ಕರ್ನಾಟಕ ಸಂಗೀತದ ತೊಟ್ಟಿಲು; ಡಾ. ಸ್ವಪ್ನಿಲ್ ಚಾಪೇಕರ್

0
33

ಕಲಬುರಗಿ; ಕರ್ನಾಟಕವು ಹಿಂದೂಸ್ತಾನಿ ಗಾಯನÀ ಮತ್ತು ಕರ್ನಾಟಕ ಸಂಗೀತದ ತೊಟ್ಟಿಲಾಗಿದ್ದು, ಸಂಗೀತ ಪ್ರಪಂಚಕ್ಕೆ ಅನೇಕ ಅತ್ಯುತ್ತಮ ಸಾಂಪ್ರದಾಯಿಕ ಸಂಗೀತಗಾರರನ್ನು ನೀಡಿದೆ ಎಂದು ಖ್ಯಾತ ಹಿಂದೂಸ್ತಾನಿ ಗಾಯಕ ಹಾಗೂ ಕಲಬುರಗಿ ಜಿಲ್ಲೆಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ, ಸಂಗೀತ ವಿಭಾಗದ ಬೋಧಕ ಡಾ. ಸ್ವಪ್ನಿಲ್ ಚಾಪೇಕರ್ ಹೇಳಿದರು.

ಶರಣಬಸವ ವಿಶ್ವವಿದ್ಯಾಲಯದ, ಸಂಗೀತ ವಿಭಾಗ ವತಿಯಿಂದ ಆಯೋಜಿಸಿದ್ದ “ವಿಶ್ವ ಸಂಗೀತ ದಿನಾಚರಣೆ” ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಚಾಪೇಕರ್, ಭಾರತ ರತ್ನ ಪಂಡಿತ್ ಭೀಮಸೇನ್ ಜೋಶಿ, ಪಂಡಿತ್ ಗಂಗೂಬಾಯಿ ಹಾನಗಲ್, ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಸೇರಿದಂತೆ ಕರ್ನಾಟಕದ ಅನೇಕ ಸಂಗೀತಗಾರರನ್ನು ಹೆಸರಿಸಬಹುದು ಎಂದರು.

Contact Your\'s Advertisement; 9902492681

ಅನಾದಿ ಕಾಲದಿಂದಲೂ ಸಂಗೀತವು ಸಾರ್ವಜನಿಕ ಜೀವನದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ದೇಶವನ್ನು ಆಳಿದ ರಾಜರು ಮತ್ತು ಚಕ್ರವರ್ತಿಗಳ ಆಸ್ಥಾನಗಳಲ್ಲಿ ಸಂಗೀತಗಾರರು ಪ್ರಧಾನ ಸ್ಥಾನವನ್ನು ಪಡೆದಿದ್ದರು. ಚಕ್ರವರ್ತಿ ಅಕ್ಬರನ ಆಸ್ಥಾನದಲ್ಲಿ ಪ್ರಧಾನ ಸ್ಥಾನವನ್ನು ಪಡೆದ ಪ್ರಸಿದ್ಧ ಸಂಗೀತಗಾರರಲ್ಲಿ ಪಂಡಿತ್ ತಾನಸೇನ್ ಕೂಡಾ ಒಬ್ಬರು. ಅಕ್ಬರ್ ಚಕ್ರವರ್ತಿ ಪಂಡಿತ್ ತಾನಸೇನ್ ಅವರನ್ನು ವಿಶ್ವದ ಅತ್ಯುತ್ತಮ ಸಂಗೀತಗಾರ ಎಂದು ಘೋಷಿಸಿದಾಗ, ತಾನಸೇನ್ ನಯವಾಗಿ ತಿರಸ್ಕರಿಸಿದರು. ಇಡೀ ಜಗತ್ತಿನಲ್ಲಿ ಅತ್ಯುತ್ತಮವಾದ ಸಂಗೀತಗಾರರೆಂದರೆ ನನ್ನ ಗುರು ಸಂತ ಹರಿದಾಸರು ಎಂದು ಅಕ್ಬರ್ ಚಕ್ರವರ್ತಿಗೆ ತಿಳಿಸಿದರು.

ತಾನಸೇನ್ ಅವರ ಈ ಹೇಳಿಕೆಯಿಂದ ಆಶ್ಚರ್ಯಗೊಂಡ ಚಕ್ರವರ್ತಿ ಅಕ್ಬರ್, ಸಂತ ಹರಿದಾಸರ ಸಂಗೀತವನ್ನು ಕೇಳಲು ಕುತೂಹಲದಿಂದ ಅವರು ವಾಸಿಸುತ್ತಿದ್ದ ಗುಡಿಸಲಿಗೆ ಭೇಟಿ ನೀಡಿ, ಸಂಗೀತವನ್ನು ಆಸ್ವಾದಿಸುವ ಅವಕಾಶವನ್ನು ಒದಗಿಸುವಂತೆ ವಿನಂತಿಸಿದರು. ಸಂತ ಹರಿದಾಸ್ ಅವರು ಅಕ್ಬರ್ ಚಕ್ರವರ್ತಿಯನ್ನು ಸಂಗೀತದಲ್ಲಿ ತಲ್ಲೀನಗೊಳಿಸುವಂತೆ ನುಡಿಸಿದಾಗ ಸಂತ ಹರಿದಾಸ್ ವಿಶ್ವದ ಅತ್ಯುತ್ತಮ ಸಂಗೀತಗಾರ ಎಂದು ಒಪ್ಪಿಕೊಂಡರು. ಅಕ್ವರ್, ಅಂತಹ ಸುಂದರವಾದ ನಿರೂಪಣೆಯ ರಹಸ್ಯವನ್ನು ತಿಳಿದುಕೊಳ್ಳಲು ಬಯಸಿದಾಗ ಸಂತ ಹರಿದಾಸ ನನ್ನ ಎಲ್ಲಾ ಹಾಡುಗಳನ್ನು ದೇವರಿಗೆ ಅರ್ಪಿಸುತ್ತೇನೆ ಮತ್ತು ನಾನು ಇತರರಿಗಾಗಿ ಹಾಡುವುದಿಲ್ಲ ಎಂದು ಉತ್ತರಿಸಿದ ಘಟನೆಯನ್ನು ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಪತ್ರಿಕೋದ್ಯಮ ವಿಭಾಗದ ಡೀನ್ ಶ್ರೀ ಟಿ ವಿ ಶಿವಾನಂದನ್ ಅವರು ತಮ್ಮ ಭಾಷಣದಲ್ಲಿ ಸಂಗೀತಕ್ಕೆ ಯಾವುದೇ ಅಡೆತಡೆಗಳಿಲ್ಲ, ಗಡಿಗಳಿಲ್ಲ ಮತ್ತು ಸಂಗೀತವನ್ನು ಆನಂದಿಸಲು ಯಾವುದೇ ಭಾμÉಗಳು ತಿಳಿದಿರಬೇಕಾಗಿಲ್ಲ. ಭಾμÉ, ಧರ್ಮ ಮತ್ತು ಬಣ್ಣದ ಅಡೆತಡೆಗಳನ್ನು ಮೀರಿ ಪ್ರಪಂಚದಾದ್ಯಂತ ಜನರನ್ನು ಒಂದುಗೂಡಿಸುವ ಒಂದು ಮಾಧ್ಯಮವೆಂದರೆ ಅದು ಸಂಗೀತವೆಂದು ಹೇಳಿದರು.

ನಂತರ ಡಾ. ಚಾಪೇಕರ್ ಅವರು ಸಂಗೀತ ವಿಭಾಗದ ವಿದ್ಯಾರ್ಥಿಗಳಿಗೆ ಹಿಂದೂಸ್ತಾನಿ ಸಂಗೀತದ ಕಛೇರಿಯನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಸಂಗೀತ ವಿಭಾಗದ ಡೀನ್ ಪೆÇ್ರ. ರೇವಯ್ಯ ವಸ್ತ್ರದಮಠ ಅಧ್ಯಕ್ಷತೆ ವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here