀ ರಸ್ತೆ ಡಾಂಬರ್ ಸಂಪೂರ್ಣ ಕಿತ್ತು ಹೋಗಿದೆ,ಕಂಕರ್ ಕೂಡ ಕಿತ್ತು ಬಂದು ಇಡೀ ರಸ್ತೆ ಜನ ಓಡಾಟಕ್ಕೆ ಕಂಟಕವಾಗಿದೆ.ಕಳೆದ ಕೆಲ ದಿನಗಳ ಹಿಂದೆ ಗರ್ಭೀಣಿ ಮಹಿಳೆಯನ್ನು ಸುರಪುರ ನಗರಕ್ಕೆ ಕರೆದುಕೊಂಡು ಬರುವಾಗ ಹಾಳಾದ ರಸ್ತೆಯಿಂದ ರಸ್ತೆ ಮಧ್ಯದಲ್ಲಿಯೇ ಹೆರಿಗೆಯಾಗಿರುವ ಘಟನೆ ನಡೆದಿದೆ,ಅನೇಕ ಬೈಕ್‍ಗಳು ಅಪಘಾತಕ್ಕೀಡಾಗಿವೆ. ಆದ್ದರಿಂದ ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಸಂಘಟನೆ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿ,ನಂತರ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಬರೆದ ಮನವಿಯನ್ನು ಕಚೇರಿ ಸಿರಸ್ತೆದಾರರ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾ ಸಂ.ಸಂಚಾಲಕ ಶಿವಲಿಂಗ ಹಸನಾಪುರ,ತಾಲೂಕ ಸಂಚಾಲಕ ತಿಪ್ಪಣ್ಣ ಶೆಳ್ಳಗಿ,ಶೇಖರ ಮಂಗಳೂರ,ಎಮ್.ಪಟೇಲ್,ರಾಜು ಬಡಿಗೇರ,ಭೀಮರಾಯ ಮಂಗಳೂರ,ಹಣಮಂತ ರತ್ತಾಳ,ಖಾಜಾ ಅಜ್ಮೀರ್,ಯಲ್ಲಪ್ಪ ರತ್ತಾಳ,ಹಣಮಂತ ದೇವಾಪುರ,ಮೌನೇಶ ದೇವತ್ಕಲ್,ಮೌನೇಶ ತಿಂಥಣಿ,ಈರಪ್ಪ ಬಡಿಗೇರ,ದೇವಿಂದ್ರ ವಾಗಣಗೇರ,ಹುಸನಪ್ಪ ಪೂಜಾರಿ,ಶಿವಪ್ಪ ಶೆಳ್ಳಗಿ ಸೇರಿದಂತೆ ಅನೇಕರಿದ್ದರು.