ಹಟ್ಟಿ: ಯಲಗಟ್ಟಾ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಾಲೆಗೆ ನಿರಂತರ ಗೈರಾಗುತ್ತಿರುವ ಮುಖ್ಯಗುರು ನಾಗನಗೌಡ ರನ್ನು ಸೇವೆಯಿಂದ ಅಮಾಮಾತಿಗೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಲಿಂಗಸ್ಗೂರು ತಾಲೂಕು ಸಮಿತಿ ನೇತೃತ್ವದಲ್ಲಿ ಶಾಲೆಯ ಒಳಾಂಗಣದಲ್ಲಿ ಅನಿರ್ಧಿಷ್ಟಾವಧಿ ರವಿವಾರಕ್ಕೆ ಧರಣಿ 4ನೇ ದಿನಕ್ಕೆ ಕಾಲಿಟ್ಟಿದೆ.
ಸೋಮವಾರದೊಳಗೆ ಅಮಾನತು ಆಗಿಲ್ಲ ಅಂದ್ರೆ ಶಾಲೆಗೆ ಬೀಗ ಹಾಕಲು ನಿರ್ಧಾರ ಮಾಡಲಾಗಿದೆ. ನಾಗನಗೌಡ ಪಾಟೀಲ್ ರಜೆ ಹೋಗಬೇಕಾದ ಸಂದರ್ಭದಲ್ಲಿ ಬಿ.ಇ.ಓ. ಕಛೇರಿಗೆ ಯಾವುದೇ ಪತ್ರ ವ್ಯವಹಾರ ಮಾಡಿರುವುದಿಲ್ಲ. ಇಲ್ಲಿಯವರೆಗೆಗೂ ಯಾವುದೇ ಎಸ್ .ಡಿ ಎಮ್.ಸಿ ಸಭೆಯನ್ನೂ ಸಹ ನಡೆಸಿರುವುದಿಲ್ಲ. ಎಸ್.ಎಸ್.ಎಲ್.ಸಿ ಫಲಿತಾಂಶ ಸಹ ಶೇಕಡಾ 51% ರಷ್ಟು ಆಗಿದ್ದು, ಉಳಿದ 33ಮಕ್ಕಳ ಅನುತ್ತೀರ್ಣರಾಗಿದ್ದಾರೆ. ಮುಖ್ಯೋಪಾದ್ಯಾಯರು ಶಾಲೆಗೆ ಬರದೇ ಹಾಜರಿ ಪುಸ್ತಕದಲ್ಲಿ ಸಹಿ ಮಾಡಿರುತ್ತಾರೆ. ಈ ಬಗ್ಗೆ ದಿನಾಂಕ 20-06-2024 ರಿಂದ ಶಾಲಾ ಆವರಣದಲ್ಲಿ ಎಸ್.ಎಪ್.ಐ ಸಂಘಟನೆ ಹಾಗೂ ಗ್ರಾಮಸ್ಥರು ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದರೂ ಆಯುಕ್ತರು ಇವರನ್ನು ಅಮಾನತು ಮಾಡಲು ವಿಳಂಬ ಮಾಡುತ್ತಿದ್ದಾರೆ ಎಂದು ಧರಣಿ ನಿರತರು ಆರೋಪಿಸಿದ್ದಾರೆ.
ಸೋಮವಾರ ಒಳಗೆ ಅಮಾನತು ಮಾಡಿಲ್ಲ ಅಂದ್ರೆ ಶಾಲೆಗೆ ಶಾಲೆಗೆ ಬೀಗ ಹಾಕಲು ತೀರ್ಮಾನಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ತಾಲ್ಲೂಕು ಕಾರ್ಯದರ್ಶಿ ಪವನ್ ಕಮದಾಳ, ತಾಲೂಕು ಮುಖಂಡರಾದ ವಿನಯ್ ಕುಮಾರ್, ಬಸವರಾಜ, ಸೋಮನ ಮರಡಿ, ಕೆಪಿಆರ್ ಎಸ್ ತಾಲ್ಲೂಕು ಮುಖಂಡ ನಿಂಗಪ್ಪ ಎಂ., ಎಸ್ ಡಿ ಎಂ ಸಿ ಅಧ್ಯಕ್ಷ ನಿಂಗಪ್ಪ ಸಾಹುಕಾರ್, ಸದಸ್ಯ ಮರಡಯ್ಯ ಸ್ವಾಮಿ, ವಿವಿಧ ಸಂಘಟನೆಗಳ ಮುಖಂಡರಾದ ಅಣ್ಣಯ್ಯ, ಶಿವಶಂಕರ, ವಡಿಕೆಪ್ಪ, ರಾಜು ನಾಯಕ, ತೋಟೆಂದ್ರ ಅಂಗಡಿ, ಸಿದ್ದು ಮಾಲಿ, ಶಿವು ಪಿ ಜಿ., ನಿರುಪಾದಿ, ವೆಂಕಟೇಶ್ ಯಾದವ್, ವೀರೇಶ್ ಬಡಿಗೇರ್, ಬೆಟ್ಟಪ್ಪ, ಸಿಐಟಿಯು ಮುಖಂಡ ಅಲ್ಲಾಭಕ್ಷ, ನಿಂಗಪ್ಪ ಬೋವಿ, ಶ್ರೀನಿವಾಸ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.