ಕಲಬುರಗಿ: ರಾಷ್ಟ್ರದ ಪ್ರತಿಷ್ಠಿತ ಪೇಂಟ್ ಕಂಪನಿಗಳಲ್ಲೊಂದಾದ ‘ಸರ್ಫಾ ಕೋಟ್ಸ್’ ಕಂಪನಿ ವತಿಯಿಂದ ನಗರದ ಸೆಂಚುರಿಯನ್ ಪಾರ್ಕ್ ಹೋಟೆಲ್‍ನ ಸಭಾಂಗಣದಲ್ಲಿ ಎರಡು ದಿನಗಳ ಕಾಲ ಇಂಜಿನಿಯರ್ಸ್ ಮೀಟ್’ ನಡೆಯಿತು. ಇದೇ ವೇಳೆ ಹೊಸ ಪೇಂಟ್ ಬಿಡುಗಡೆ ಮಾಡಲಾಯಿತು.
ಸರ್ಫಾ ಕೋಟ್ ಕಂಪನಿಯ ಉತ್ತರ ಕರ್ನಾಟಕದ ಮುಖ್ಯಸ್ಥರಾದ (ಎಎಸ್‍ಎಂ) ಶ್ರೀಧರ್ ಸಫಾರೆ, ಸುಪರ್‍ವೈಸರ್ ಚಂದ್ರಶೇಖರ್, ವಿಭಾಗದ ಸಿ ಆ್ಯಂಡ್ ಎಫ್ ಮನಿಷ ಟ್ರೇಡರ್ಸ್‍ನ ಮಾಲೀಕರಾದ ಅನಿಲಕುಮಾರ ಗಂಗಾಣೆ, ವಿತರಕರಾದ ಗುರುರಾಜ ಪೇಂಟ್ಸ್‍ನ ಮಲ್ಲಿಕಾರ್ಜುನ ಕುಲಕರ್ಣಿ ಉಪಸ್ಥಿತರಿದ್ದರು.
ಶ್ರೀಧರ ಅವರು ಮಾತನಾಡಿ, `ಸರ್ಫಾ ಕೋಟ್ಸ್’ ಕಂಪನಿ ಸುಮಾರು 45 ವರ್ಷಗಳಿಂದ ಜನರ ಬೇಡಿಕೆಗೆ ಅನುಗುಣವಾಗಿ ಪೇಂಟ್ ತಯಾರಿಸುತ್ತಿದ್ದು, ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದು ತಿಳಿಸಿ, ವಿವಿಧ ಬಗೆಯ ಪೇಂಟ್ಸ್ ಬಗ್ಗೆ ಸವಿಸ್ತಾರವಾಗಿ ಇಂಜಿನಿಯರ್‍ಗಳಿಗೆ ಮಾಹಿತಿಗಳನ್ನು ನೀಡಿದರು.
ಇದೇ ಸಂದರ್ಭದಲ್ಲಿ ಕಂಪನಿಯ ಹೊಸ ಬಗೆಯ ಸರ್ಫಾ ಕೋಟ್ಸ್ `ಎಕ್ಸ್‍ಟ್ರೀಮಾ’ ಆಲ್ ವೆದರ್ ಬಣ್ಣಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.
ಜನರ ಅಪೇಕ್ಷೆ ಮತ್ತು ಬೇಡಿಕೆಗೆ ಅನುಗುಣವಾಗಿ ಬಣ್ಣ ತಯಾರಿಸಿ ಕೊಡುವುದರಿಂದ ಸುಮಾರು 40 ಬಗೆಯ ಬಣ್ಣ ತಯಾರಿಸುತ್ತಿದೆ, ಅಲ್ಲದೇ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಡಿಮೆ ದರ ಹಾಗೂ ಹೆಚ್ಚು ಬಾಳಿಕೆ ಕವರೇಜ್ ಬರುವುದರಿಂದ ಸರ್ಫಾ ಕೋಟ್ಸ್ ಪೇಂಟ್ಸ್‍ನ್ನೇ ಜನರು ಇಷ್ಟಪಡುತ್ತಾರೆ. ಕಂಪನಿ ಅಧಿಕಾರಿಗಳು ಕಾಲಕಾಲಕ್ಕೆ ಪ್ರಾಜೆಕ್ಟ್‍ಗಳಿಗೆ ಸಂಪರ್ಕ ಮಾಡಿ ಇಂಜಿನಿಯರರು ಹಾಗೂ ಕಟ್ಟಡ ಮಾಲೀಕರಿಗೆ ಕಂಪನಿ ಉತ್ಪನ್ನ ಬಗ್ಗೆ ಮಾಹಿತಿಗಳನ್ನು ಕೊಟ್ಟಿದ್ದರಿಂದ ಸರ್ಫಾ ಕೋಟ್ಸ್ ಕಂಪನಿ ಜನಸ್ನೇಹಿಯಾಗಿದೆ. ಉನ್ನತ ಮಟ್ಟಕ್ಕೆ ಬೆಳೆದು ನಿಂತಿದೆ ಎಂದು ನುಡಿದರು.
ನಗರದ ಹಲವಾರು ಸಿವಿಲ್ ಇಂಜಿನಿಯರುಗಳು ಪಾಲ್ಗೊಂಡಿದ್ದರು.