ಬೆಂಕಿ ದುರಂತದಲ್ಲಿ ಸಾವು- ನೋವು; ಶಾಸಕ ಅಲ್ಲಂಪ್ರಭು ಪಾಟೀಲ್‌ ಸಾಂತ್ವನ

0
24

ಕಲಬುರಗಿ; ನಗರದಲ್ಲಿರುವ ಅಪ್ಪನ ಕೆರೆ ಹತ್ತಿರದ ಸಪ್ತಗಿರಿ ಹೋಟಲ್‌ನಲ್ಲಿನ ಕಿಚನ್‌ ಕೋಣೆಯಲ್ಲಿ ಸಿಲಿಂಡರ್‌ ಬ್ಲಾಸ್ಟ್‌ನಲ್ಲಿ ಸಾವಾಗಿರುವ ಕಾರ್ಮಿಕ ಮಲ್ಲಿಕಾರ್ಜುನ ಜೂಜಾನವರ್‌ ಕುಟುಂಬಕ್ಕೆ ನಗರ ಶಾಸಕ ಅಲ್ಲಂಪ್ರಭು ಪಾಟೀಲ್‌ ಸಾಂತ್ವನ ಹೇಳಿದ್ದಾರೆ.

ಭಾನುವಾರ ಅವರ ರೋಜಾ ಬಡಾವಣೆಯ ಮನೆಗೆ ಭೇಟಿ ನೀಡಿ ತಂದೆ ವೈಜನಾಥ, ಸಹೋದರರು, ಸಹೋದರಿಯರು, ಬಂಧುಗಳನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬದವರು ಮಲ್ಲಿನಾಥನೇ ಮನೆಗೆ ಮುಖ್ಯನಾಗಿದ್ದ. ಆತನ ಸಾವಾಗಿದೆ. ಮನೆ ಮಂದಿಯೊಬ್ಬರಿಗೆ ನೌಕರಿ ನೀಡಬೇಕೆಂದು ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಸಿಎಂ ಪರಿಹಾರ ನಿಧಿ ಸೇರಿದಂತೆ ಎಲ್ಲಾ ಕಡೆಯಿಂದಲೂ ತಾವು ನೆರವು ದೊರಕಿಸುವುದಾಗಿಯೂ, ವಸತಿ ಯೋಜನೆಗಳಲ್ಲಿ 1 ಮನೆ ತಮಗೆ ಮಂಜೂರು ಮಾಡೋದಾಗಿಯೂ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಮ್ ಖಾನ್ ಸೇರಿದಂತೆ ಹಲವರು ಇದ್ದರು.

ನಂತರ ಅಪ್ಪನ ಕೆರೆ ಪಕ್ಕದಲ್ಲಿರುವ ಸಪ್ತಗಿರಿ ಹೋಟಲ್‌ಗೂ ಭೇಟಿ ನೀಡಿದ ಅಲ್ಲಿನ ಕಿಚನ್‌ ಕೋಣೆ, ಸಿಲಿಂಡರ್‌ ಸ್ಫೋಟಗೊಂಡ ಸ್ಥಳಗಳನ್ನು ಪರಿಶೀಲಿಸಿದರು. ಸಿಲಿಂಡರ್‌ಗಾಗಿ ಹೊರಗಡೆ ಪೈಪ್‌ ಲೈನ್‌ ಇದ್ದರೂ ಯಾಕೆ ಒಳಗಡೆ ದಾಸ್ತಾನು ಇಟ್ಟರು. ಇದೆಲ್ಲವೂ ಸುರಕ್ಷತೆಯಿಂದ ಮಾಡಬೇಕು. ಬರುವ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಪೊಲೀಸ್‌,ಅಗ್ನಿಶಾಮಕ ದಳದವರು ಜಾಗೃತಿ ಮೂಡಿಸಬೇಕೆಂದರು.

ಸಿಲಿಂಡರ್‌ ಬಳಕೆ ಅನಿವಾರ್ಯ, ಹಾಗೆಯೇ ಸುರಕ್ಷತೆ ನಿಯಮಗಳೊಂದಿಗ ಅದನ್ನು ಬಳಸುವಂತಾಗಬೇಕು. ಸ್ಫೋಟಕ್ಕೆ ಕಾರಣವಾಗುವ ಸಂಗತಿಗಳನ್ನು ವಿವರಿಸಿ ಸಿಲಿಂಡರ್‌ ಬಳಕೆಗೆ ಪೆಟ್ರೋಲಿಯಂ ಕಂಪನಿಗಳು, ಅಗ್ನಿ ಶಾಮಕ ದಳದವರು ಮುಂದಾಗುವಂತೆ ಶಾಸಕರು ಸೂಚಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here