ವಾಡಿ; ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಜಗನ್ನಾಥರಾವ್ ಜೋಶಿ ಅವರ ಜಯಂತಿ ಮತ್ತು ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನದ ಅಂಗವಾಗಿ ಪಕ್ಷದ ಮುಖಂಡರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ,ದೀಪಗಳನ್ನು ಹಚ್ಚಿ ಗೌರವ ಅರ್ಪಿಸಿದರು.
ಈ ವೇಳೆ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ ಕರ್ನಾಟಕದ ಕೇಸರಿ ಎಂದೇ ಖ್ಯಾತರಾದ ಜನಸಂಘದ ಸಂಸ್ಥಾಪಕರಲ್ಲಿ ಒಬ್ಬರಾದ ಜಗನ್ನಾಥರಾವ ಜ್ಯೋಷಿ ಅವರು ರಾಷ್ಟ್ರ ಸಮರ್ಪಿತ ನಾಯಕ,ರಾಷ್ಟ್ರಕ್ಕಾಗಿ ತಮ್ಮನೇ ಸಮರ್ಪಿಸಿಕೊಂಡವರು. ರಾಷ್ಟ್ರಕ್ಕಾಗಿ ಸಮರ್ಪಣೆ ಮಾಡಿಕೊಳ್ಳುವ ಮನೋಭಾವ ಅವರ ಒಂದು ಬದುಕಿನಿಂದ ನಾವು ಸಾಕಷ್ಟು ಕಲಿಯಬೇಕಾಗಿದೆ.ಅವರ ರಾಷ್ಟ್ರ ಪ್ರೇಮ, ಹಿಂದುತ್ವ ಅಭಿಮಾನ, ಸಮಾಜ ಏಳಿಗೆ ಇವು ಜಗನ್ನಾಥರಾವ ಜೋಶಿಯವರ ವ್ಯಕ್ತಿತ್ವದ ಭಾಗಗಳಾಗಿದ್ದವು.
ಜನ ಸಂಘದ ಸಂಸ್ಥಾಪಕರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ನೆಹರೂ ಸರ್ಕಾರ ಪಾಕಿಸ್ಥಾನದ ಬಗ್ಗೆ ತಳೆದಿದ್ದ ಸಿಎಎಗೆ ವಿರೋಧ ವ್ಯಕ್ತಪಡಿಸಿದರು.ಪಾಕಿಸ್ಥಾನದಲ್ಲಿ ಹಿಂದುಗಳ ಮೇಲೆ ನಡದ ದೌರ್ಜನ್ಯಕ್ಕೆ ಕಿಡಿಕಾರಿ ಮಂತ್ರಿ ಮಂಡಲಕ್ಕೆ ರಾಜೀನಾಮೆ ನೀಡಿದರು. ನೀತಿ, ತತ್ವದ ಆಧಾರದ ಮೇಲೆ ಮಂತ್ರಿ ಪದವಿ ತ್ಯಾಗ ಮಾಡಿದ ಸ್ವಾತಂತ್ರ್ಯ ಭಾರತದ ಪ್ರಪ್ರಥಮ ರಾಷ್ಟ್ರ ನಾಯಕ ಶ್ಯಾಮ್ ಪ್ರಸಾದ್ ಮುಖರ್ಜಿಯವರು.
ಆಗಿನ ಸಂಧರ್ಭದಲ್ಲಿ ದೇಶದ ಪರಿಸ್ಥಿತಿ ಅಧೋಗತಿಗೆ ಇಳಿದಾಗ, ರಾಜಕೀಯ ಅಸ್ಥಿರತೆ, ಆಡಳಿತ ದೋಷ ಕಂಡಾಗ ಅವಿರತ ದುಡಿದು ಭಾರತೀಯ ಜನಸಂಘ ಎಂಬ ಹೊಸ ಪಕ್ಷಕ್ಕೆ ನಾಂದಿ ಹಾಡಿದರು. 1953 ಜುಲೈ 23 ರಂದು ಕಾಶ್ಮೀರವನ್ನು ಭಾರತದಲ್ಲಿ ಉಳಿಸಲು ನಡೆಸಿದ ಹೋರಾಟದಲ್ಲಿ ಡಾ ಮುಖರ್ಜಿಯವರು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದರು.
ದೇಶದ ಏಕತೆಗಾಗಿ ಶ್ರಮಿಸಿದ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಆದರ್ಶಗಳನ್ನು ಅವರ ಬಲಿದಾನ ದಿನವಾದ ಇಂದು ನೆನೆಯೋಣ.
ದೇಶದ ಅಖಂಡತೆಗೆ, ಸಾರ್ವಭೌಮತ್ವದ ಉಳಿಕೆಗೆ ಬಲಿದಾನಗೈದ ಅವರ ತ್ಯಾಗ ಬಲಿದಾನ ವ್ಯರ್ಥವಾಗದಂತೆ ದೇಶದ ಅಖಂಡತೆಯನ್ನು ಉಳಿಸಿ, ದೇಶವನ್ನು ಕಟ್ಟಿ ಬೆಳೆಸುವ ಪ್ರಯತ್ನದಲ್ಲಿ ತೊಡಗೋಣ ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ರವಿ ನಾಯಕ,ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ, ಮುಖಂಡರಾದ ಗಿರಿಮಲ್ಲಪ್ಪ ಕಟ್ಟಿಮನಿ,ಅರ್ಜುನ ಕಾಳೆಕರ,ಶರಣಗೌಡ ಚಾಮನೂರ, ಭೀಮರಾವ ದೊರೆ,ಶಿವಶಂಕರ ಕಾಶೆಟ್ಟಿ,ಹರಿ ಗಲಾಂಡೆ, ದತ್ತ ಖೈರೆ,ಅಯ್ಯಣ್ಣ ದಂಡೋತಿ, ಮಲ್ಲಿಕಾರ್ಜುನ ಸಾತಖೇಡ,ಕಾಶಿನಾಥ ಶೆಟಗಾರ, ಅಂಬರೀಶ್ ರಡ್ಡಿ ಸೇರಿದಂತೆ ಇತರರು ಇದ್ದರು.