ಕಲಬುರಗಿ: ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಹಾಗೂ ಅಜಯಕುಮಾರ್ ಸ್ಪೋಟ್ರ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ನಗರದ ಅಳಂದ ಚೆಕ್ ಪೆÇೀಸ್ಟ್ ಹತ್ತಿರದ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ಎರಡು ದಿನಗಳ ಟ್ರೈನಿಂಗ್ ಕ್ಯಾಂಪ್ ಹಾಗೂ ಬ್ಲಾಕ್ ಬೆಲ್ಟ್ ಮತ್ತು ಕಲರ್ ಬೆಲ್ಟ್ ಎಕ್ಸಾಮ್ ಏರ್ಪಡಿಸಲಾಯಿತು.
ಬೆಂಗಳೂರಿನಿಂದ ಆಗಮಿಸಿದ ಮಾಸ್ಟರ್ ಶ್ರೀನಿವಾಸ್ ರವರು ವಿದ್ಯಾರ್ಥಿಗಳ ಪರೀಕ್ಷೆಯನ್ನು ವೀಕ್ಷಿಸಿ ಒಬ್ಬ ವಿದ್ಯಾರ್ಥಿಗೆ ಬ್ಲಾಕ್ ಬೆಲ್ಟ್ ಹಾಗೂ ಅನೇಕ ವಿದ್ಯಾರ್ಥಿಗಳಿಗೆ ಕಲರ್ ಬೆಲ್ಟ್ ಹಾಗೂ ಕ್ಯಾಮ್ ಸರ್ಟಿಫಿಕೇಟ್ ವಿತರಿಸಿದರು.
ಇದೇ ಸಂದರ್ಭದಲ್ಲಿ ಮೂರು ಜನ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಬಹುಮಾನ ಗೆದ್ದ ವಿದ್ಯಾರ್ಥಿಗಳಿಗೆ ಇಂಡಿಯನ್ ಕರಾಟೆ ರಾಜ್ಯ ಸಂಸ್ಥೆಯಿಂದ ಗೌರವ ದನ ನೀಡಿ ಗೌರವಿಸಲಾಯಿತು.
ಆಶೀರ್ವಾದ ಕಲ್ಯಾಣ ಮಂಟಪದ ಮಾಲೀಕರಾದ ಹನುಮಂತ್ ರೆಡ್ಡಿ, ಡಿಸ್ಟ್ರಿಕ್ಟ್ ಚೀಫ್ ಕೋಚ್ ರಾಜವರ್ಧನ್ ಜಿ ಚೌವ್ಜಾಣ, ಬೆಂಗಳೂರಿನಿಂದ ಆಗಮಿಸಿದ ದಾದಾಸಾಹೇಬ್, ಶ್ರೀಕಾಂತ್ ಪೀಸಾಳ, ಅಂಬರೀಶ್ ಜೋಗಿ, ಪ್ರತಾಪ್ ಸಿಂಗ್ ಪವರ್, ಪ್ರೇಮ್ ಕುಮಾರ್ ಸೇರಿದಂತೆ ಕರಾಟೆ ವಿದ್ಯಾರ್ಥಿಗಳು ಪೆÇೀಷಕರು ಉಪಸ್ಥಿತರಿದ್ದರು.